ETV Bharat / state

ಕಬ್ಬು ಕಟಾವು ಮಾಡುವಾಗ ರೈತನ ಕಾಲು ಹಿಡಿದ ಚಿರತೆ ಮರಿಗಳು... ಚಿರತೆಗೆ ಆಟ- ರೈತನಿಗೆ ಸಂಕಟ! - ಚಾಮರಾಜನಗರ ಲೆಟೆಸ್ಟ್ ನ್ಯೂಸ್

ಗಡಿಭಾಗವಾದ ತಾಳವಾಡಿಯ ದೊಡ್ಡಮುತ್ತಿನಕೆರೆಯಲ್ಲಿ 2 ಚಿರತೆಮರಿಗಳು ಸಿಕ್ಕಿಬಿದ್ದಿವೆ. ಅವುಗಳನ್ನು ಇದ್ದ ಸ್ಥಳದಲ್ಲೇ ಇರಿಸಿದ್ದು, ರಾತ್ರಿ ವೇಳೆ ತಾಯಿ ಚಿರತೆ ಬಂದು ಹೊತ್ತೊಯ್ಯಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ರೈತರಿಗೆ ತಿಳಿಸಿದ್ದಾರೆ.

2 Leopards caught in Chamarajanagar
ಕಬ್ಬು ಕಟಾವು ಮಾಡುವಾಗ ರೈತನ ಕಾಲು ಹಿಡಿದ ಚಿರತೆ ಮರಿಗಳು... ಚಿರತೆಗೆ ಆಟ- ರೈತನಿಗೆ ಸಂಕಟ!
author img

By

Published : Dec 26, 2019, 5:00 PM IST

ಚಾಮರಾಜನಗರ: ಕಬ್ಬು ಕಟಾವು ಮಾಡುವಾಗ ಚಿರತೆ ಮರಿಗಳ ಚಿನ್ನಾಟಕ್ಕೆ ಕೂಲಿ ಕಾರ್ಮಿಕರು ಬೆಸ್ತು ಬಿದ್ದಿರುವ ಘಟನೆ ಗಡಿಭಾಗವಾದ ತಾಳವಾಡಿಯ ದೊಡ್ಡಮುತ್ತಿನಕೆರೆಯಲ್ಲಿ ನಡೆದಿದೆ.

ಕಬ್ಬು ಕಟಾವು ಮಾಡುವಾಗ ರೈತನ ಕಾಲು ಹಿಡಿದ ಚಿರತೆ ಮರಿಗಳು... ಚಿರತೆಗೆ ಆಟ- ರೈತನಿಗೆ ಸಂಕಟ!

ಗ್ರಾಮದ ನಾಗರಾಜು ಎಂಬುವವರ ಜಮೀನಿನಲ್ಲಿ ಚಿರತೆಯೊಂದು ಮರಿಹಾಕಿರುವುದು ಇಂದು ಕಟಾವು ಮಾಡುತ್ತಿರುವಾಗ ಬೆಳಕಿಗೆ ಬಂದಿದೆ. ಕಬ್ಬು ಕಟಾವು ಮಾಡುವ ವೇಳೆ ಕಾರ್ಮಿಕನೋರ್ವನ ಕಾಲನ್ನು ಚಿರತೆ ಮರಿಯೊಂದು ಹಿಡಿದು ಆತನನ್ನು ಬೆಚ್ಚಿ ಬೀಳಿಸಿದೆ. ಬಳಿಕ, ಎಚ್ಚೆತ್ತ ಕಾರ್ಮಿಕರು ತಾಯಿ ಇಲ್ಲದಿದ್ದನ್ನು ಖಚಿತಪಡಿಸಿಕೊಂಡು ಸತ್ಯಮಂಗಲಂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಎರಡು ಚಿರತೆ ಮರಿಗಳನ್ನು ಇದ್ದ ಸ್ಥಳದಲ್ಲೇ ಇರಿಸಿದ್ದು, ರಾತ್ರಿ ವೇಳೆ ತಾಯಿ ಚಿರತೆ ಬಂದು ಹೊತ್ತೊಯ್ಯಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ರೈತರಿಗೆ ತಿಳಿಸಿದ್ದಾರೆ. ಇನ್ನು ಅವುಗಳ ಚಲನವಲನಕ್ಕಾಗಿ 3 ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಇನ್ನೂ ಈ 2 ಮರಿಗಳು ಜನಿಸಿ 20 ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದ್ದು ಕಬ್ಬು ಕಟಾವು ಮಾಡುತ್ತಿದ್ದ ಸದ್ದಿಗೆ ಎಚ್ಚೆತ್ತು ಹೊರಬಂದಿವೆ ಎನ್ನಲಾಗಿದೆ.

Intro:ಕಬ್ಬು ಕಟಾವು ಮಾಡುವಾಗ ಕಾಲು ಹಿಡಿದ ಪುಟಾಣಿಗಳು... ಚಿರತೆಗೆ ಆಟ- ರೈತನಿಗೆ ಸಂಕಟ!

ಚಾಮರಾಜನಗರ: ಕಬ್ಬು ಕಟಾವು ಮಾಡುವಾಗ ಚಿರತೆಮರಿಗಳ ಚಿನ್ನಾಟಕ್ಕೆ ಕೂಲಿ ಕಾರ್ಮಿಕರು ಬೆಸ್ತು ಬಿದ್ದಿರುವ ಘಟನೆ ಗಡಿಭಾಗವಾದ ತಾಳವಾಡಿಯ ದೊಡ್ಡಮುತ್ತಿನಕೆರೆಯಲ್ಲಿ ನಡೆದಿದೆ.

Body:ಗ್ರಾಮದ ನಾಗರಾಜು ಎಂಬವರ ಜಮೀನಿನಲ್ಲಿ ಚಿರತೆಯೊಂದು ಮರಿಹಾಕಿರುವುದು ಇಂದು ಕಟಾವು ಮಾಡುತ್ತಿರುವಾಗ ಬೆಳಕಿಗೆ ಬಂದಿದೆ. ಕಬ್ಬು ಕಟಾವು ಮಾಡುವ ವೇಳೆ ಕಾರ್ಮಿಕನೋರ್ವನ ಕಾಲನ್ನು ಚಿನ್ನಾಟಕ್ಕೆ ಚಿರತೆ ಮರಿಯೊಂದು ಹಿಡಿದು ದಂಗು ಬೀಳಿಸಿದೆ. ಬಳಿಕ, ಶಾಕ್ ನಿಂದ ಎಚ್ಚೆತ್ತ ಕಾರ್ಮಿಕರು ತಾಯಿ ಇಲ್ಲದಿದ್ದನ್ನು ಖಚಿತಪಡಿಸಿಕೊಂಡು ಸತ್ಯಮಂಗಲಂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಎರಡು ಚಿರತೆ ಮರಿಗಳನ್ನು ಇದ್ದ ಸ್ಥಳದಲ್ಲೇ ಇರಿಸಿದ್ದು ರಾತ್ರಿ ವೇಳೆ ತಾಯಿ ಚಿರತೆ ಬಂದು ಹೊತ್ತೊಯ್ಯಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ರೈತರಿಗೆ ತಿಳಿಸಿದ್ದಾರೆ. ಇನ್ನು ಅವುಗಳ ಚಲನವಲನಕ್ಕಾಗಿ 3 ಕ್ಯಾಮರಾಗಳನ್ನು ಅಳವಡಿಸಿದ್ದಾರೆ.
Conclusion:
ಈ 2 ಮರಿಗಳು ಜನಿಸಿ 20 ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದ್ದು ಕಬ್ಬು ಕಟಾವು ಮಾಡುತ್ತಿದ್ದ ಸದ್ದಿಗೆ ಎಚ್ಚೆತ್ತು ಹೊರಬಂದಿವೆ ಎನ್ನಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.