ETV Bharat / state

ಸಿಎಂ ಆದೇಶದಂತೆ ನಾವು ರೆಸಾರ್ಟ್​ನಲ್ಲಿ ಇದ್ದೇವೆ: ಶಾಸಕ ಅನ್ನದಾನಿ - Devanahalli

ನಮ್ಮ ನಾಯಕರ ಹೇಳಿಕೆಯಂತೆ ನಾವು ಇಲ್ಲಿ ಇದ್ದೇವೆ. ಇನ್ನೂ ಎಷ್ಟು‌ ದಿನ‌ ಇರಬೇಕು ಅಂತಾ ಮಾಹಿತಿ ಇಲ್ಲ, ಸಿಎಂ ಆದೇಶದಂತೆ ನಾವು ಇಲ್ಲಿ‌ ಇರುತ್ತೇವೆ ಎಂದು ಜೆಡಿಎಸ್ ಶಾಸಕ ಡಾ.ಕೆ‌. ಅನ್ನದಾನಿ ಹೇಳಿದರು.

ಮಳವಳ್ಳಿ ಶಾಸಕ ಡಾ.ಕೆ‌. ಅನ್ನದಾನಿ
author img

By

Published : Jul 10, 2019, 10:48 AM IST

ಬೆಂಗಳೂರು: ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾವು ರೆಸಾರ್ಟ್​ಗೆ ಬಂದಿದ್ದೇವೆ. ಅವರ ಆದೇಶದಂತೆ ನಾವು ಇಲ್ಲಿ‌ ಇರುತ್ತೇವೆ ಎಂದು ಜೆಡಿಎಸ್ ಶಾಸಕ ಡಾ.ಕೆ‌. ಅನ್ನದಾನಿ ಹೇಳಿದರು.

ದೇವನಹಳ್ಳಿಯಲ್ಲಿರುವ ರೆಸಾರ್ಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಡ್ಯ ಜಿಲ್ಲೆಯ‌ ಮಳವಳ್ಳಿ ಶಾಸಕ ಡಾ.ಕೆ‌. ಅನ್ನದಾನಿ, ನಮ್ಮನ್ನ ಯಾವುದೇ ಪಕ್ಷದ ಶಾಸಕರು ಸಂಪರ್ಕಿಸಿಲ್ಲ. ನಮಗೆ ಯಾರ ಹೆದರಿಕೆಯೂ ಇಲ್ಲ, ನಮ್ಮ ನಾಯಕರ ಹೇಳಿಕೆಯಂತೆ ನಾವು ಇಲ್ಲಿ ಇದ್ದೇವೆ. ಇನ್ನೂ ಎಷ್ಟು‌ ದಿನ‌ ಇರಬೇಕು ಅಂತಾ ಮಾಹಿತಿ ಇಲ್ಲ, ಸಿಎಂ ಹೇಳಿಕೆ‌ಗೆ ನಾವು ಬದ್ಧ. ಅವರು ಯಾವಾಗ ಹೊರಡಿ ಅಂತಾರೆ ಆಗ ನಾವೆಲ್ಲಾ ಹೊರಡುತ್ತೇವೆ ಎಂದು ತಿಳಿಸಿದರು.

ಮಳವಳ್ಳಿ ಶಾಸಕ ಡಾ.ಕೆ‌. ಅನ್ನದಾನಿ

ರೆಸಾರ್ಟ್ ರಾಜಕಾರಣದಂತಹ ಪರಿಸ್ಥಿತಿ‌ ಹೊಸದೇನಲ್ಲ, ಹೀಗೆ ಸುಮಾರು ಬಾರಿ‌ ನಡೆದಿದೆ. ಕೆಲವು ಸಂದರ್ಭಗಳನ್ನು ಎದುರಿಸಲು ಈ ರೀತಿ ಸಂದರ್ಭಗಳು ಎದುರಾಗುತ್ತವೆ. ಈಗಿರುವ ಪರಿಸ್ಥಿತಿಯಲ್ಲಿ ನಾನು ರಾಜಕೀಯದ‌ ಬಗ್ಗೆ ಏನು ಮಾತನಾಡಲ್ಲ. ಮುಖ್ಯಮಂತ್ರಿಗಳು‌ ಮಾಧ್ಯಮದವರ ಬಳಿ ಏನೂ ಮಾಹಿತಿ ಹಂಚಿಕೊಳ್ಳಬೇಡಿ ಅಂತಾ ಹೇಳಿದ್ದಾರೆ ಎಂದರು.

ಮೊಬೈಲ್ ಸ್ವಿಚ್ ಆಫ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಸಂದರ್ಭದಲ್ಲಿ ಮೊಬೈಲ್​​ನಲ್ಲಿ ಮಾತಾಡುವುದು ಒಳ್ಳೆಯದ್ದೂ ಆಗುತ್ತೆ, ಕೆಟ್ಟದ್ದೂ ಆಗುತ್ತೆ. ಮೊಬೈಲ್‌ ಸ್ವಿಚ್ ಆಫ್​​ ಮಾಡಿರುವುದಕ್ಕೆ ಯಾರು ತಪ್ಪು ತಿಳಿದುಕೊಳ್ಳಬೇಡಿ. ನಮ್ಮ ಕ್ಷೇತ್ರದ ಮತದಾರರು ನಾನು ದೂರವಾಣಿ ಕರೆ ಸ್ವಿಕರಿಸುತ್ತಿಲ್ಲ ಅಂತಾ ಬೇಸರ ಮಾಡಿಕೊಳ್ಳಬೇಡಿ. ರಾಜಕಾರಣದ ಕೆಲವು ವ್ಯತ್ಯಾಸಗಳಿಂದ ಸಣ್ಣ ಪುಟ್ಟ ಸಮಸ್ಯೆಗಳು ಇರುವಂತಹದು ಸಹಜ. ಸರ್ಕಾರ ಏನು ಆಗಲ್ಲ, ಎಲ್ಲ ನಿಭಾಯಿಸುತ್ತಿದ್ದಾರೆ ಎಂದರು.

Intro:KN_BNG_01_10_annadhani_Ambarish_720331
Slug: ರೆಸಾರ್ಟ್ ರಾಜಕೀಯ ಕುರಿತು ಜೆಡಿಎಸ್ ಶಾಸಕ ಅನ್ನಧಾನಿ ಏನ್ ಹೇಳ್ತಾರೆ..?

ಬೆಂಗಳೂರು: ಮುಖ್ಯಂಮತ್ರಿಗಳ ನೇತೃತ್ವದಲ್ಲಿ ನಾವು ರೆಸಾರ್ಟ ಗೆ ಬಂದಿದ್ದೇವೆ. ಸಿಎಂ ಆದೇಶ ದಂತೆ ನಾವು ಇಲ್ಲಿ‌ ಇರುತ್ತೇವೆ. ಇನ್ನೂ ಎಷ್ಟು‌ ದಿನ‌ ಇರಬೇಕು ಅಂತಾ ಮಾಹಿತಿ ಇಲ್ಲಾ. ಮುಖ್ಯಮಂತ್ರಿ ಹೇಳಿಕೆ‌ಗೆ ನಾವು ಬದ್ದ ಅವರು ಯಾವಾಗಾ ಹೊರಡಿ ಅಂದರೆ ಅವಾಗಾ ನಾವೆಲ್ಲಾ ಹೊರಡುತ್ತೇವೆ ಎಂದು ಮಂಡ್ಯ‌ ಜಿಲ್ಲೆಯ‌ ಮಳವಳ್ಳಿ ಶಾಸಕ ಡಾ.ಕೆ‌. ಅನ್ನಧಾನಿ ಹೇಳಿದ್ರು..

ದೇವನಹಳ್ಳಿ ಬಳಿ ಇರುವ ರೆಸಾರ್ಟ್ ಬಳಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ನಮ್ಮನ್ನ ಯಾವುದೇ ಪಕ್ಷದ ಶಾಸಕರು ಸಂಪರ್ಕಿಸಿಲ್ಲಾ. ನಮಗೆ ಯಾರ ಹೆದರಿಕೆಯೂ ಇಲ್ಲಾ ನಮ್ಮ‌ ನಾಯಕರ ಹೇಳಿಕೆಯಂತೆ ನಾವು ಇಲ್ಲಿ ಇದ್ದೀವಿ. ರೆಸಾರ್ಟ ರಾಜಕಾರಣ ಈ ತರಹ ಪರಿಸ್ಥಿತಿ‌ ಹೊಸದೇನಲ್ಲಾ.. ಸುಮಾರು ಸರಿ‌ ನಡೆದಿದೆ. ಇದಕ್ಕೆ ರಾಜಕೀಯದ‌ ಇತಿಹಾಸವೇ ಇದೆ.. ಸಂದರ್ಭವನ್ನು ಎದುರಿಸಲಿಕ್ಕೆ‌ ಈತರ ಸಂದರ್ಭಗಳು ಎದುರಾಗ್ತವೆ. ಈಗಿರುವ ಪರಿಸ್ಥಿತಿನಲ್ಲಿ ನಾನು ರಾಜಕೀಯದ‌ ಬಗ್ಗೆ ಏನು ಮಾತಾಡಲ್ಲಾ. ಮುಖ್ಯಮಂತ್ರಿಗಳು‌ ಮಾಧ್ಯಮದವರ ಬಳಿ ಏನು ಮಾಹಿತಿ ಹಂಚಿಕೊಬೇಡಿ ಅಂತಾ ಹೇಳಿದ್ದಾರೆ ಎಂದರು.

ಮೊಬೈಲ್ ಸ್ವಿಚ್ ಅಫ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಸಂದರ್ಭದಲ್ಲಿ ಮೊಬೈಲ್ ನಲ್ಲಿ ಮಾತಾಡುವುದು ಓಳ್ಳೇದು ಆಗುತ್ತೆ ಕೆಟ್ಟದು ಆಗುತ್ತೆ. ಮೊಬೈಲ್‌ ಸ್ವಿಚ್ ಮಾಡಿರುವುದಕ್ಕೆ ಯಾರು ತಪ್ಪು ತಿಳಿಕೊಬೇಡಿ. ನಮ್ಮ‌ ಕ್ಷೇತ್ರದ ಮತದಾರರಿಗೆ ನಾನು ದೂರವಣಿ ಕರೆ ಸ್ವಿಕರಿಸಲಿಲ್ಲಾ ಅಂತಾ ಬೆಸರ ಮಾಡಿಕೊಬೇಡಿ. ರಾಜಕಾರಣ ದ ಕೆಲವು ವ್ಯತ್ಯಾಸಗಳಿಂದ ಸಣ್ಣ ಪುಟ್ಟ ಸಮಸ್ಯೆಗಳು ಇರುವಂತಹದು ಸಹಜ. ಸರ್ಕಾರ ಏನು ಆಗಲ್ಲಾ ಎಲ್ಲಾ ನಿಭಾಯಿಸುತ್ತಿದ್ದಾರೆ ಎಂದರು..

ನಮ್ಮ ತಾಲ್ಲೂಕಿನಲ್ಲಿ ಸಮಸ್ಯೆಗಳ ಇದ್ದಾವೆ ಆದರೂ ಅಧಿಕಾರಿಗಳ ಸಂಪರ್ಕದಲ್ಲಿ‌ ಇದ್ದೇನೆ. ರೆಸಾರ್ಟ‌ನಲ್ಲೇ ತಾಲ್ಲೂಕಿನ ಸಮಸ್ಯೆ ಬಗೆಹರಿಸುತ್ತಿದ್ದಾರೆ ಎಂದು ಜಿಲ್ಲೆಯ ಮಳವಲ್ಲಿ ತಾಲ್ಲೂಕಿನ ಕಾರ್ಯಕರ್ತರು ಹೇಳ್ತಾರೆ..Body:NoConclusion:No

For All Latest Updates

TAGGED:

Devanahalli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.