ಚಾಮರಾಜನಗರ: ಕೊರೊನಾ ಎರಡನೇ ಅಲೆಯ ಅಬ್ಬರ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ನಿನ್ನೆ 245 ಹೊಸ ಕೋವಿಡ್ ಕೇಸ್ ಪತ್ತೆಯಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 1,129ಕ್ಕೆ ಏರಿಕೆಯಾಗಿದೆ.
ನಿನ್ನೆ 78 ಮಂದಿ ಗುಣಮುಖರಾಗಿದ್ದಾರೆ. 38 ಮಂದಿ ಐಸಿಯುನಲ್ಲಿದ್ದು, 788 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. 3,185 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ದೃಢಪಟ್ಟಿರುವ ಹೊಸ ಕೋವಿಡ್ ಕೇಸ್ಗಳಲ್ಲಿ ಚಾಮರಾಜನಗರದ 133, ಗುಂಡ್ಲುಪೇಟೆಯ 38, ಕೊಳ್ಳೇಗಾಲದ 37, ಹನೂರಿನ 21, ಯಳಂದೂರಿನ 16 ವ್ಯಕ್ತಿಗಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,645 ಮಂದಿಗೆ ಲಸಿಕೆ ನೀಡಲಾಗಿದೆ.
ಇಬ್ಬರು ಸಾವು: ಕೊಳ್ಳೇಗಾಲ ತಾಲೂಕಿನ ಕೆ.ಗುಂಡಾಪುರ ಗ್ರಾಮದ 40 ವರ್ಷದ ವ್ಯಕ್ತಿ ಕಳೆದ 21ರಂದು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ 22ರಂದು ಮೃತಪಟ್ಟಿದ್ದಾರೆ. ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಗ್ರಾಮದ 34 ವರ್ಷದ ವ್ಯಕ್ತಿ ಕಳೆದ 15ರಂದು ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಅಸುನೀಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 121 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಓದಿ: ಕೊರೊನಾದಿಂದಾಗಿ ನಂಬಿಕೆ ಕಳೆದುಕೊಳ್ಳಬೇಡಿ; ನಿರ್ಗಮಿತ ಸಿಜೆಐ ಬೊಬ್ಡೆ