ಬೆಂಗಳೂರು: ಬಿಬಿಎಂಪಿ ಆಚರಿಸುವ ಕೆಂಪೇಗೌಡ ದಿನಾಚರಣೆ ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀ ಪ್ರಶಸ್ತಿಗೆ ಹೆಬ್ಬಾಳದ ಸುಮಂಗಲಿ ಸೇವಾಶ್ರಮ ಟ್ರಸ್ಟ್ ಆಯ್ಕೆಯಾಗಿದ್ದು, ಈಟಿವಿ ಭಾರತದ ಜೊತೆ ಸಂಭ್ರಮ ಹಂಚಿಕೊಂಡಿದ್ದಾರೆ.
ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಹೆಸರಲ್ಲಿ ಐದು ವಿದ್ಯಾಸಂಸ್ಥೆಗಳಿಗೆ ತಲಾ ಐದು ಲಕ್ಷದಂತೆ ನಗದು ಪ್ರಶಸ್ತಿ ನೀಡಲು ಬಜೆಟ್ನಲ್ಲಿ 25 ಲಕ್ಷ ರೂಪಾಯಿ ಅನುದಾನ ಇಡಲಾಗಿತ್ತು. ಈ ಪ್ರಶಸ್ತಿಗೆ ಮೊದಲ ಸಂಸ್ಥೆಯಾಗಿ ಹೆಬ್ಬಾಳದ ಸುಮಂಗಲಿ ಸೇವಾಶ್ರಮ ಟ್ರಸ್ಟ್ ಆಯ್ಕೆಯಾಗಿದೆ.
ಇನ್ನು ಮೇಯರ್ ಗಂಗಾಂಬಿಕೆಯವರು ಮಹಿಳಾ ಮೇಯರ್ ಆಗಿರುವ ಹಿನ್ನೆಲೆಯಲ್ಲಿ ಈ ಬಾರಿ ಹಿರಿಯ ಸಾಧಕ ಮಹಿಳೆಯೊಬ್ಬರಿಗೆ "ವಿಶೇಷ ಪ್ರಶಸ್ತಿ" ನೀಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.