ಚಾಮರಾಜನಗರ: ಕೃಷಿ ಸಚಿವ ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮವನ್ನು ಇಂದು ಗುಂಡ್ಲುಪೇಟೆ ತಾಲೂಕಿನ ಮುಂಟಿಪುರದ ರಾಜಶೇಖರ್ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ರೈತರ ಜಮೀನಿಗೆ ಭೇಟಿ ನೀಡಿದ ಬಿ.ಸಿ.ಪಾಟೀಲ್ ಮೊದಲಿಗೆ ರಾಶಿ ಪೂಜೆ ಮಾಡಿ ಧಾನ್ಯ ತುಂಬಿ, ಬಳಿಕ ಮಜ್ಜಿಗೆ ಕಡೆದು ಗಮನ ಸೆಳೆದರು. 35 ಎಕರೆಯಷ್ಟು ಜಮೀನಿನಲ್ಲಿ ಬೆಳೆದಿದ್ದ ಬಾಳೆ, ಈರುಳ್ಳಿ, ಕಲ್ಲಂಗಡಿ, ಅಲಸಂದೆ, ಬೀಟ್ರೂಟ್, ತೆಂಗು ಬೆಳೆಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.
ಇದಾದ ಬಳಿಕ ಟ್ರ್ಯಾಕ್ಟರ್ನಲ್ಲಿ ಉಳುಮೆ, ತೆಂಗಿನ ಗರಿಗಳನ್ನು ಕತ್ತರಿಸಿದ್ದು, ಕೃಷಿ ಹೊಂಡಕ್ಕೆ ಮೀನುಮರಿಗಳನ್ನು ಬಿಟ್ಟು, ಹಸುಗಳಿಗೆ ಯಂತ್ರದ ಸಹಾಯದಿಂದ ಜೋಳದ ಕಡ್ಡಿಗಳನ್ನು ಕತ್ತರಿಸುವ ಮೂಲಕ ಕೃಷಿ ಕುರಿತು ಮಾಹಿತಿ ಪಡೆದರು.
ಈ ವೇಳೆ ಜಿಲ್ಲಾ ಬಿಜೆಪಿ ಮುಖಂಡರು, ಶಾಸಕ ನಿರಂಜನಕುಮಾರ್, ಡಿಸಿ ಡಾ. ಎಂ.ಆರ್.ರವಿ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ರ್ಯಾಲಿಗೆ ತೆರಳುತ್ತಿದ್ದ ಟ್ರಾಕ್ಟರ್ ತಡೆದ ಪೊಲೀಸರು : ರೈತರ ಪ್ರತಿಭಟನೆ