ETV Bharat / state

ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಟವರ್​​ ಏರಿದ ಭೂಪ! - ಕೊಳ್ಲೇಗಾಲದಲ್ಲಿ ಟವರ್ ಏರಿ ವ್ಯಕ್ತಿಯಿಂದ ಆತ್ಮಹತ್ಯೆ ಬೆದರಿಕೆ

ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬ ಮೊಬೈಲ್ ಟವರ್ ಹತ್ತಿದ್ದಾನೆ. ಜಿಲ್ಲೆಯ ಕೊಳ್ಳೇಗಾಲ ಸಮೀಪದ ಸುರಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ರವಿ ಎಂಬಾತ ಟವರ್ ಏರಿ ಆತ್ಮಹತ್ಯೆ ಬೆದರಿಕೆ ಒಡ್ಡಿದ್ದಾನೆ.

ಕೆಲಸದಿಂದ ತೆಗೆದುಹಾಕಿದ್ದಕ್ಕೆ ಟವರ್ ಏರಿದ ಭೂಪ..!
author img

By

Published : Nov 2, 2019, 8:17 PM IST

ಚಾಮರಾಜನಗರ: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿದ್ದಾನೆ. ಜಿಲ್ಲೆಯ ಕೊಳ್ಳೇಗಾಲ ಸಮೀಪದ ಸುರಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ರವಿ ಎಂಬಾತ ಟವರ್ ಏರಿ ಆತ್ಮಹತ್ಯೆ ಬೆದರಿಕೆ ಒಡ್ಡಿದ್ದಾನೆ. ರವಿಯು ಅದೇ ಗ್ರಾಮದ ಟೆಲಿಫೋನ್ ಎಕ್ಸ್​ಚೇಂಜ್​ನಲ್ಲಿ 17 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ. ಆದರೆ ಶುಕ್ರವಾರ ಆತನನ್ನು ಇದ್ದಕ್ಕಿಂದ್ದಂತೆ ನೌಕರಿಯಿಂದ ತೆಗೆದು ಹಾಕಿದ್ದಾರೆ ಎನ್ನಲಾಗಿದೆ.

ಹಾಗೆಯೇ ತನ್ನ ಸಹೋದ್ಯೋಗಿ ಬಸವಣ್ಣ ಎಂಬಾತನಿಗೆ ರವಿಯು 50 ಸಾವಿರ ರೂಪಾಯಿ ಸಾಲ ನೀಡಿದ್ದನಂತೆ. ಆ ವ್ಯಕ್ತಿ ಸಾಲ ಹಿಂದಿರುಗಿಸದೇ ಸತಾಯಿಸಿದ್ದಾನೆ. ಈ ಎರಡು ಘಟನೆಗಳಿಂದ ಮನನೊಂದು ರವಿ ಟವರ್ ಏರಿದ್ದಾನೆ. ಇನ್ನು ವಿಷಯ ತಿಳಿದ ಕೊಳ್ಳೇಗಾಲ ಸಿಪಿಐ ಶ್ರೀಕಾಂತ್ ಸ್ಥಳಕ್ಕೆ ಭೇಟಿ ನೀಡಿ, ಸಾಲ ಹಿಂತಿರುಗಿಸಿಕೊಡುವ ಭರವಸೆ ನೀಡಿದ್ದಾರೆ. ಅಲ್ಲದೆ ಪತ್ನಿಯಿಂದ ಫೋನ್ ಮೂಲಕ ಮಾತನಾಡಿಸಿ ಮನವೊಲಿಸಿದ್ದಾರೆ. ಬಳಿಕ ಇನ್ನು ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಆತನನ್ನು ಕೆಳಗಿಳಿಸಲಾಗಿದೆ.

ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಟವರ್ ಏರಿದ ಭೂಪ!

Intro:ಕೆಲಸ ಇಲ್ಲಾ- ಸಾಲ ಹಿಂತಿರುಗಿಸುತ್ತಿಲ್ಲವೆಂದು ಟವರ್ ಹತ್ತಿದ ಭೂಪ!

ಚಾಮರಾಜನಗರಕ್ಕೆ: ಉದ್ಯೋಗದಿಂದ ತೆಗೆದಿದ್ದಕ್ಕೆ ಹಾಗೂ ತಾನು ಕೊಟ್ಟ ಸಾಲ ಹಿಂತಿರುಗಿಸದೇ ಸತಾಯಿಸುತ್ತಿದ್ದಾನೆಂದು ವ್ಯಕ್ತಿವೋರ್ವ ಮೊಬೈಲ್ ಟವರ್ ಹತ್ತಿ ಆತಂಕ ಸೃಷ್ಟಿಸಿದ ಘಟನೆ ಕೊಳ್ಳೇಗಾಲದ ಸುರಪುರದಲ್ಲಿ ನಡೆದಿದೆ.

Body:ಸುರಪುರ ಗ್ರಾಮದ ರವಿ ಎಂಬಾತ ಟವರ್ ಹತ್ತಿ ಆತ್ಮಹತ್ಯೆ ಬೆದರಿಕೆ ಒಡ್ಡಿದವನು. ಅದೇ ಗ್ರಾಮದ ಟೆಲಿಫೋನ್ ಎಕ್ಸ್ಚೇಂಜ್ ನಲ್ಲಿ ೧೭ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ರವಿಯನ್ನು ಶುಕ್ರವಾರ ನೌಕರಿಯಿಂದ ತೆಗೆದುಹಾಕಿದ್ದಾರೆ. ಇನ್ನು, ತನ್ನ ಸಹೋದ್ಯೋಗಿ ಬಸವಣ್ಣ ಎಂಬಾತನಿಗೆ 50 ಸಾವಿರ ರೂ. ಸಾಲ ನೀಡಿ ಆತನೂ ಹಿಂತಿರುಗಿಸದೇ ಸತಾಯಿಸುತ್ತಿದ್ದರಿಂದ ಮನನೊಂದು ಟವರ್ ಹತ್ತಿ ಆತ್ಮಹತ್ಯೆ ಬೆದರಿಕೆ ಒಡ್ಡಿದ್ದಾನೆ.

ವಿಷಯ ಅರಿತ ಕೊಳ್ಳೇಗಾಲ ಸಿಪಿಐ ಶ್ರೀಕಾಂತ್ ಸ್ಥಳಕ್ಕಾಗಮಿಸಿ ಸಾಲ ಹಿಂತಿರಿಗಿಸುವ ಭರವಸೆಯನ್ನು ಕೊಡಿಸಿ, ಪತ್ನಿ ಬಳಿಯಿಂದಲೂ ಫೋನ್ ಮೂಲಕ ಮಾತನಾಡಿಸಿ ಮನವೊಲಿಸಿ ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಆತನನ್ನು ಕೆಳಗಿಳಿಸಿದ್ದಾರೆ.

Conclusion:ಪ್ರತಿಭಟನೆಗೆ, ಆತ್ಮಹತ್ಯೆಯ ಬೆದರಿಕೆಗಳಿಗೆ ಮೊಬೈಲ್ ಟವರ್ ನ್ನು ಆಶ್ರಯಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.