ETV Bharat / state

ಪತ್ನಿ ಜೊತೆ 'ಆ ಟೈಮಲ್ಲಿ' ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಯುವಕ: ಸೌದೆಯಲ್ಲಿ ಹೊಡೆದು ಕೊಂದ ಪತಿ - ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದವನನ್ನು ಕೊಂದ ಪತಿ

ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವಕನೋರ್ವನನ್ನು ಆಕೆಯ ಗಂಡ ಸೌದೆಯಲ್ಲಿ ಹೊಡೆದು ಹತ್ಯೆ ಮಾಡಿರುವ ಪ್ರಕರಣ ಚಾಮರಾಜನಗರದ ಹನೂರು ತಾಲೂಕಿನ ಗೆಜ್ಜಲನತ್ತ ಗ್ರಾಮದಲ್ಲಿ ನಡೆದಿದೆ.

22 years old murdered in chamrajnagar
ಯುವಕ ಕೊಲೆ
author img

By

Published : Dec 7, 2020, 11:32 AM IST

ಚಾಮರಾಜನಗರ: ಪತ್ನಿಯೊಟ್ಟಿಗೆ ರಾಸಲೀಲೆ ಆಡುವಾಗ ಸಿಕ್ಕಿಬಿದ್ದ ಯುವಕನನ್ನು ಆಕೆಯ ಪತಿ ಹೊಡೆದು ಕೊಂದಿರುವ ಘಟನೆ ಹನೂರು ತಾಲೂಕಿನ ಗೆಜ್ಜಲನತ್ತ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಗೆಜ್ಜಲನತ್ತ ಗ್ರಾಮದ ಅರವಿಂದ್‌ಕುಮಾರ್(22) ಕೊಲೆಯಾದ ಯುವಕ. ಅದೇ ಗ್ರಾಮದ ಮುರುಗೇಶ ಎಂಬಾತ ಕೊಲೆ ಮಾಡಿರುವ ಆರೋಪಿ. ಮುರುಗೇಶ ಅದೇ ಗ್ರಾಮದ ಮಹಿಳೆಯೊಬ್ಬಳನ್ನು 17 ವರ್ಷದ ಹಿಂದೆ ವಿವಾಹವಾಗಿದ್ದನು. ಇವರಿಗೆ 15 ವರ್ಷದ ಮಗಳಿದ್ದು, ಮುರುಗೇಶ ಚಾಮರಾಜನಗರ ಸಮೀಪದ ಕ್ವಾರೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.

ಮುರುಗೇಶ್​ ಪತ್ನಿಗೆ ಗೆಜ್ಜಲನತ್ತ ನಿವಾಸಿ ಅರವಿಂದ್ ಕುಮಾರ್ ಜೊತೆ ವಿವಾಹೇತರ ಸಂಬಂಧ ಇತ್ತು ಎನ್ನಲಾಗಿದೆ. ಇನ್ನು ಕೆಲಸ ಮುಗಿಸಿ ಮನೆಗೆ ಹಿಂತಿರುಗಿದ ವೇಳೆ, ಹೆಂಡತಿಯ ರಾಸಲೀಲೆ ಕಂಡು ಕುಪಿತನಾದ ಮುರುಗೇಶ ಸೌದೆಯಿಂದ ಹೊಡೆದು ಅರವಿಂದನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಸದ್ಯ, ರಾಮಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಮುರುಗೇಶ್ ಪರಾರಿಯಾಗಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.