ನೆಲಮಂಗಲ: ಮಾಗಡಿಯ ಕುದೂರಿನ ಮಲ್ಲಿಗುಂಟೆಯ ಕಾಲೋನಿಯಲ್ಲಿ ಎಸ್‍ಇಪಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕಾಮಗಾರಿಯ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮಾಡಿದಾಗ ಅಲ್ಲಿಂದ ಎಂಜಿನಿಯರ್ ಕಾಲ್ಕಿತ್ತಿದ್ದಾನೆ.
ಸ್ಥಳೀಯ ಶಾಸಕರು ಮಲ್ಲಿಗುಂಟೆ ಗ್ರಾಮಕ್ಕಾಗಮಿಸಿದಾಗ ಇಲ್ಲಿನ ಚರಂಡಿ ಅವ್ಯವಸ್ಥೆಯ ಬಗ್ಗೆ ಗ್ರಾಮಸ್ಥರು ಹೇಳಿದ್ದರು. ಶಾಸಕ ಎ.ಮಂಜುನಾಥ್ ಮೊದಲಿಗೆ ಚರಂಡಿ ವ್ಯವಸ್ಥೆ ಸರಿ ಮಾಡಿ ನಂತರ ರಸ್ತೆ ಕಾಮಗಾರಿಗೆ ಕೈ ಹಾಕುವಂತೆ ಗ್ರಾಮಸ್ಥರ ಸಮ್ಮುಖದಲ್ಲಿ ಸೂಚಿಸಿದ್ದರು. ಅದರೆ ಎಂಜಿನಿಯರ್ ಮತ್ತು ಗುತ್ತಿಗೆದಾರರು ಉಪಯೋಗವಿಲ್ಲದ ಕಡೆ ಕಾಂಕ್ರೀಟ್ ಚರಂಡಿ ನಿರ್ಮಿಸಿದ್ದಾರೆ. ಜೊತೆಗೆ ರಸ್ತೆಗೆ ಮಣ್ಣು ಮಿಶ್ರಿತ ಸಿಮೆಂಟ್ ಕಾಂಕ್ರೀಟ್ ಹಾಕುತ್ತಿದ್ದಾರೆ. ಅವ್ಯವಸ್ಥೆಯಿಂದಿರುವ ಚರಂಡಿಯನ್ನು ಸರಿ ಮಾಡದೆ ಮತ್ತು ಕಳೆಪೆ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಪ್ರಶ್ನಿಸಲು ಮುಂದಾದ್ರೆ ಕಾಂಟ್ರಾಕ್ಟರ್ ಸಾಗರ್ ಹಾಗೂ ಎಂಜಿನಿಯರ್ ರಾಜಣ್ಣ ಗ್ರಾಮಸ್ಥರಿಗೆ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಯಾವಾಗ ಗ್ರಾಮಸ್ಥರು ಅಧಿಕಾರಿ ಮತ್ತು ಗುತ್ತಿಗೆದಾರನ ವಿರುದ್ಧ ತಮ್ಮ ಅಕ್ರೋಶ ಹೊರ ಹಾಕಿದರೋ ಆಗ ಎಂಜಿನಿಯರ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಜನರಿಗೆ ಅನುಕೂಲವಾಗುವಂತಹ ಕಾಮಗಾರಿ ಮಾಡುವ ಬದಲು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೇವಲ ದುಡ್ಡು ಹೊಡೆಯುವ ಕಾರಣಕ್ಕಾಗಿಯೇ ಕಳಪೆ ಕಾಮಾಗಾರಿ ನಡೆಸುತ್ತಿದ್ದಾರೆನ್ನುವುದು ಗ್ರಾಮಸ್ಥರ ಆರೋಪ.