ಚಾಮರಾಜನಗರ: ಜಿಲ್ಲೆಯಲ್ಲಿಂದು 108 ಕೋವಿಡ್ ಪಾಸಿಟಿವ್ ಕೇಸ್ಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 4252ಕ್ಕೆ ಏರಿಕೆಯಾಗಿದೆ.
ಇಂದು 48 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 794 ಸಕ್ರಿಯ ಪ್ರಕರಣಗಳಿವೆ.
ಇದರಲ್ಲಿ 40 ಮಂದಿ ಸೋಂಕಿತರು ಐಸಿಯುನಲ್ಲಿದ್ದು, 343 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ. 2040 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಇದೇ ಮೊದಲ ಬಾರಿಗೆ ಬರೋಬ್ಬರಿ 2,000 ಮಂದಿಯನ್ನು ಸಂಪರ್ಕಿತರನ್ನಾಗಿ ಪತ್ತೆಹಚ್ಚಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗಳ ಸಂಖ್ಯೆ 65 ಸಾವಿರ ದಾಟಿದೆ. ಹೋಂ ಐಸೋಲೇಷನ್ ನಿಂದ ಇಲ್ಲಿವರೆಗೆ 1,107 ಮಂದಿ ಗುಣಮುಖರಾಗಿದ್ದಾರೆ.