ಚಾಮರಾಜನಗರ: ನೆರೆಮನೆಯ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವಿಶೇಷ ಚೇತನ ವೃದ್ಧನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗ್ರಾಮದ ರಂಗಶೆಟ್ಟಿ (70) ಅತ್ಯಾಚಾರ ಮಾಡಲು ಯತ್ನಿಸಿದ ವೃದ್ಧ. ಜಿಲ್ಲೆಯ ಯಳಂದೂರು ತಾಲೂಕಿನ ಕೊಮ್ಮನಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬಾಲಕಿ, ವೃದ್ಧನ ಮನೆಯ ಪಕ್ಕದಲ್ಲಿಯೇ ವಾಸಿಸುತ್ತಿದ್ದಳು. ಬಾಲಕಿಯೊಬ್ಬಳೇ ಇರುವುದನ್ನ ಅರಿತ ವೃದ್ಧ, ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಈ ವೇಳೆ ಬಾಲಕಿ ತಂದೆ ಬರುವುದನ್ನು ಗಮನಿಸಿ ವೃದ್ಧ ಸುಮ್ಮನಾಗಿದ್ದಾನೆ.
ಬಳಿಕ ಬಾಲಕಿ ಮನೆಯವರ ಬಳಿ ನಡೆದ ವಿಷಯ ತಿಳಿಸಿದ್ದಾಳೆ. ದೈಹಿಕವಾಗಿ ನ್ಯೂನತೆ ಹೊಂದಿರುವ ರಂಗಶೆಟ್ಟಿ ಕಾಲು ಸ್ವಾಧೀನ ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಸದ್ಯ, ಪೋಸ್ಕೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ವೃದ್ಧನನ್ನು ಯಳಂದೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.