ಚಾಮರಾಜನಗರ: ಒಂದಂಕಿಯಲ್ಲಷ್ಟೇ ಕಾಣುತ್ತಿದ್ದ ಕೊರೊನಾ ಪ್ರಕರಣ ಕೆಲವು ದಿನಗಳಿಂದ 50 ರ ಮೇಲೆ ದಾಖಲಾಗುತ್ತಿದ್ದು, ನಿನ್ನೆ 119 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 577 ಕ್ಕೆ ಏರಿಕೆಯಾಗಿದೆ.
ನಿನ್ನೆ 35 ಮಂದಿ ಗುಣಮುಖರಾಗಿದ್ದಾರೆ. 28 ಮಂದಿ ಐಸಿಯುನಲ್ಲಿದ್ದು, 358 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. 1,547 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಇನ್ನು ಭಾನುವಾರ 963 ಮಂದಿ ಲಸಿಕೆ ಹಾಕಿಸಿಕೊಂಡಿದ್ದು, ಇಲ್ಲಿಯವರೆಗೆ 1.20 ಲಕ್ಷ ಮಂದಿ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. 1,459 ಮಂದಿಗೆ ಕೋವಿಡ್ ಟೆಸ್ಟ್ ನಡೆಸಲಾಗಿದೆ.