ಚಾಮರಾಜನಗರ : ಕುಳಿತ ಭಂಗಿಯಲ್ಲಿ ಆನೆ ಮೃತದೇಹವೊಂದು ಪತ್ತೆಯಾಗಿರುವ ಘಟನೆ ತಾಲೂಕಿನ ಅಯ್ಯನಪುರ ಸಮೀಪದ ಹತ್ತಿಗುಡ್ಡ ಎಂಬಲ್ಲಿ ನಡೆದಿದೆ. ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆನೆಗೆ 8-10 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.
ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆನೆಗೆ 8-10 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.
ಸ್ವಾಭಾವಿಕ ಸಾವು ಎಂದು ಮೇಲ್ನೋಟಕ್ಕೆ ಅನಿಸುತ್ತಿದ್ದರೂ ಸಾವಿಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಚಾಮರಾಜನಗರ ಪಶುವೈದ್ಯ ಡಾ. ನಟರಾಜು ಎಂಬುವರು ಮರಣೋತ್ತರ ಪರೀಕ್ಷೆ ನಡೆಸಿದ್ದು, ವರದಿ ಇನ್ನೂ ಬರಬೇಕಿದೆ.
ಓದಿ: ರಾಜ್ಯ ಬಿಜೆಪಿಯಲ್ಲಿ ಸಿನಿಮಾ, ಸೀರಿಯಲ್, ನಾಟಕಗಳು ನಡೆಯುತ್ತಿವೆ : ಡಿ ಕೆ ಶಿವಕುಮಾರ್