ETV Bharat / state

ಐಟಿ ಅಧಿಕಾರಿ ಎಂದು ನಂಬಿಸಿ ಮದುವೆಯಾದ ದರೋಡೆಕೋರ... ಹೆಂಡತಿ ಗೋಳು ಒಂದೆರಡಲ್ಲ - undefined

ಮೊದಲು ಇನ್ಕಂ ಟ್ಯಾಕ್ಸ್ ಆಫೀಸರ್ ಎಂದು ಹೇಳಿ ಹೆಂಡತಿಗೆ ಮೋಸ. ನಂತರ ಬೇರೆ ಯುವತಿಯೋರ್ವಳೊಂದಿಗೆ ಅನೈತಿಕ ಸಂಬಂಧ. ಕಾನೂನು ಕ್ರಮ ತೆಗೆದುಕೊಳ್ಳದ ಪೊಲೀಸರು. ನ್ಯಾಯಕ್ಕಾಗಿ ಮಾಧ್ಯಮದ ಮುಂದೆ ಮಹಿಳೆ ಅಳಲು.

ಆರೋಪಿ ಚರಣ್​ರಾಜ್​
author img

By

Published : Mar 27, 2019, 8:45 PM IST

ಬೆಂಗಳೂರು: ತಾನೊಬ್ಬ ಆದಾಯ ತೆರಿಗೆ ಇಲಾಖೆಯ ಉನ್ನತ ಅಧಿಕಾರಿಯೆಂದು ಹೇಳಿ ಹೆಂಡತಿಯನ್ನು ನಂಬಿಸಿದ್ದಲ್ಲದೇ, ಈಗ ಬೇರೆ ಯುವತಿಯ ಜೊತೆ ಸಂಬಂಧ ಹೊಂದಿರುವ ವ್ಯಕ್ತಿಯೋರ್ವನ ಬಂಡವಾಳ ಬಯಲಾಗಿದೆ.

ಚರಣ್​ ರಾಜ್​ ಎಂಬಾತನೇ ನಕಲಿ ಇನ್ಕಂ ಟ್ಯಾಕ್ಸ್ ಆಫೀಸರ್. ಮಾಗಡಿ ರೋಡ್ ನಿವಾಸಿಯಾಗಿರುವ ಮಂಜುಳಾ ಎಂಬವರೊಂದಿಗೆ 7 ವರುಷದ ಹಿಂದೆಯೇ ಈತ ಮದುವೆಯಾಗಿದ್ದನು. ತಾನು ಇನ್ಕಂ ಟ್ಯಾಕ್ಸ್ ಆಫೀಸರ್ ಎಂದು ಹೇಳಿ ಅದ್ಯಾರಿಗೋ ಟ್ಯಾಕ್ಸ್ ಹಾಕಲು ಹೋಗಿ ಆರು ತಿಂಗಳು ಜೈಲಿಗೆ ಹೋದಾಗಲೇ ಮಂಜುಳಾ ಪತಿಯ ಅಸಲಿ ಮುಖವನ್ನು ನೋಡಿದ್ದಳು.

ಕಟ್ಕೊಂಡಾಗಿದೆಯೆಲ್ಲ, ಇನ್ನಾದರೂ ನೆಟ್ಟಗಿದ್ರೆ ಸಾಕು ಅಂದುಕೊಂಡವಳಿಗೆ ಗಂಡನ ಒಂದೊಂದೆ ಅಸಲಿ ಬಂಡವಾಳ ತಿಳಿಯುತ್ತಾ ಹೋಗಿದೆ. ಒಂದು ದಿನ ಮಂಜುಳಾ ತವರು ಮನೆಗೆ ಹೋದವಳು ಅಚಾನಕ್ ವಾಪಾಸ್ ಬಂದಾಗ ಚರಣ್​ ರಾಜ್, ಬೇರೆ ಯುವತಿಯ ಜೊತೆ ಇದ್ದಿದ್ದು ತಿಳಿದಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಅಮ್ಮ, ತಂಗಿಯ ಜೊತೆ ಸೇರಿಕೊಂಡು ಆಕೆಯ ಮೇಲೆ ಹಲ್ಲೆ ಕೂಡ ನಡೆಸಿದ್ದನು ಎಂದು ಮಂಜುಳಾ ಆರೋಪಿಸಿ, ತನಗೆ ನ್ಯಾಯ ಬೇಕು ಎಂದು ಮಂಜುಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

Woman expressing her pain

ಸದ್ಯ ಎರಡು ಮಕ್ಕಳ ಜೊತೆ ಬೇರೆ ಮನೆಯಲ್ಲಿರುವ ಮಂಜುಳಾ, ಈ ಸಂಬಂಧ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆ, ಕರ್ನಾಟಕ‌ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜ್ ಹಾಗೂ ‌ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಆದರೆ ಯಾರೊಬ್ಬರು ಈ ವರೆಗೆ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ತನಗೆ ನ್ಯಾಯ ಕೊಡಿಸಿ ಎಂದು‌ ಮಾಧ್ಯಮದವರ ಜೊತೆ ಅಳಲು ತೊಡಿಕೊಂಡಿದ್ದಾಳೆ.

KN_BNg_09_27_husbend cheatining_bhavya_7204498
Bhavya

Mojo byite bandide ede file name nali

ತಾನೊಬ್ಬ ಇನ್ ಕಂಮ್ ಟ್ಯಾಕ್ಸ್  ಉನ್ನತ ಅಧಿಕಾರಿ ಎಂದು ಹೆಂಡಿತಿಯನ್ನ ನಂಬಿಸಿ ಈಗ ನಡು ಬೀದಿಯಲ್ಲಿ ನಿಲ್ಲಿಸಿದ್ದಾನೆ. ಚರಣ್ರಾಜ್ ಎಂಬ ನಕಲಿ ಇನ್ಕಂ ಟ್ಯಾಕ್ಸ್ ಆಫೀಸರ್ನ ಕಥೆ ಇದು . ಮಂಜುಳಾ ಎಂಬಾಕೆಯನ್ನ ಮದ್ವೆಯಾಗಿ ಕೈ ಹಿಡಿದು ಕಾಪಾಡ್ತಿನಿ ಎಂದು ನಂಬಿಸಿ ಈಗ ಬೇರೆ ಹುಡುಗೀಯ ಹಿ.ದೆ ಬಿದ್ದಿದ್ದಾನಂತೆ. ಅಂದ ಹಾಗೆ ಈತ ನಕಲಿ  ಇನ್ ಕಮ್ ಟ್ಯಾಕ್ಸ್ ಆಫೀಸರ್ ಎಂದು ಅದ್ಯಾರಿಗೋ ಟ್ಯಾಕ್ಸ್ ಹಾಕಲು ಹೋಗಿ ಆರು ತಿಂಗಳು  ಜೈಲಿಗೆ  ಹೋಗಿ  ಕೂಡ ಬಂದಿದ್ನಂತೆ.

ಮಾಗಡಿ ರೋಡ್ ನಿವಾಸಿಯಾಗಿರುವ ಮಂಜುಳರಿಗೆ 7 ವರ್ಷದ ಹಿಂದೆ ಚರಣ್ ರಾಜ್ ಎಂಬಾತನ ಜೊತೆ ವಿವಾಹವಾಗಿತ್ತು. ತಾನು ಆಫೀಸರ್ ಎಂದು ಮದ್ವೆಯಾದವನ ಬಣ್ಣ ಈತ ಜೈಲಿಗೆ ಹೋಗುವಾಗಲೇ ಮಂಜುಳಾಳಿಗೆ ಗೊತ್ತಾಗಿದ್ದು. ಕಟ್ಕೊಂಡಾಗಿದ್ಯಲ್ಲ ಇನ್ನೇನು ನೆಟ್ಟಗಿದ್ರೆ ಸಾಕು ಅಂದುಕೊಂಡವಳಿಗೆ ಗಂಡನ  ಅಸಲಿ‌ಮುಖಾವಡ ವಿಷಯ ಗೊತ್ತಾಗಿತ್ತು.  ಅದೂ ಅಲ್ಲದೆ ತವರು ಮನೆಗೆ ಹೋದವಳು ಅಚಾನಕ್ ವಾಪಾಸ್ ಬಂದಾಗ  ಬೇರೆ ಯುವತಿಯರ ಜೊತೆ ಅನೈಂತಿಕ ಸಂಬಂಧ ಹೊಂದಿದ್ನಂತೆ. ಹೀಗಾಗಿ ವಿಚಾರಿಸಿದಾಗ ಅತ್ತೆ ನಾದಿನಿ ಜೊತೆ ಸೇರಿ ಹಲ್ಲೆಯನ್ನ ನಡೆಸಿದ್ದ . ಹೀಗಾಗಿ ತನಗೆ ನ್ಯಾಯ ಬೇಕು ಎಂದು ಮಂಜುಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಸದ್ಯ ಎರಡು ಮಕ್ಕಳ ಜೊತೆ ಬೇರೆ ಮನೆಯಲ್ಲಿರುವ ಮಂಜುಳಾ ನ್ಯಾಯಕ್ಕಾಕಿ ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾಳೆ. ಈ ಪ್ರಕರಣ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ  ದೂರು ಹಾಗೂ ಕರ್ನಾಟಕ‌ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜ್ ಹಾಗೂ‌ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ ತನಗೆ ನ್ಯಾಯ ಕೊಡಿಸಿ ಎಂದು‌ಮಾಧ್ಯಮದವ್ರ ಜೊತೆ ಅಳಲು ತೊಡಿಕೋಂಡಿದ್ದಾಳೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.