ETV Bharat / state

ಒಗ್ಗಟ್ಟಿನ ಸಂದೇಶ ಸಾರಿದ ಮೈತ್ರಿ ಪಕ್ಷದ ನಾಯಕರು...ಮಾ.31 ರಂದು ರಾಹುಲ್ ನೇತೃತ್ವದ ಬೃಹತ್​ ಸಾರ್ವಜನಿಕ ಸಭೆ - undefined

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ಚುನಾವಣೆಯ ಕುರಿತು ಚರ್ಚಿಸಿ ಹಲವು ನಿರ್ಣಯ ಕೈಗೊಂಡಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಜಂಟಿ ಸುದ್ದಿಗೋಷ್ಠಿ
author img

By

Published : Mar 20, 2019, 9:33 AM IST

ಬೆಂಗಳೂರು: ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಸಾರ್ವಜನಿಕರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶ ಸಾರಿದರು.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಸಿಎಂ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಸಚಿವ ಡಿ.ಕೆ ಶಿವಕುಮಾರ್, ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ಪಾಲ್ಗೊಂಡಿದ್ದರು.

ಸಿದ್ದರಾಮಯ್ಯ ಮಾತನಾಡಿ, ಮೈತ್ರಿ ಮೂಲಕವೇ ಮುಂದಿನ ಚುನಾವಣೆಗೆ ಪ್ರಚಾರ ಮಾಡುವ ಕುರಿತು ಚರ್ಚಿಸಿ ನಿರ್ಣಯ ಕೈಗೊಂಡಿದ್ದೇವೆ. ಸಮ್ಮಿಶ್ರ ಸರ್ಕಾರ ರಚನೆಯಾದ ಸಂದರ್ಭದಲ್ಲೇ ಈ ಮಾತುಕತೆ ಆಗಿತ್ತು. ಉಪ ಚುನಾವಣೆಯಲ್ಲಿಯೂ ಕೂಡ ಒಟ್ಟಾಗಿ ಎದುರಿಸಿದ್ದೇವು. ಶಿವಮೊಗ್ಗದಲ್ಲಿ ಬಿಟ್ಟರೆ ಜಮಕಂಡಿ, ರಾಮನಗರ, ಬಳ್ಳಾರಿ, ಮಂಡ್ಯದಲ್ಲಿ ಭಾರಿ ಅಂತರದ ಗೆಲುವು ಸಾಧಿಸಿದೇವು. ಶಿವಮೊಗ್ಗದಲ್ಲಿ ಕೇವಲ 50 ಮತಗಳ ಅಂತರದಿಂದ ಸೋತೆವು. ಈ ಸಾರಿ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸುವ ಗುರಿ ಹೊಂದಿದ್ದೇವೆ. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ನಾವು ಮತ್ತೆ ಒಂದಾಗಿದ್ದೇವೆ ಎಂದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಜಂಟಿ ಸುದ್ದಿಗೋಷ್ಠಿ

ದೇವೇಗೌಡರು, ರಾಹುಲ್ ಗಾಂಧಿ ಉಪಸ್ಥಿತರಿರುವ ಒಂದು ಸಭೆ ಮಾ.31 ರಂದು ಬೆಂಗಳೂರಿನ ಸಮೀಪದಲ್ಲೇ ಎಲ್ಲಾದರು ಹಮ್ಮಿಕೊಳ್ಳುತ್ತೇವೆ. ರಾಹುಲ್ ಭೇಟಿಗೆ ಸಮಯ ಕೇಳಿದ್ದೇವೆ. ಸಿಗುವ ನಿರೀಕ್ಷೆ ಇದೆ. ಇದು ಐತಿಹಾಸಿಕ ಸಾರ್ವಜನಿಕ ಸಭೆ ಆಗಲಿದ್ದು, ಅಲ್ಲಿಯೇ ಚುನಾವಣಾ ರಣಕಹಳೆ ಮೊಳಗಲಿದೆ. ರಾಜ್ಯಕ್ಕೆ ಮಾತ್ರವಲ್ಲ, ಅಕ್ಕಪಕ್ಕದ ರಾಜ್ಯಕ್ಕೂ ಸಂದೇಶ ನೀಡುತ್ತೇವೆ. 28 ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಆಶಯ. ಎರಡೂ ಪಕ್ಷಗಳೂ ಒಟ್ಟಾಗಿ ಬಿಜೆಪಿಯನ್ನು ಮಣಿಸುವುದು ನಮ್ಮ ಏಕೈಕ ಗುರಿ ಎಂದು ವಿವರಿಸಿದರು.

ರಾಜ್ಯದಿಂದಲೇ ದೇಶಕ್ಕೆ ಉತ್ತಮ ಸಂದೇಶ:

ಸಿಎಂ ಎಚ್. ಡಿ ಕುಮಾರಸ್ವಾಮಿ ಮಾತನಾಡಿ, ದೇಶದಲ್ಲಿ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಉತ್ತಮ ಆಡಳಿತ ಕೊಡುವ ಮೂಲಕ ಕರ್ನಾಕದಿಂದಲೇ ದೇಶಕ್ಕೆ ಉತ್ತಮ ಸಂದೇಶ ತಲುಪಲಿ ಎಂದು ಸಮ್ಮಿಶ್ರ ಸರ್ಕಾರ ರಚಿಸಿದ್ದೇವೆ. ಪಕ್ಷದ ಕಾರ್ಯಕರ್ತರಿಗೆ ಮತದಾರರನ್ನು ವಿಶ್ವಾಸಕ್ಕೆ ಪಡೆದು 28 ಕ್ಷೇತ್ರವನ್ನು ಗೆಲ್ಲುವ ಸವಾಲನ್ನು ಸ್ವೀಕರಿಸಿದ್ದೇವೆ. ದೇವೇಗೌಡರು, ಸಿದ್ದರಾಮಯ್ಯ ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ಎರಡೂ ಪಕ್ಷದ ನಾಯಕರು ಐತಿಹಾಸಿಕ ಚುನಾವಣಾ ಪ್ರಚಾರ ಸಭೆ ನಡೆಸಲು ತೀರ್ಮಾನಿಸಿದ್ದು, ದೇಶಕ್ಕೆ ಒಂದು ಸಂದೇಶ ನೀಡಲು ತೀರ್ಮಾನಿಸಿದ್ದೇವೆ ಎಂದರು.

ಸಣ್ಣಪುಟ್ಟ ಗೊಂದಲ ನಿವಾರಿಸಿ ಕೊಳ್ಳುತ್ತೇವೆ:

ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರು ಮಾತನಾಡಿ, ಈ ಪೂರ್ವಭಾವಿ ಚರ್ಚೆಯಲ್ಲಿ ಎಲ್ಲಾ ಸೇರಿ ಒಟ್ಟಾಗಿ ಮಾತುಕತೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ಕಾಲ ಕಡಿಮೆ ಇದೆ. ನಮಗೆ ವಿಂಗಡಣೆಯಾದ ಕ್ಷೇತ್ರಗಳಲ್ಲಿ ಎದುರಾಗಿರುವ ಭಿನ್ನಾಭಿಪ್ರಾಯಗಳನ್ನು ಆದಷ್ಟು ಬೇಗ ನಿವಾರಿಸಿಕೊಳ್ಳಲು ತೀರ್ಮಾನಿಸಿದ್ದೇವೆ. ಹಳೆ ಮೈಸೂರು ಭಾಗದಲ್ಲಿ ಮೊದಲ ಹಂತದ ಮತದಾನ ಆಗಲಿದೆ. ಆದ್ದರಿಂದ ಈ ಭಾಗದ ಸಮಸ್ಯೆ ಮೊದಲು ಬಗೆಹರಿಸಿಕೊಳ್ಳುತ್ತೇವೆ. ನಾವು ನಾಯಕರ ಹಂತದಲ್ಲೇ ಸಮಾಲೋಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಯಾವುದೇ ಜಿಲ್ಲಾ ನಾಯಕರು ಒಡಕಿನ ಮಾತು ಆಡಬಾರದು ಎಂದು ಸೂಚಿಸಿದ್ದೇವೆ. ಅಸಮಾಧಾನ ಇದ್ದರೆ ಅದನ್ನೂ ಬಗೆಹರಿಸಿಕೊಳ್ಳುತ್ತೇವೆ ಎಂದರು.

ನಂತರ ಮಾತನಾಡಿದ ದಿನೇಶ್ ಗುಂಡೂರಾವ್, ನಾವು ಲೋಕಸಭೆ ಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗಿದ್ದೇವೆ. ರಾಹುಲ್ ಕೂಡ ಬರ್ತಾರೆ. ಅತ್ಯಂತ ವ್ಯವಸ್ಥಿತವಾಗಿ ಜನರನ್ನು ಹಾಗೂ ಕಾರ್ಯಕರ್ತರನ್ನು ತಲುಪುವ ಕಾರ್ಯವನ್ನು ಮಾಡಲಿದ್ದೇವೆ ಎಂದರು.

Intro:Body:

ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಸುದ್ಧಿಗೋಷ್ಠಿ ಮೂಲಕ ಒಗ್ಗಟ್ಟಿನ ಸಂದೇಶ ಸಾರಿದ ನಾಯಕರು

ಈ ಸ್ಟೋರಿ ನಿನ್ನೆ ಹೋಗಿದ್ಯಾ ಅಂತ ನೋಡ್ಕೋಳಿ

ಬೆಂಗಳೂರು: ನಗರದ ಜಂಟಿ ಸುದ್ದಗೋಷ್ಠಿಯ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶ ಸಾರಿದರು.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಸಿಎಂ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಿಎಂ ಹಾಗೂ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಸಚಿವ ಡಿಕೆ ಶಿವಕುಮಾರ್, ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ಪಾಲ್ಗೊಂಡಿದ್ದರು.

ಈ ಹಿಂದೆಯೇ ಮಾತುಕತೆ ಆಗಿತ್ತು

ಸಿದ್ದರಾಮಯ್ಯ ಮಾತನಾಡಿ, ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ಮುಂದಿನ ಚುನಾವಣೆಗೆ ಪ್ರಚಾರ ಮಾಡುವ ಕುರಿತು ಚರ್ಚಿಸಿ ನಿರ್ಣಯ ಕೈಗೊಂಡಿದ್ದೇವೆ. ಇದು ಇಂದಿನ ನಿರ್ಧಾರ ಅಲ್ಲ. ವಿಧಾನಸಭೆಯಲ್ಲಿ ಮೈತ್ರಿ ಮಾಡಿಕೊಂಡಾಗಲೇ ಸಮ್ಮಿಶ್ರ ಸರ್ಕಾರ ರಚನೆಯಾದ ಸಂದರ್ಭದಲ್ಲೇ ಈ ಮಾತುಕತೆ ಆಗಿತ್ತು. ನಂತರದ ಉಪ ಚುನಾವಣೆ ಕೂಡ ಒಟ್ಟಾಗಿ ಎದುರಿಸಿದ್ದೆವು. ಶಿವಮೊಗ್ಗದಲ್ಲಿ ಬಿಟ್ಟರೆ ಬೇರೆ ಕಡೆ ನಡೆದ ಉಪಚುನಾವಣೆಯಲ್ಲಿ ಗೆದ್ದೆವು. ಜಮಕಂಡಿ, ರಾಮನಗರ, ಬಳ್ಳಾರಿ, ಮಂಡ್ಯದಲ್ಲಿ ಭಾರಿ ಅಂತರದ ಗೆಲುವು ಸಾಧಿಸಿದೆವು. ಶಿವಮೊಗ್ಗದಲ್ಲಿ ಕೇವಲ 50 ಮತಗಳ ಅಂತರದಿಂದ ಸೋತೆವು. ಈ ಸಾರಿ ಬಿಜೆಪಿಯ ನ್ನು ಸಂಪೂರ್ಣವಾಗಿ ಸೋಲಿಸುವ ಗುರಿ ಹೊಂದಿದ್ದೇವೆ. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ನಾವು ಮತ್ತೆ ಒಂದಾಗಿದ್ದೇವೆ ಎಂದರು.

ಪಕ್ಷದ ಎಲ್ಲಾ ಹಂತದ ನಾಯಕರು ತಮ್ಮ ಭಿನ್ನಾಭಿಪ್ರಾಯ ಮರೆತು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಒಂದಾಗುವಂತೆ ನಿರ್ದೇಶನ ನೀಡುತ್ತಿದ್ದೇವೆ. ಎರಡೂ ಪಕ್ಷದಿಂದ ಕಟ್ಟುನಿಟ್ಟಿನ ಸೂಚನೆ ಜೆಗೆ ಎರಡೂ ಪಕ್ಷದಿಂದ ಒಬ್ಬ ಹಿರಿಯರನ್ನು ವೀಕ್ಷಕರನ್ನಾಗಿ ನೇಮಿಸುತ್ತೇವೆ. ನಮ್ಮ ನಿರ್ಧಾರಕ್ಕೆ ಕಾರ್ಯಕರ್ತರು ಒಪ್ಪಿ ಕಾರ್ಯನಿರ್ವಹಿಸುತ್ತಾರೆ ಎಂಬ ನಂಬಿಕೆ, ವಿಶ್ವಾಸ ಇದೆ. ನಾವು ಜಂಟಿಯಾಗಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ. ದೇವೇಗೌಡರು, ರಾಹುಲ್ ಗಾಂಧಿ ಉಪಸ್ಥಿತರಿರುವ ಒಂದು ಸಭೆ ಮಾ.31 ರಂದು ಬೆಂಗಳೂರಿನ ಸಮೀಪದಲ್ಲೇ ಎಲ್ಲಾದರೂ ಹಮ್ಮಿಕೊಳ್ಳುತ್ತೇವೆ. ರಾಹುಲ್ ಭೇಟಿಗೆ ಸಮಯ ಕೇಳಿದ್ದೇವೆ. ಸಿಗುವ ನಿರೀಕ್ಷೆ ಇದೆ. ಅಂದು ಸಂಜೆ ಸಭೆ ನಡೆಯಲಿದೆ. ಇದು ಐತಿಹಾಸಿಕ ಸಾರ್ವಜನಿಕ ಸಭೆ ಆಗಲಿದ್ದು ಅಲ್ಲಿಯೇ ಚುನಾವಣಾ ರಣಕಹಳೆ ಮೊಳಗಲಿದೆ. ರಾಜ್ಯಕ್ಕೆ ಮಾತ್ರವಲ್ಲ ಅಕ್ಕಪಕ್ಕದ ರಾಜ್ಯಕ್ಕೂ ಸಂದೇಶ ನೀಡುತ್ತೇವೆ. 28 ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಆಶಯ. ಎರಡೂ ಪಕ್ಷಗಳೂ ಒಟ್ಟಾಗಿ ಬಿಜೆಪಿ ಮಣಿಸುವುದು ನಮ್ಮ ಏಕೈಕ ಗುರಿ ಎಂದು ವಿವರಿಸಿದರು.

ರಾಜ್ಯದಿಂದಲೇ ದೇಶಕ್ಕೆ ಉತ್ತಮ ಸಂದೇಶ

ಸಿಎಂ ಎಚ್. ಡಿ. ಕುಮಾರಸ್ವಾಮಿ ಮಾತನಾಡಿ, ದೇಶದಲ್ಲಿ ಇಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಉತ್ತಮ ಆಡಳಿತ ಕೊಡುವ ಮೂಲಕ ಕರ್ನಾಕದಿಂದಲೇ ದೇಶಕ್ಕೆ ಉತ್ತಮ ಸಂದೇಶ ತಲುಪಲಿ ಎಂದು ಸಮ್ಮಿಶ್ರ ಸರ್ಕಾರ ರಚಿಸಿದ್ದೇವೆ. ಸಭೆ ನಡೆಸಿದ್ದೇವೆ ಇಂದು. ಅದರಲ್ಲಿ ಪಕ್ಷದ ಕಾರ್ಯಕರ್ತರಿಗೆ, ಮತದಾರರನ್ನು ವಿಶ್ವಾಸಕ್ಕೆ ಪಡೆದು 28 ಕ್ಷೇತ್ರವನ್ನು ಗೆಲ್ಲುವ ಸವಾಲನ್ನು ಸ್ವೀಕರಿಸಿದ್ದೇವೆ. ಮೊದಲ ಹಂತದ ಚರ್ಚೆ ನಿನ್ನೆ ಆಗಿತ್ತು, ಇಂದು ಮತ್ತೊಂದು ಸಭೆ ನಡೆಯಲಿದೆ. ಒಂದೆರಡು ಕ್ಷೇತ್ರದಲ್ಲಿ ಸಣ್ಣಪುಟ್ಟ ಸಮಸ್ಯೆ ಇದೆ. ಅದನ್ನು ಬಗೆಹರಿಸಿಕೊಳ್ಳುತ್ತೇವೆ. ದೇವೇಗೌಡರು, ಸಿದ್ದರಾಮಯ್ಯ ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ಎರಡೂ ಪಕ್ಷದ ನಾಯಕರು ಐತಿಹಾಸಿಕ ಚುನಾವಣಾ ಪ್ರಚಾರ ಸಭೆ ನಡೆಸಲು ತೀರ್ಮಾನಿಸಿದ್ದೇವೆ. ಎರಡೂ ಪಕ್ಷದ ನಾಯಕರು ದೇಶಕ್ಕೆ ಒಂದು ಸಂದೇಶ ನೀಡಲು ತೀರ್ಮಾನಿಸಿದ್ದೇವೆ. ಉಪಚುನಾವಣೆಯಲ್ಲಿ ಐದರ ಪೈಕಿ ನಾಲ್ಕರಲ್ಲಿ ಗೆದ್ದಿದ್ದೇವೆ. ಈ ಸಾರಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದೆ. ಎರಡೂ ಪಕ್ಷದ ನಾಯಕರು ಒಟ್ಟಾಗಿ ಪ್ರಚಾರ ನಡೆಸುತ್ತೇವೆ. ಎಲ್ಲಿಯೂ ಸಮಸ್ಯೆ ಆಗದ ರೀತಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಸಮ್ಮಿಶ್ರ ಸರ್ಕಾರ ರಚನೆ ನಂತರ ಕಾಂಗ್ರೆಸ್ ಬಲ ಹೆಚ್ಚಾಗಿದೆ, ಈ ಚುನಾವಣೆಯಲ್ಲಿ ಅದು ಇನ್ನಷ್ಟು ಬಲಗೊಳ್ಳಲಿದೆ ಎಂದರು.

ಸಣ್ಣಪುಟ್ಟ ಗೊಂದಲ ನಿವಾರಿಸಿ ಕೊಳ್ಳುತ್ತೇವೆ

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಮಾತನಾಡಿ, ಇಂದಿನ ಪೂರ್ವಭಾವಿ ಚರ್ಚೆಯಲ್ಲಿ ಎಲ್ಲಾಸೇರಿ ಒಟ್ಟಾಗಿ ಮಾತುಕತೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಕಾಲ ಕಡಿಮೆ ಇದೆ. ರಾಹುಲ್ ನೇತೃತ್ವದಲ್ಲಿ ಬೃಹತ್ ಸಭೆಗೆ ಸಿದ್ಧತೆ ಆರಂಭವಾಗಿದೆ. ಜತೆಗೆ ನಮಗೆ ವಿಂಗಡಣೆ ಆದ ಕ್ಷೇತ್ರಗಳಲ್ಲಿ ಎದುರಾಗಿರುವ ಭಿನ್ನಾಭಿಪ್ರಾಯ ಆದಷ್ಟು ಬೇಗ ನಿವಾರಿಸಿಕೊಳ್ಳಲು ತೀರ್ಮಾನಿಸಿದ್ದೇವೆ. ಹಳೆ ಮೈಸೂರು ಭಾಗದಲ್ಲಿ ಮೊದಲ ಹಂತದ ಮತದಾನ ಆಗಲಿದೆ. ಆದ್ದರಿಂದ ಈ ಭಾಗದ ಸಮಸ್ಯೆ ಮೊದಲು ಬಗೆಹರಿಸಿಕೊಳ್ಳುತ್ತೇವೆ. ನಾವು ನಾಯಕರ ಹಂತದಲ್ಲೇ ಸಮಾಲೋಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಯಾವುದೇ ಜಿಲ್ಲಾ ನಾಯಕರು ಒಡಕಿನ ಮಾತು ಆಡಬಾರದು ಎಂದು ಸೂಚಿಸಿದ್ದೇವೆ. ನಮಗೆ ಹೆಚ್ಚು ಕಾಲಾವಕಾಶ ಇಲ್ಲ. ಚುನಾವಣೆ ನಂತರ ರಾಜದಯದಲ್ಲಿ ಆಡಳಿತ ಮುಂದುವರಿದುಕೊಂಡು ಹೋಗಲಿದೆ. ಅಸಮಾಧಾನ ಇದ್ದರೆ ಅದನ್ನೂ ಬಗೆಹರಿಸಿಕೊಳ್ಳುತ್ತೇವೆ ಎಂದರು.

ನಾವು ನಮ್ಮಲ್ಲಿರುವ ಭಿನ್ನಾಭಿಪ್ರಾಯ ಇದ್ದರೆ ಸಮಾಲೋಚನೆ ನಡೆಸಿ ಬಗೆಹರಿಸಿಕೊಳ್ಳುತ್ತೇವೆ. ಇದರ ಬಗ್ಗೆ ಅನುಮಾನ ಬೇಡ. ರಾಷ್ಟ್ರೀಯ ಪಕ್ಷದನಾಯಕರ ಮುಖಂಡತ್ವದಲ್ಲಿ ಸಭೆ ನಡೆಸಲು ತೀರ್ಮಾನ ಮಾಡಿದ್ದೇವೆ. ಮಹಾಘಟಬಂಧನ್ ಬಗ್ಗೆ ನರೇಂದ್ರ ಮೋದಿ ಲಘುವಾಗಿ ಮಾತನಾಡುತ್ತಿದ್ದಾರೆ. ಅವರು ಕೂಡ 15 ರಾಜ್ಯದಲ್ಲಿ ಇದೇ ಮಾದರಿ ಸರ್ಕಾರ ಅನ್ನುವುದನ್ನು ಅರಿಯಬೇಕು. ನಾವು ಅವರಿಗೆ ನಮ್ಮ ಒಕ್ಕಟ್ಟಿನ ಮೂಲಕ ಉತ್ತರ ಕೊಡುತ್ತೇವೆ. ಕೆಲವು ರಾಜ್ಯದಲ್ಲಿ ಕೊಂಚ ಭಿನ್ನಾಭಿಪ್ರಾಯ ಇದ್ದರೂ, ಮಹಾಘಟಬಂಧನ್ ಸುಭದ್ರವಾಗಲಿದೆ. ನಾವು ಹಲವು ಕಡೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಒಟ್ಟಾಗಿ ಪ್ರವಾಸ ಮಾಡುತ್ತೇವೆ. ಹೆಚ್ಚು ಸ್ಥಾನ ಗೆಲ್ಲುತ್ತೇವೆ. ನಾವು ಹೇಳಿದ್ದನ್ನು ಕೃತಿಗೆ ಇಳಿಸಿ ತೋರಿಸುತ್ತೇವೆ ಎಂದರು.

ದಿನೇಶ್ ಗುಂಡೂರಾವ್ ಮಾತನಾಡಿ, ನಾವು ಲೋಕಸಭೆ ಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗಿದ್ದೇವೆ. ರಾಹುಲ್ ಕೂಡ ಬರ್ತಾರೆ. ಅತ್ಯಂತ ವ್ಯವಸ್ಥಿತವಾಗಿ ಜನರನ್ನು ಹಾಗೂ ಕಾರ್ಯಕರ್ತರನ್ನು ತಲುಪುವ ಕಾರ್ಯವನ್ನು ಮಾಡಲಿದ್ದೇವೆ ಎಂದರು.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.