ETV Bharat / state

ಚಾಮರಾಜನಗರದಲ್ಲಿ 244 ಮಕ್ಕಳು ಸೇರಿ 752 ಮಂದಿಗೆ ಕೋವಿಡ್.. ವ್ಯಾಕ್ಸಿನ್ ಪಡೆಯದ ವ್ಯಕ್ತಿ ಸೋಂಕಿಗೆ ಬಲಿ

author img

By

Published : Jan 23, 2022, 9:14 PM IST

ಚಾಮರಾಜನಗರ ಜಿಲ್ಲೆಯಲ್ಲಿ ಭಾನುವಾರ 244 ಮಕ್ಕಳು ಸೇರಿ 752 ಮಂದಿಗೆ ಕೋವಿಡ್ ದೃಢಪಟ್ಟಿದೆ.

ಚಾಮರಾಜನಗರ
ಚಾಮರಾಜನಗರ

ಚಾಮರಾಜನಗರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ದ್ವಿಗುಣಗೊಂಡಿದ್ದು, ಇಂದು ಹೊಸದಾಗಿ 752 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 2,579ಕ್ಕೆ ಏರಿಕೆಯಾಗಿದೆ‌.

ಇಂದಿನ ಹೊಸ ಪ್ರಕರಣಗಳಲ್ಲಿ ಹೊಂಡರಬಾಳಿನಲ್ಲಿರುವ ನವೋದಯ ಶಾಲೆಯ 85 ಮಂದಿ ವಿದ್ಯಾರ್ಥಿಗಳು ಸೇರಿದಂತೆ 244 ಮಂದಿ ಮಕ್ಕಳಿಗೆ ಕೊರೊನಾ ವಕ್ಕರಿಸಿದ್ದು, ಶಾಲಾ ವಿದ್ಯಾರ್ಥಿಗಳಲ್ಲೇ ಹೆಚ್ಚು ಸೋಂಕು ಬಾಧಿಸುತ್ತದೆ‌. ಬಹುತೇಕ ಎಲ್ಲರೂ ಹೋಂ ಐಸೋಲೇಷನ್​​ನಲ್ಲಿದ್ದು ಆರೋಗ್ಯವಾಗಿದ್ದಾರೆಂದು ಆರೋಗ್ಯ ಇಲಾಖೆ ತಿಳಿಸಿದೆ.

ಇಂದು 83 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು,1,955 ಮಂದಿ ಹೋಂ ಐಸೋಲೇಷನ್​​ನಲ್ಲಿದ್ದರೆ, ಓರ್ವ ಸೋಂಕಿತ ಐಸಿಯುನಲ್ಲಿ ದಾಖಲಾಗಿದ್ದಾರೆ. 9,042 ಮಂದಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ಇರಿಸಿದ್ದು 3 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ಟೆಸ್ಟ್‌ ನಡೆಸಲಾಗಿದೆ‌.

ವ್ಯಾಕ್ಸಿನ್ ಪಡೆಯದ ವ್ಯಕ್ತಿ ಸಾವು: ಮೂರನೇ ಅಲೆಯಲ್ಲಿ ಕೊರೊನಾ ಸೋಂಕಿಗೆ ವ್ಯಕ್ತಿಯೊಬ್ಬರು ಇಂದು ಬಲಿಯಾಗಿದ್ದಾರೆ‌‌. ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆ ಗ್ರಾಮದ 46 ವರ್ಷದ ವ್ಯಕ್ತಿಯೊಬ್ಬರು ಅಸುನೀಗಿದ್ದು, ಇವರು ವ್ಯಾಕ್ಸಿನ್ ಪಡೆದಿರಲಿಲ್ಲ ಎಂದು ಡಾ.ಮಹೇಶ್ ತಿಳಿಸಿದ್ದಾರೆ.

ಮೂರನೇ ಅಲೆಯಲ್ಲಿ ಇದುವರೆಗೆ ಮೂವರು ಸೋಂಕಿಗೆ ಮೃತಪಟ್ಟಿದ್ದು, ಒಬ್ಬರೂ ವ್ಯಾಕ್ಸಿನ್ ಪಡೆದಿರಲಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.