ಬೆಂಗಳೂರು: ಬಿಎಂಟಿಸಿ ಬಸ್ ನಿಲ್ದಾಣನಲ್ಲಿ ಬಸ್ ಚಾಲಕನೇ ಕಳ್ಳತನ ಮಾಡಿರುವ ಘಟನೆ ಯಶವಂತಪುರ ಬಸ್ ಸ್ಟ್ಯಾಂಡ್ನಲ್ಲಿ ಕಂಡುಬಂದಿದೆ.
ಬಿಎಂಟಿಸಿ ಡ್ರೈವರ್ ಲಿಂಗಪ್ಪ ಮೊಬೈಲ್ ಕಳ್ಳತನ ಮಾಡಿರುವ ಆರೋಪಿ. ಯಶವಂತಪುರ ಬಸ್ ಸ್ಟ್ಯಾಂಡ್ನಲ್ಲಿ ಕಂಡಕ್ಟರ್ ಮಲಗಿದ್ದ ವೇಳೆ ಚಾಲಕ ಲಿಂಗಪ್ಪ ಈ ಕೃತ್ಯ ಎಸಗಿದ್ದಾನೆ. ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದುಬಂದಿದೆ.
ಕಂಡಕ್ಟರ್ ಎದ್ದು ಮೊಬೈಲ್ ನೋಡಿದಾಗ ಮೊಬೈಲ್ ನಾಪತ್ತೆಯಾಗಿತ್ತು. ಸುತ್ತಮುತ್ತ ವಿಚಾರಿಸಿ, ನಂತ್ರ ಸಿಸಿಟಿವಿ ನೋಡಿದಾಗ ಚಾಲಕನ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಹಿನ್ನೆಲೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.