ಚಾಮರಾಜನಗರ: ಇಂದು ಜಿಲ್ಲೆಯಲ್ಲಿ ಹೊಸದಾಗಿ 42 ಕೋವಿಡ್ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿ ಸೋಂಕಿತರ ಸಂಖ್ಯೆ 1682ಕ್ಕೆ ತಲುಪಿದೆ. 52 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಚಾಮರಾಜನಗರ ತಾಲೂಕಿನ 22 ಮಂದಿ, ಕೊಳ್ಳೇಗಾಲದ 9, ಗುಂಡ್ಲುಪೇಟೆಯ 8, ಯಳಂದೂರಿನ 2, ಹನೂರು ತಾಲೂಕಿನ ಓರ್ವ ವ್ಯಕ್ತಿಯಲ್ಲಿ ಸೋಂಕು ತಗುಲಿರುವುದು ವರದಿಯಾಗಿದೆ.
52 ಮಂದಿ ಗುಣಮುಖರಾಗಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದವರಲ್ಲಿ 2, 17, 19, 11, 14, 16 ವರ್ಷದ ಮಕ್ಕಳು ಸೇರಿದಂತೆ 87 ವರ್ಷದ ವೃದ್ಧರೊಬ್ಬರು ಇದ್ದಾರೆ. ಈವರೆಗೆ ಒಟ್ಟು 1248 ಸೋಂಕಿತರು ಕೊರೊನಾ ಜಯಿಸಿ ಮನೆಗೆ ಮರಳಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 403ಕ್ಕೆ ಇಳಿಕೆಯಾಗಿದ್ದು, 149 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ. 395 ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. 31 ಮಂದಿ ಮೃತಪಟ್ಟಿದ್ದಾರೆ.