ETV Bharat / state

ಸಿಲಿಕಾನ್‌ಸಿಟಿಯಲ್ಲಿ ಪಿಒಪಿ ಗಣೇಶ ಮೂರ್ತಿಗಳು.. ಗಮನಕ್ಕೆ ಬಂದ್ರೂ ಕೈಕಟ್ಟಿ ಕುಳಿತ ಅಧಿಕಾರಿ ವರ್ಗ - POP

ಕುಂಬಳಗೋಡು, ಕೆಂಗೇರಿ ಸೇರಿ ನಗರದ ಹೊರವಲಯ ರಿಂಗ್ ರೋಡ್​ಗಳ ಬಳಿ ಎಗ್ಗಿಲ್ಲದೆ ಪಿಒಪಿ ಗಣೇಶ ಮೂರ್ತಿಗಳ ತಯಾರಿ ನಡೀತಿದೆ. ಹೀಗಾಗಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಈ ಬಾರಿಯೂ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವುದು ಕಷ್ಟ ಎನ್ನುತ್ತಿದ್ದಾರೆ ಸ್ವಯಂಸೇವಕರು.

ಪಿಒಪಿ ಗಣೇಶ ಮೂರ್ತಿ
author img

By

Published : Jun 9, 2019, 10:53 AM IST

ಬೆಂಗಳೂರು: ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಿಷೇಧಿಸಿ ಮೂರು ವರ್ಷ ಕಳೆದರೂ ಇಂದಿಗೂ ಸಾವಿರಾರು ಪಿಒಪಿ ಮೂರ್ತಿಗಳು ಸದ್ದಿಲ್ಲದೇ ತಯಾರಾಗುತ್ತಿವೆ. ಈ ಬಗ್ಗೆ ಪರಿಸರ ಪ್ರೇಮಿಗಳು, ಸರ್ಕಾರೇತರ ಸಂಘ ಸಂಸ್ಥೆಗಳ ಸ್ವಯಂ ಸೇವಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪಿಒಪಿ ಮೂರ್ತಿಗಳ ಕಡಿವಾಣಕ್ಕೆ ಮುಂದಾಗದೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಪರಿಸರ ಎನ್​​ಜಿಒ ಸ್ಥಾಪಕ ಗುರುಮೂರ್ತಾಚಾರ್

ಬೆಂಗಳೂರು ಹೊರವಲಯದ ಕುಂಬಳಗೋಡಿನಲ್ಲಿ ನಾಲ್ಕು ಎಕರೆಯಷ್ಟಿರುವ ಎರಡು ಯುನಿಟ್​ನಲ್ಲಿ ಸಾವಿರಾರು ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ಯೂನಿಟ್ ಹೊರಗೆ ಕೆಎಸ್‌ಪಿಸಿಬಿ ಆದೇಶ ಪಾಲಿಸಲಾಗಿದೆ. ಪಿಒಪಿ ಗಣೇಶ ತಯಾರಿಸುತ್ತಿಲ್ಲ ಎಂದು ನಾಮಫಲಕ ಹಾಕಿದ್ದಾರೆ. ಆದರೆ, ಒಳಗೆ ನಡೆಯುತ್ತಿರುವ ಕಥೆಯೇ ಬೇರೆ. ಬ್ಯಾನ್ ಆಗಿರುವ ಪಿಒಪಿ ಮೂರ್ತಿಗಳನ್ನು ರಾಜಾರೋಷವಾಗಿ ತಯಾರಿಸುತ್ತಿದ್ದಾರೆ. ಈ ಬಗ್ಗೆ ಕೆಎಸ್​ಪಿಸಿಬಿ ಹಾಗೂ ಬಿಬಿಎಂಪಿಗೆ ವೀಡಿಯೋ ಸಹಿತ, ಪತ್ರದ ಮುಖೇನ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಪರಿಸರ ಎನ್​​ಜಿಒ ಸ್ಥಾಪಕ ಗುರುಮೂರ್ತಾಚಾರ್ ತಿಳಿಸಿದರು.

ಪರಿಸರ ಸ್ನೇಹಿ ಮಣ್ಣಿನ ಗಣಪನನ್ನ ಬಳಸಿ ನಗರದ ಜಲಮೂಲ ಉಳಿಸಿ ಎಂದು ಬಾಯ್ಮಾತಿಗೆ ಹೇಳಿಕೆಗಳನ್ನು ನೀಡುತ್ತಿರುವ ಅಧಿಕಾರಿಗಳು, ಕಣ್ಣಮುಂದೆ ಇಷ್ಟು ದೊಡ್ಡ ಪ್ರಮಾಣದ ಅಕ್ರಮ ನಡೆದರೂ ಬಾಯ್ಮುಚ್ಚಿ ಕುಳಿತಿದ್ದಾರೆ. ಹತ್ತರಿಂದ ಹನ್ನೆರಡು ಅಡಿಯ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ರಾಜಧಾನಿಗಷ್ಟೇ ಅಲ್ಲ, ಪಕ್ಕದ ರಾಜ್ಯಗಳಿಗೂ ಇಲ್ಲಿಂದಲೇ ರವಾನೆ ಮಾಡುವಷ್ಟು ಮೂರ್ತಿಗಳಿವೆ. ಈಗ ಕೈ ಕಟ್ಟಿ ಕುಳಿತುಕೊಂಡು ಗಣೇಶ ಹಬ್ಬ ವೇಳೆ ಸಣ್ಣಪುಟ್ಟ ಅಂಗಡಿಗಳಿಗೆ ದಾಳಿ ಮಾಡಿದರೆ ಏನು ಪ್ರಯೋಜನ ಎಂದು ಗುರುಮೂರ್ತಾಚಾರ್ ಪ್ರಶ್ನಿಸುತ್ತಾರೆ.

ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ) ರಂದೀಪ್ ಅವರನ್ನು ಈ ಬಗ್ಗೆ ಕೇಳಿದರೆ, ಪಿಒಪಿ ಗಣೇಶ ತಯಾರಿಸುತ್ತಿರುವುದು ಗಮನಕ್ಕೆ ಬಂದಿದೆ. ಆದರೆ, ಕೆಎಸ್‌ಪಿಸಿಬಿ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳ ತಂಡವನ್ನು ರಚಿಸಿ ದಾಳಿ ನಡೆಸುತ್ತೇವೆ ಅಂತಾರೆ ಎಂದು ಮುರುಮೂರ್ತಾಚಾರ್‌ ತಿಳಿಸಿದ್ದಾರೆ.

Intro:ನಗರದಲ್ಲಿ ಸದ್ದಿಲ್ಲದೆ ತಯಾರಾಗ್ತಿದೆ ಪಿಒಪಿ ಗಣೇಶ- ಗಮನಕ್ಕೆ ಬಂದರೂ ಕೈಕಟ್ಟಿ ಕುಳಿತ ಅಧಿಕಾರಿಗಳು!

ಬೆಂಗಳೂರು- ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಮೂರ್ತಿ ಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧಿಸಿ ಮೂರು ವರ್ಷ ಕಳೆದರೂ ಇಂದಿಗೂ ಸಾವಿರಾರು ಪಿಒಪಿ ಮೂರ್ತಿಗಳು ತಯಾರಾಗ್ತಿವೆ.. ಈ ಬಗ್ಗೆ ಪರಿಸರ ಪ್ರೇಮಿಗಳು, ಸರ್ಕಾರೇತರ ಸಂಸ್ಥೆಗಳು ಕಾಳಜಿ ವಹಿಸಿದ್ರೂ ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.
ಹೌದು ಬೆಂಗಳೂರಿನ ಹೊರವಲಯದ ಕುಂಬಳಗೋಡಿನಲ್ಲಿ ಸುಮಾರು ನಾಲ್ಕು ಎಕರೆಗಳಷ್ಟಿರುವ ಎರಡು ಯುನಿಟ್ ನಲ್ಲಿ ಸಾವಿರಾರು ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ಯೂನಿಟ್ ಹೊರಗೆ ಕೆಎಸ್ ಪಿಸಿಬಿ ಆದೇಶ ಪಾಲಿಸಲಾಗಿದೆ. ಪಿಒಪಿ ಗಣೇಶ ತಯಾರಿಸುತ್ತಿಲ್ಲ ಎಂದು ಬೋರ್ಡ್ ಹಾಕಿದ್ರು, ಒಳಗಡೆ ನಡೆಯುತ್ತಿರೋದೆ ಬೇರೆ.. ರಾಜಾರೋಷವಾಗಿ ಬ್ಯಾನ್ ಆಗಿರುವ ಪಿಒಪಿ ಗಣೇಶಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಈ ಬಗ್ಗೆ ವೀಡಿಯೋ ಸಹಿತ ಪತ್ರದ ಮುಖೇನ ಕೆಎಸ್ ಪಿಸಿಬಿ, ಹಾಗೂ ಬಿಬಿಎಂಪಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ ಎಂದು ಪರಿಸರ ಎಂಬ ಎನ್ ಜಿಒ ನಿರ್ಮಿಸಿದ ಗುರುಮೂರ್ತಾಚಾರ್ ತಿಳಿಸಿದರು.
ಪರಿಸರ ಸ್ನೇಹಿ ಮಣ್ಣಿನ ಗಣಪನನ್ನ ಬಳಸಿ, ನಗರದ ಜಲಮೂಲ ಉಳಿಸಿ ಎಂದು ಕೇವಲ ಬಾಯ್ಮಾತಿಗೆ ಹೇಳುತ್ತಿರುವ ಅಧಿಕಾರಿಗಳು ಕಣ್ಣಮುಂದೆ ಇಷ್ಟು ದೊಡ್ಡ ಅಕ್ರಮ ನಡೆದರೂ ಬಾಯ್ಮುಚ್ಚಿ ಕುಳಿತಿದ್ದಾರೆ. ಹತ್ತರಿಂದ ಹನ್ನೆರಡು ಅಡಿಯ ಸಾವಿರಾರು ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಬೆಂಗಳೂರಿಗೆ ಅಷ್ಟೇ ಅಲ್ಲ, ಅಕ್ಕಪಕ್ಕದ ರಾಜ್ಯಗಳಿಗೆ ಹಂಚಬೇಕಾದ್ರೂ ಇಲ್ಲಿಂದಲೇ ರವಾನೆ ಮಾಡುವಷ್ಟು ಪಿಒಪಿ ಮೂರ್ತಿಗಳಿವೆ. ಈಗ ಸುಮ್ಮನಿದ್ದು, ಗಣೇಶ ಹಬ್ಬ ಆಚರಣೆ ವೇಳೆ ಮಾತ್ರ ಸಣ್ಣಪುಟ್ಟ ಅಂಗಡಿಗಳಿಗೆ ರೈಡ್ ಮಾಡಿದ್ರೆ ಏನು ಪ್ರಯೋಜನ ಅಂತಾರೆ ಗುರುಮೂರ್ತಾಚಾರ್..
ಇನ್ನು ಈ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತರಾದ ರಂದೀಪ್ ಅವರನ್ನ ಕೇಳಿದ್ರೆ, ಪಿಒಪಿ ಗಣೇಶ ತಯಾರಿಸುತ್ತಿರುವುದು ಗಮನಕ್ಕೆ ಬಂದಿದೆ. ಆದ್ರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳ ತಂಡ ರಚಿಸಿ ದಾಳಿ ನಡೆಸಲಾಗುವುದು ಎಂದಿದ್ದಾರೆ.
ಒಟ್ಟಿನಲ್ಲಿ ಅಕ್ರಮಗಳೆಲ್ಲ ಕಣ್ಣಮುಂದೆ ನಡೆಯುತ್ತಿದ್ರೂ ಕ್ರಮ ಕೈಗೊಳ್ಳಲು ಮಾತ್ರ ಅಧಿಕಾರಿಗಳು ಮೀನಾಮೇಷ ಎಣಿಸ್ತಿದ್ದಾರೆ. ಕುಂಬಳಗೋಡು ಅಷ್ಟೇ ಅಲ್ಲದೆ, ಕೆಂಗೇರಿ ಸೇರಿದಂತೆ ನಗರದ ಹೊರವಲಯ ರಿಂಗ್ ರೋಡ್ ಗಳ ಬಳಿ ಎಗ್ಗಿಲ್ಲದೆ ಪಿಒಪಿ ಗಣೇಶ ಮೂರ್ತಿಗಳ ತಯಾರಿ ನಡೀತಿದೆ. ಹೀಗಾಗಿ ಈ ಬಾರಿಯೂ ಪರಿಸರ ಸ್ನೇಹಿ ಗಣೇಶ ಹಬ್ಬವಾಗೋದು ಡೌಟು.. ಅಲ್ಲದೆ ಕೆಎಸ್ ಪಿಸಿಬಿ ಅಧಿಕಾರಿಗಳು ಕೂಡಾ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಯ ಹಗಲು ಕನಸು ಕಾಣ್ತಿದ್ದಾರೆ.
ಸೌಮ್ಯಶ್ರೀ
KN_Bng_02_08_pop_Ganesha_script_sowmya_7202707

Body:.Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.