ಚಾಮರಾಜನಗರ: ಆ್ಯಕ್ಸಿಜನ್ ದುರಂತದಿಂದ ಎಚ್ಚೆತ್ತ ಜಿಲ್ಲಾಡಳಿತ ಈಗ ಮುತುವರ್ಜಿ ವಹಿಸಿ ಆ್ಯಕ್ಸಿಜನ್ ಸಿಲಿಂಡರ್ ತರಿಸಿಕೊಳ್ಳುತ್ತಿದ್ದು, ಸದ್ಯ ರಾತ್ರಿಯೇ ಮೈಸೂರಿನಿಂದ 160 ಜಂಬೋ ಸಿಲಿಂಡರ್ ಬಂದಿವೆ.
ಜಿಲ್ಲಾಡಳಿತದ ವಿರುದ್ಧ ರೋಗಿಯ ಸಂಬಂಧಿಕರು ಆಕ್ರೋಶ ಹೊರಹಾಕುತ್ತಿದ್ದು, ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಸೋಂಕಿತನೋರ್ವ ಬೆಡ್ ಸಿಗದೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಓಡಾಡುತ್ತಿದ್ದ ಘಟನೆಯೂ ನಡೆದಿದ್ದು, ಈ ಅವ್ಯವಸ್ಥೆ ಆಸ್ಪತ್ರೆಯ ಮತ್ತೊಂದು ಮುಖ ತೆರೆದಿಟ್ಟಿದೆ.
ಇದನ್ನೂ ಓದಿ : ಚಾಮರಾಜನಗರ ಆಕ್ಸಿಜನ್ ದುರಂತ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ: ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ