ETV Bharat / state

ಚಾಮರಾಜನಗರದಲ್ಲಿಂದು 73 ಮಂದಿಗೆ ಕೊರೊನಾ: ಮಹಾಮಾರಿಗೆ ಇಬ್ಬರು ಬಲಿ‌

ಜಿಲ್ಲೆಯಲ್ಲಿ ಇಂದು ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಂತಿದೆ.

Chamarajanagara
Chamarajanagara
author img

By

Published : Oct 4, 2020, 7:09 PM IST

ಚಾಮರಾಜನಗರ: ಜಿಲ್ಲೆಯಲ್ಲಿಂದು 73 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 4,415ಕ್ಕೆ ಏರಿಕೆಯಾಗಿದೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.

ಇಂದು 42 ಮಂದಿ ಜಿಲ್ಲೆಯಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 883 ಸೋಂಕಿತ ಪ್ರಕರಣಗಳಿವೆ.

ಇದರಲ್ಲಿ 38 ಮಂದಿ ಸೋಂಕಿತರು ಐಸಿಯುನಲ್ಲಿದ್ದು, 392 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ‌. 803 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.

ಮೃತರ ವಿವರ:

ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದ 35 ವರ್ಷ ಪೊಲೀಸ್ ಸಿಬ್ಬಂದಿ ಸೋಂಕು ಕಾಣಿಸಿಕೊಂಡು ಕಳೆದ 30 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

ಇನ್ನು, ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ 93 ವರ್ಷದ ವೃದ್ಧ ಕಳೆದ 28 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ‌.

ಇನ್ನು, ಮೃತರ ಅಂತ್ಯಸಂಸ್ಕಾರವನ್ನು ಸ್ವಯಂ ಸೇವಕರು ಕೋವಿಡ್ ನಿಯಮಾನುಸಾರ ಗೌರವಯುಯವಾಗಿ ನೆರವೇರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.