ETV Bharat / state

ಶಾಸಕರ ರಾಜೀನಾಮೆ ಕುರಿತು ಸುಪ್ರೀಂ ತೀರ್ಪು: ದೋಸ್ತಿಗಳಲ್ಲಿ ಹೆಚ್ಚಿದ ಆತಂಕ

author img

By

Published : Jul 17, 2019, 5:25 PM IST

ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ರಾಜೀನಾಮೆ ಬಗ್ಗೆ ಸ್ಪೀಕರ್ ತೀರ್ಮಾನ ತೆಗೆದುಕೊಳ್ಳಬೇಕು. ಅಲ್ಲಿಯ ತನಕ ರಾಜೀನಾಮೆ ನೀಡಿದ‌ ಶಾಸಕರು ಅಧಿವೇಶನಕ್ಕೆ ಹಾಜರಾಗುವ ಬಗ್ಗೆ ಒತ್ತಡ ಹಾಕುವಂತಿಲ್ಲ ಎಂದು ಹೇಳಿರುವುದು ಆಡಳಿತ ಪಕ್ಷದವರಿಗೆ ಆತಂಕ ಮೂಡಿಸಿದೆ.

ಸುಪ್ರೀಂ ತೀರ್ಪು

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಕುರಿತು ಸುಪ್ರೀಂಕೋರ್ಟ್ ಇಂದು ನೀಡಿದ ಮಧ್ಯಂತರ ತೀರ್ಪಿನಿಂದ ದೋಸ್ತಿ ಪಕ್ಷಗಳಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ.

ನ್ಯಾಯಾಲಯದಲ್ಲಿ ಬಂಡಾಯ ಶಾಸಕರಿಗೆ ಕಪಾಳ ಮೋಕ್ಷವಾಗಲಿದೆ, ಶಾಸಕರನ್ನು ಅನರ್ಹಗೊಳಿಸುವುದಕ್ಕೆ ಅವಕಾಶ ಸಿಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ರಾಜೀನಾಮೆ ಬಗ್ಗೆ ಸ್ಪೀಕರ್ ತೀರ್ಮಾನ ತೆಗೆದುಕೊಳ್ಳಬೇಕು. ಅಲ್ಲಿಯ ತನಕ ರಾಜೀನಾಮೆ ನೀಡಿದ‌ ಶಾಸಕರು ಅಧಿವೇಶನಕ್ಕೆ ಹಾಜರಾಗುವ ಬಗ್ಗೆ ಒತ್ತಡ ಹಾಕುವಂತಿಲ್ಲ ಎಂದು ಹೇಳಿರುವುದು ಆಡಳಿತ ಪಕ್ಷದವರಿಗೆ ಆತಂಕ ಮೂಡಿಸಿದೆ.

ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಲಿದ್ದು, ಈ ಸಂದರ್ಭದಲ್ಲಿ ಬಂಡಾಯ ಶಾಸಕರು ಸದನಕ್ಕೆ ಹಾಜರಾಗಿ ವಿಪ್​ಗೆ ಹೆದರಿ ಸರ್ಕಾರದ ಪರವಾಗಿ ಮತ ಚಲಾಯಿಸಿದರೆ ಸರ್ಕಾರ ವಿಶ್ವಾಸಮತ ಸಾಬೀತು ಪಡಿಸುವ ಅವಕಾಶ ಹೆಚ್ಚಿತ್ತು. ಆದರೆ ಅತೃಪ್ತರು ತಾವು ಸದನಕ್ಕೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಇದರಿಂದ ಆಡಳಿತ ಪಕ್ಷಗಳಲ್ಲಿ ಆತಂಕ ಮನೆ ಮಾಡಿದೆ.

ಸ್ಪೀಕರ್ ಅವರು ಬಂಡಾಯ ಶಾಸಕರ ರಾಜೀನಾಮೆ ಅಂಗೀಕರಿಸಿದರೆ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸಂಖ್ಯಾಬಲ ಕುಸಿದು ಅಲ್ಪಮತಕ್ಕೆ ಬರಲಿದೆ. ಇಂತಹ ಸಂದರ್ಭದಲ್ಲಿ ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸುವುದು ಕಷ್ಟಕರವಾಗಿದೆ. ಸ್ಪೀಕರ್ ಅವರು ರಾಜೀನಾಮೆ ನೀಡಿದ ಶಾಸಕರನ್ನು ಕಾಂಗ್ರೆಸ್ ಪಕ್ಷದ ದೂರು ಆಧರಿಸಿ ಒಂದು ವೇಳೆ ಅನರ್ಹಗೊಳಿಸಿದರೂ ಅದಕ್ಕೆ ಹೆಚ್ವಿನ ಕಾಲಾವಕಾಶ ಇಲ್ಲದಿರುವುದರಿಂದ ಆ ಸಾಧ್ಯತೆ ತೀರಾ ಕಡಿಮೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

Intro: ಸುಪ್ರೀಂ ತೀರ್ಪು : ಮೈತ್ರಿ ಪಾಳಯದಲ್ಲಿ ನಿರಾಸೆ

ಬೆಂಗಳೂರು : ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಕುರಿತು ಸುಪ್ರೀಂಕೋರ್ಟ್ ಇಂದು ನೀಡಿದ ಮದ್ಯಂತರ ತೀರ್ಪಿನಿಂದ ದೋಸ್ತಿ ಪಕ್ಷಗಳಲ್ಲಿ ನಿರಾಸೆ ಕಾರ್ಮೋಡ ಕವಿದಿದೆ.

ನ್ಯಾಯಾಲಯ ದಲ್ಲಿ ಬಂಡಾಯ ಶಾಸಕರಿಗೆ ಕಪಾಳಮೋಕ್ಷ ವಾಗಲಿದೆ, ಶಾಸಕರನ್ನು ಅನರ್ಹಗೊಳಿಸುವುದಕ್ಕೆ ಅವಕಾಶ ಸಿಗಲಿದೆ, ಎಂದು ಬಾವಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್ ತನ್ನ ತೀರ್ಪಿನ ಲ್ಲಿ ರಾಜೀನಾಮೆ ಬಗ್ಗೆ ಸ್ಪೀಕರ್ ತೀರ್ಮಾನ ತಗೆದುಕೊಳ್ಳುವ ತನಕ ರಾಜೀನಾಮೆ ನೀಡಿದ‌ ಶಾಸಕರು ಅಧಿವೇಶನಕ್ಕೆ ಹಾಜರಾಗುವ ಬಗ್ಗೆ ತೀರ್ಮಾನ ತಗೆದುಕೊಳ್ಳುವ ಲ್ಲಿ ಸರ್ವ ಸ್ವತಂತ್ರರು ಎಂದು ತಿಳಿಸಿರುವುದು ಆಡಳಿತ ಪಕ್ಷದವರಿಗೆ ಆತಂಕ ಮೂಡಿಸಿದೆ.

Body: ನಾಳೆ ಗುರುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಲಿದ್ದು ಈ ಸಂದರ್ಭದಲ್ಲಿ ಬಂಡಾಯ ಶಾಸಕರು ಶನಕ್ಕೆ ಹಾಜರಾಗಿ ವಿಪ್ ಗೆ ಹೆದರಿ ಸರಕಾರದ ಪರವಾಗಿ ಮತಚಲಾಯಿಸಿದರೆ ಸರಕಾರ ವಿಶ್ವಾಸಮತ ಗೆಲ್ಲುವ ಅವಕಾಶ ಹೆಚ್ಚಾಗಿತ್ತು. ಆದರೆ ಅತೃಪ್ತರು ತಾವು ಸದನಕ್ಕೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು ಇದರಿಂದ ಆತಂಕ ಆಡಳಿತ ಪಕ್ಷಗಳ ಲ್ಲಿ ಮನೆ ಮಾಡಿದೆ.

ಸ್ಪೀಕರ್ ಅವರು ಬಂಡಾಯ ಶಾಸಕರ ರಾಜೀನಾಮೆ ಅಂಗಿಕರಿಸಿದರೆ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸಂಖ್ಯಾಬಲ ಕುಸಿದು ಅಲ್ಪಮತಕ್ಕೆ ಬರಲಿದೆ. ಇಂತಹ ಸಂದರ್ಭದಲ್ಲಿ ನಡೆಯುವ ವಿಶ್ವಾಸಮತಯಾಚನೆಯಲ್ಲಿ ಸರಕಾರಕ್ಕೆ ಇರುವ ಬಹುಮತ ಸಾಬೀತುಪಡಿಸುವುದು ಕಷ್ಟಕರವಾಗಿದೆ.

ಸ್ಪೀಕರ್ ಅವರು ರಾಜೀನಾಮೆ ನೀಡಿದ ಶಾಸಕರನ್ನು ಕಾಂಗ್ರೆಸ್ ಪಕ್ಷದ ದೂರು ಆಧರಿಸಿ ಒಂದು ವೇಳೆ ಅನರ್ಹಗೊಳಿಸಿದರೂ ಅದಕ್ಕೆ ಹೆಚ್ವಿನ ಕಾಲಾವಕಾಶ ಇಲ್ಲದ್ದರಿಂದ ಆ ಸಾದ್ಯತೆ ತೀರಾ ಕಡಿಮೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

Conclusion: ವಿಶ್ವಾಸ ಮತ ಯಾಚನೆ ವೇಳೆ ಬಂಡಾಯ ಶಾಸಕರ ನೆರವಿಲ್ಲದೆ ಬಹುಮತ ಸಾಬೀತು ಪಡಿಸುವುದು ಅಷ್ಟು ಸುಲಭವಲ್ಲ ಎನ್ನುವುದು ಆಡಳಿತ ಪಕ್ಷಗಳಿಗೆ ಮನವರಿಕೆಯಾಗಿದೆ.ಹೀಗಾಗಿ ಸುಪ್ರೀ ಕೋರ್ಟ ತೀರ್ಪು ಅತೃಪ್ತರಿಗೆ ಅನುಕೂಲಕರವಾಗಿದ್ದು ಆಡಳಿತ ಪಕ್ಷಕ್ಕೆ ಅನಾನುಕೂಲಕರವಾಗಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.