ETV Bharat / state

ಕೆಎಸ್​ಆರ್​ಟಿಸಿ ಚಾಮರಾಜನಗರ ವಿಭಾಗಕ್ಕೆ 30 ಕೋಟಿ ರೂ.ನಷ್ಟ - ಕೆಎಸ್​ಆರ್​ಟಿಸಿ ಚಾಮರಾಜನಗರ ವಿಭಾಗ

ಲಾಕ್​​​ಡೌನ್​​ ವೇಳೆ ಕೆಎಸ್​ಆರ್​ಟಿಸಿ ಚಾಮರಾಜನಗರ ವಿಭಾಗಕ್ಕೆ 30 ಕೋಟಿ ರೂ.‌ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

chamarajanagar
ಕೆಎಸ್​ಆರ್​ಟಿಸಿ ಚಾಮರಾಜನಗರ ವಿಭಾಗ
author img

By

Published : Jun 23, 2021, 10:48 AM IST

ಚಾಮರಾಜನಗರ: ಅನ್​​ಲಾಕ್ ಆದರೂ ಮಧ್ಯಾಹ್ನದ ಬಳಿಕ ಪ್ರಯಾಣಿಕರು‌ ಬರಲು ಹಿಂದೇಟು ಹಾಕುತ್ತಿದ್ದು ಮಂಗಳವಾರ ಕೆಎಸ್​​ಆರ್​ಟಿಸಿ ಚಾಮರಾಜನಗರ ವಿಭಾಗಕ್ಕೆ 1 ಲಕ್ಷ 20 ಸಾವಿರ ರೂ.‌ಸಂಗ್ರಹವಾಗಿದೆ.

ಅನ್​​ಲಾಕ್​​ನಲ್ಲಿ ಬಸ್ ಸಂಚಾರದ ಕುರಿತು ವಿಭಾಗೀಯ ನಿಯಂತ್ರಣಾಧಿಕಾರಿ‌ ಶ್ರೀನಿವಾಸ್ ಈಟಿವಿ ಭಾರತದೊಂದಿಗೆ ಮಾತನಾಡಿ, ಲಾಕ್​​​ಡೌನ್​​ ಅವಧಿಯಲ್ಲಿ ನಮ್ಮ‌ ವಿಭಾಗಕ್ಕೆ 30 ಕೋಟಿ ರೂ.‌ ನಷ್ಟ ಉಂಟಾಗಿದೆ. ಮೈಸೂರಿಗೆ‌ ಇನ್ನೂ ಕಾರ್ಯಾಚರಣೆ ಆರಂಭವಾಗಿಲ್ಲ. ಬೆಂಗಳೂರಿಗೆ ಬೇಡಿಕೆಗೆ ತಕ್ಕಂತೆ 30 ಬಸ್, ತಿರುಪತಿಗೆ 3 ಹಾಗೂ ಜಿಲ್ಲೆಯ ಪಟ್ಟಣ ಮತ್ತು ಹೋಬಳಿ ಕೇಂದ್ರಗಳಿಗೆ 10 ಬಸ್​​ಗಳು ಕಾರ್ಯಾಚರಣೆ ನಡೆಸಿವೆ ಎಂದು ತಿಳಿಸಿದ್ದಾರೆ.

120 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿ ಟ್ರಿಪ್‌ ನಂತರ ಬಸ್‌ಗಳನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಮೈಸೂರಿಗೆ ಮತ್ತು ಗ್ರಾಮಾಂತರ ಭಾಗಕ್ಕೆ ಬಸ್ ಸಂಚಾರ ಆರಂಭಗೊಂಡಾಗ ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.