ಬೆಂಗಳೂರು: ಟೆಕ್ಕಿಯೊಬ್ಬಳ ಜೊತೆ ಉಬರ್ ಚಾಲಕ ಅಸಭ್ಯ ವರ್ತನೆ ಮಾಡಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿ ನಡೆದಿದೆ.
ತಿರುಮಲಯ್ಯ ಅಸಭ್ಯ ವರ್ತನೆ ಮಾಡಿದ ಉಬರ್ ಚಾಲಕ ಎನ್ನಲಾಗಿದೆ. ವೈಟ್ ಫೀಲ್ಡ್ನಿಂದ ಕೆಲಸ ಮುಗಿಸಿ ತನ್ನ ಮನೆಗೆ ತೆರಳಲು ಟೆಕ್ಕಿಯೊಬ್ಬರು ಕ್ಯಾಬ್ ಬುಕ್ ಮಾಡಿದ್ದಾರೆ. ಕ್ಯಾಬ್ ಹತ್ತಿದಾಗ ಚಾಲಕ ಅಸಭ್ಯವಾಗಿ ವರ್ತಿಸಿ, ಬೆದರಿಸಿ ಆಕೆಯ ಜೊತೆ ಅಸಭ್ಯ ವರ್ತನೆ ತೋರಿದ್ದಾನೆ ಎಂದು ಆರೋಪಿಸಿ ನೊಂದ ಮಹಿಳೆ ಉಬರ್ ಚಾಲಕನ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ.
ಇನ್ನು ನಗರ ಪೊಲೀಸರು ಸಂಬಂಧಪಟ್ಟ ಪೊಲೀಸರಿಗೆ ದೂರು ನೀಡಿದ್ದು, ಚಾಲಕನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.