ಚಾಮರಾಜನಗರ: ಜಿಲ್ಲೆಯಲ್ಲಿಂದು 42 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 3,583ಕ್ಕೆ ಏರಿಕೆಯಾಗಿದೆ.
ಇಂದು 59 ಮಂದಿ ಗುಣಮುಖರಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 596 ಆಗಿದೆ. 24 ಸೋಂಕಿತರು ಐಸಿಯುನಲ್ಲಿದ್ದು 275 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. 1,210 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಯಳಂದೂರು ಪಟ್ಟಣದ 58 ವರ್ಷದ ವ್ಯಕ್ತಿಯೊಬ್ಬರು ಸೆ.19 ರಂದು ಹೃದಯ ಸಂಬಂಧಿ ಕಾಯಿಲೆ ಸಂಬಂಧ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೆ.21ರಂದು ಮೃತಪಟ್ಟಿದ್ದಾರೆ. ನಿಧನದ ಬಳಿಕ ಕೋವಿಡ್ ಇರುವುದು ದೃಢಪಟ್ಟಿದೆ.
ಕೊರೊನಾ ಹಾಗೂ ಕೊರೊನೇತರ ಕಾರಣದಿಂದ ಜಿಲ್ಲೆಯಲ್ಲಿ ಇದುವರೆಗೆ 79 ಮಂದಿ ಅಸುನೀಗಿದ್ದಾರೆ. ಇಂದು ಒಬ್ಬರ ಅಂತ್ಯ ಸಂಸ್ಕಾರ ಕೋವಿಡ್ ನಿಯಮಾನುಸಾರ ಸ್ವಯಂ ಸೇವಕರು ನೆರವೇರಿಸಿದ್ದಾರೆ.