ಬೆಂಗಳೂರು: ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬಂಧಿತರು ತಮಿಳುನಾಡು ಮೂಲದ ಇಬ್ಬರು ವ್ಯಕ್ತಿಗಳಾಗಿದ್ದು, ಇವರಿಂದ 18.36 ಲಕ್ಷ ರೂ. ವಶಕ್ಕೆ ಪಡದುಕೊಳ್ಳಲಾಗಿದೆ. ಇದರಲ್ಲಿ ಯೂರೋಪ್, ಯುಎಸ್ ಹಾಗೂ ಕೆನಡಿಯನ್ ಡಾಲರ್ಸ್, ಸ್ವಿಸ್ ಫ್ರಾಂಕ್, ಜಪಾನೀಸ್ ಕರೆನ್ಸಿಗಳು ಪತ್ತೆಯಾಗಿವೆ.
ಈ ಇಬ್ಬರು ಕರೆನ್ಸಿಯನ್ನು ಬ್ಯಾಗೇಜ್ ಹಾಗೂ ಶೂಗಳಲ್ಲಿ ಅಡಗಿಸಿಟ್ಟು ವಿಮಾನದಲ್ಲಿ ಸಾಗಿಸುವ ಪ್ರಯತ್ನ ಮಾಡುತ್ತಿದ್ದ ವೇಳೆ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಕೈ ಸಿಕ್ಕಿ ಬಿದ್ದಿದ್ದಾರೆ.