ETV Bharat / state

ಮಾನಸಿಕ ಅಸ್ವಸ್ಥರೇ ಇವರ ಬಂಧುಗಳು... 12 ವರ್ಷದಿಂದ ನಡೆಯುತ್ತಲೇ ಇದೆ ಮಾನವೀಯ ಸೇವೆ!

ರೈಲ್ವೆ ನಿಲ್ದಾಣದಲ್ಲಿ, ರಸ್ತೆ ಬದಿ ಅರೆಬರೆ ಬಟ್ಟೆ ತೊಟ್ಟು ಓಡಾಡುವ ಮಾನಸಿಕ ಅಸ್ವಸ್ಥರನ್ನು ಕಂಡರೆ ಕೆಲವರಿಗೆ ಭಯ. ಹುಚ್ಚರೆಂದು ಕಲ್ಲು ಹೊಡೆಯುವವರೇ ಹೆಚ್ಚಿರುವ ಮೂಢರ ನಡುವೆ ಈ ಮನುಜ ಅವರಿಗೆ ಕ್ಷೌರ ಮಾಡಿ, ಸ್ನಾನ ಮಾಡಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

ಮಾನಸಿಕ ಅಸ್ವಸ್ಥರಿಗೆ ಉಚಿತ ಸೇವೆ ನೀಡುತ್ತಿರುವ ವ್ಯಕ್ತಿ
author img

By

Published : Sep 27, 2019, 4:57 AM IST

ಚಾಮರಾಜನಗರ:‌ ರೈಲ್ವೆ ನಿಲ್ದಾಣದಲ್ಲಿ, ರಸ್ತೆಬದಿ ಅರೆಬರೆ ಬಟ್ಟೆ ತೊಟ್ಟು ಓಡಾಡುವ ಮಾನಸಿಕ ಅಸ್ವಸ್ಥರನ್ನು ಕಂಡರೆ ಕೆಲವರಿಗೆ ಭಯ. ಹುಚ್ಚರೆಂದು ಕಲ್ಲು ಹೊಡೆಯುವವರೇ ಹೆಚ್ಚಿರುವ ಮೂಢರ ನಡುವೆ ಈ ಮನುಜ ಅವರಿಗೆ ಕ್ಷೌರ ಮಾಡಿ, ಸ್ನಾನ ಮಾಡಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

ಮಾನಸಿಕ ಅಸ್ವಸ್ಥರಿಗೆ ಉಚಿತ ಸೇವೆ ನೀಡುತ್ತಿರುವ ವ್ಯಕ್ತಿ

ಹೌದು, ಚಾಮರಾಜನಗರ ನಿವಾಸಿ ಎಲ್.ಸುರೇಶ್ ಎಂಬುವವರು ಹುಚ್ಚರನ್ನು ಕಂಡರೆ ಓಡುವುದಿಲ್ಲ. ಮಾನಸಿಕ ಅಸ್ವಸ್ಥರನ್ನು ನೋಡಿದಾಗ ಅಸಹ್ಯ ಪಡದೇ ಅವರನ್ನು ಸಂತೈಸಿ, ಸ್ನಾನ ಮಾಡಿಸುತ್ತಾರೆ. ಶುಭ್ರ ಬಟ್ಟೆ ತೊಡಿಸಿ‌ ತಿಂಡಿ ಕೊಡಿಸುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ.

ಚಾಮರಾಜನಗರ ಗಡಿ ಭಾಗ ಮತ್ತು ರಾಜ್ಯದ ಕೊನೆಯ ರೈಲ್ವೆ ನಿಲ್ದಾಣವಾದ್ದರಿಂದ ಮಾನಸಿಕ ಅಸ್ವಸ್ಥರ ಓಡಾಟ ಹೆಚ್ಚು‌. ಕಳೆದ 12 ವರ್ಷದಿಂದ ಸುರೇಶ್ ಮಾನಸಿಕ ಅಸ್ವಸ್ಥರ ದಿನ, ಸ್ವಾತಂತ್ರ್ಯ ದಿನಾಚರಣೆ, ಗಣತಂತ್ರ ದಿನ ಹೀಗೆ ವಿಶೇಷ ದಿನಗಳಂದು ಮಾನಸಿಕ ಅಸ್ವಸ್ಥರನ್ನು ಹುಡುಕಿ ಅವರಿಗೆ ಸ್ನಾನ ಮಾಡಿಸಿ, ಹೊಸ ಬಟ್ಡೆ ತೊಡಿಸಿ, ವೈದ್ಯಕೀಯ ತಪಾಸಣೆಯನ್ನೂ ಮಾಡಿಸುತ್ತಾ ಬಂದಿದ್ದಾರೆ‌.

ಮನೆಯಿಂದ ಹೊರದೂಡಲ್ಪಟ್ಟ, ಸಮಾಜದಿಂದ ಕಡೆಗಣಿಸಲಾದ‌‌ ಮಾನಸಿಕ ಅಸ್ವಸ್ಥರನ್ನು ಬಂಧುವಿನಂತೆ ಸತ್ಕರಿಸಿ‌ ಉಪಚರಿಸುವ ಸುರೇಶ್, ಹಲವು ದಿನಗಳಿಂದ ಸ್ನಾನ ಮಾಡದೇ ಚರ್ಮ ರೋಗಳಿಗೆ ತುತ್ತಾಗಿರುವ ಮಾನಸಿಕ ರೋಗಿಗಳಿಗೆ ಔಷಧೋಪಚಾರವನ್ನು ಮಾಡುತ್ತಾರೆ.

ಮಾನಸಿಕ ಅಸ್ವಸ್ಥರ ಮೇಲೆ ತಿರಸ್ಕಾರದ ಭಾವನೆ ಇರುತ್ತೆ. ಅವರಿಗೆ ಪ್ರೀತಿ ತೋರುವುದಿಲ್ಲ, ಅವರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ತರಲು ಯಾರೂ ಪ್ರಯತ್ನಿಸುವುದಿಲ್ಲ. ಸ್ವಚ್ಛ ಭಾರತ ಆಂದೋಲನದಂತೆ ಮಾನಸಿಕ ಅಸ್ವಸ್ಥರನ್ನು ಗುಣಪಡಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಆಂದೋಲನವಾಗಬೇಕು. ಈ ದಿಸೆಯಲ್ಲಿ ಸುರೇಶ್ ನಮಗೆಲ್ಲಾ ಮಾದರಿ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಸಂಘದ ಯೋಗಗುರು ದಾನೇಶ್ವರಿ ಹೇಳುತ್ತಾರೆ.

ಮಾನಸಿಕ ಅಸ್ವಸ್ಥರು ಕೂಡಾ ಮನುಷ್ಯರೇ. ಅವರಿಗೆ 10-12 ವರ್ಷದಿಂದ ಕ್ಷೌರ ಮಾಡಿಸಿ, ಹೊಸ ಬಟ್ಟೆ ತೊಡಿಸುತ್ತೇನೆ. ಇವರಲ್ಲೇ ದೇವರನ್ನು ಕಾಣುತ್ತೇನೆ. ಬೀದಿಯಲ್ಲಿ ಸುತ್ತುವ ಮಾನಸಿಕ ಅಸ್ವಸ್ಥರನ್ನು ಸರ್ಕಾರ ನಿರಾಶ್ರಿತ ಕೇಂದ್ರಗಳಿಗೆ ಸೇರಿಸುವ ಕೆಲಸ ಮಾಡಬೇಕು ಎಂದು ಸುರೇಶ್ ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಹುಚ್ಚುರು ಎಂದು ಕಲ್ಲು ಹೊಡೆಯುವವರ ನಡುವೆ ಅಂತಕರಣದಿಂದ ಮಾನಸಿಕ ಅಸ್ವಸ್ಥರನ್ನು ಕಾಣುವ ಸುರೇಶ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.

Intro:ಮಾನಸಿಕ ಅಸ್ವಸ್ಥರೇ ಇವರ ಬಂಧುಗಳು: ಹುಚ್ಚರೆನ್ನುವ ಮೂಢರ ನಡುವೇ ಇವರೇ ಮನುಜ!

Web lead:
ಚಾಮರಾಜನಗರ:‌ ರೈಲ್ವೆ ನಿಲ್ದಾಣದಲ್ಲಿ, ರಸ್ತೆಬದಿ ಅರೆಬರೆ ಬಟ್ಟೆ ತೊಟ್ಟು ಓಡಾಡುವ ಮಾನಸಿಕ ಅಸ್ವಸ್ಥರನ್ನು ಕಂಡರೇ ಕೆಲವರಿಗೆ ಭಯ, ಹುಚ್ಚರೆಂದು ಕಲ್ಲು ಹೊಡೆಯುವವರೇ ಹೆಚ್ಚಿರುವ ಮೂಢರ ನಡುವೆ ಈ ಮನುಜ ಅವರಿಗೆ ಕ್ಷೌರ ಮಾಡಿ ಸ್ನಾನ ಮಾಡಿಸಿ ಮಾನವೀಯತೆ ಮೆರೆಯುತ್ತಿರುವ ಸ್ಟೋರಿ ಇಲ್ಲಿದೆ.

Body:Vo1: ರೈಲ್ವೆ ನಿಲ್ದಾಣದಲ್ಲಿ ಅಲೆದಾಡುವ ರಸ್ತೆ ಬದಿಗಳಲ್ಲಿ ತಿಂಡಿ ತೀರ್ಥಕ್ಕಾಗಿ ಹುಡುಕಾಡುವ ಮಾನಸಿಕ ಅಸ್ವಸ್ಥರನ್ನು ಕಂಡರೇ ಭಯ ಪಡುವವರು ಒಂದೆಡೆಯಾದರೇ ಕಲ್ಲು ಹೊಡೆಯುವವರೇ ಹೆಚ್ಚು. ಆದರೆ, ಈ ವ್ಯಕ್ತಿ ಎಲ್ಲರಂತಲ್ಲ.

Vflow

Vo2: ಹೌದು, ಚಾಮರಾಜನಗರ ನಿವಾಸಿ ಎಲ್ .ಸುರೇಶ್ ಎಂಬವರು ಹುಚ್ಚರನ್ನು ಕಂಡರೆ ಓಡುವುದಿಲ್ಲ, ಮಾನಸಿಕ ಅಸ್ವಸ್ಥರನ್ನು ನೋಡಿದಾಗ ಅಸಹ್ಯಪಡದೇ ಅವರನ್ನು ಮೈದಡವಿ ಸಂತೈಸಿ ಸ್ನಾನ ಮಾಡಿಸುತ್ತಾರೆ. ಶುಭ್ರ ಬಟ್ಟೆ ತೊಡಿಸಿ‌ ತಿಂಡಿ ಕೊಡಿಸುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ.

Visual flow

Vo3: ಚಾಮರಾಜನಗರ ಗಡಿಭಾಗ ಮತ್ತು ರಾಜ್ಯದ ಕೊನೆಯ ರೈಲ್ವೆ ನಿಲ್ದಾಣವಾದ್ದರಿಂದ ಮಾನಸಿಕ ಅಸ್ವಸ್ಥರ ಓಡಾಟ ಹೆಚ್ಚು‌. ಇವರನ್ನು ಕಂಡ ಸುರೇಶ್ ಅವರ ಮನಸು ಕರಗಿ ಕಳೆದ ೧೨ ವರ್ಷದಿಂದ ಮಾನಸಿಕ ಅಸ್ವಸ್ಥರ ದಿನ, ಸ್ವಾತಂತ್ರ್ಯ ದಿನಾಚರಣೆ, ಗಣತಂತ್ರ ದಿನ ಹೀಗೆ ವಿಶೇಷ ದಿನಗಳಂದು ಮಾನಸಿಕ ಅಸ್ವಸ್ಥರನ್ನು ಹುಡುಕಿ ಅವರಿಗೆ ಸ್ನಾನ ಮಾಡಿಸಿ, ಶುಭ್ರ ಬಟ್ಡೆ ತೊಡಿಸಿ ವೈದ್ಯಕೀಯ ತಪಾಸಣೆಯನ್ನೂ ಮಾಡಿಸುತ್ತಾ ಬಂದಿದ್ದಾರೆ‌.
Vflow

Vo4: ಮನೆಯಿಂದ ಹೊರದೂಡಲ್ಪಟ್ಟ, ಸಮಾಜದಿಂದ ಕಡೆಗಣಿಸಲಾದ‌‌ ಮಾನಸಿಕ ಅಸ್ವಸ್ಥರನ್ನು ಬಂಧುವಿನಂತೆ ಸತ್ಕರಿಸಿ‌ ಉಪಚರಿಸುವ ಸುರೇಶ್ ಹಲವು ದಿನಗಳಿಂದ ಸ್ನಾನ ಮಾಡದೇ ಚರ್ಮ ರೋಗಳಿಗೆ ತುತ್ತಾಗಿರುವ ಮಾನಸಿಕ ರೋಗಿಗಳಿಗೆ ಔಷದೋಪಚಾರವನ್ನು ಮಾಡುತ್ತಾರೆ. ಹೇರ್ ಕಟಿಂಗ್ ಮಾಡಲು ಸಾವಿರಾರು ರೂ. ಹಣ ಕೇಳಿದ್ದರಿಂದ
ಯಾವುದೇ ಅಸಹ್ಯ ಪಟ್ಟುಕೊಳ್ಳದೇ ಅವರಿಗೆ ಕ್ಷೌರ ಮಾಡಲು ಮುಂದಾಗಿ ಆತ್ಮ ತೃಪ್ತಿ ಪಡುತ್ತಿದ್ದಾರೆ.

Vflow

Vo5: ಮಾನಸಿಕ ಅಸ್ವಸ್ಥರ ಮೇಲೆ ತಿರಸ್ಕಾರದ ಭಾವನೆ ಎಲ್ಲರದ್ದು, ಅವರಿಗೆ ಪ್ರೀತಿ ತೋರುವುದಿಲ್ಲ, ಅವರನ್ನು ಮತ್ತೇ ಸಮಾಜದ ಮುಖ್ಯವಾಹಿನಿಗೆ ತರಲು ಯಾರೂ ಪ್ರಯತ್ನಿಸುವುದಿಲ್ಲ. ಸ್ವಚ್ಛ ಭಾರತ ಆಂದೋಲನದಂತೆ ಮಾನಸಿಕ ಅಸ್ವಸ್ಥರನ್ನು ಗುಣಪಡಿಸಿ ಸಮಾಜದ ಮುಖ್ಯವಾಹಿಣಿಗೆ ತರುವ ಆಂದೋಲನವಾಗಬೇಕು ಈ ದಿಸೆಯಲ್ಲಿ ಸುರೇಶ್ ನಮಗೆಲ್ಲಾ ಮಾದರಿ ಎನ್ನುತ್ತಾರೆ ಪ್ರಜಾಪಿತ ಬ್ರಹ್ಮಕುಮಾರಿ ಸಂಘದ ಧ್ಯಾನಕೇಂದ್ರದ ದಾನೇಶ್ವರಿ.

Bite1- ದಾನೇಶ್ವರಿ, ಯೋಗಗುರು

Vo6: ಮಾನಸಿಕ ಅಸ್ವಸ್ಥರು ಮನುಷ್ಯರೇ. ಆದರೆ, ಅವರ ಉಡುಗೆ ನೋಡಿ ತಿಂಡಿ ನೀಡಲ್ಲ, ನೀರು ಕೊಡದಿದ್ದನ್ನು ಕಂಡು ಕನಿಕರ ಹುಟ್ಟಿ 10-12 ವರ್ಷದಿಂದ ಅವರಿಗೆ ಕ್ಷೌರ ಮಾಡಿಸಿ ಶುಭ್ರ ಬಟ್ಟೆ ತೊಡಿಸುತ್ತೇನೆ, ಇವರಲ್ಲೇ ದೇವರನ್ನು ಕಾಣುತ್ತೇನೆ. ಬೀದಿಯಲ್ಲಿ ಸುತ್ತುವ ಮಾನಸಿಕ ಅಸ್ವಸ್ಥರನ್ನು ಸರ್ಕಾರ ನಿರಾಶ್ರಿತ ಕೇಂದ್ರಗಳಿಗೆ ಸೇರಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸುತ್ತಾರೆ ಸುರೇಶ್.

Bite2- ಸುರೇಶ್, ಸಮಾಜಸೇವಕ

Conclusion:ಒಟ್ಟಿನಲ್ಲಿ ಹುಚ್ಚುರು ಎಂದು ಕಲ್ಲು ಹೊಡೆಯುವವರ ನಡುವೆ ಅಂತಕರಣದಿಂದ ಮಾನಸಿಕ ಅಸ್ವಸ್ಥರನ್ನು ಕಾಣುವ ಸುರೇಶ್ ಕಾರ್ಯ ನಿಜಕ್ಕೂ ಶ್ಲಾಘನೀಯ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.