ETV Bharat / state

ಬೆಂಗಳೂರು ಪಶ್ಚಿಮ ವಿಭಾಗ ಪೊಲೀಸರಿಂದ 400 ಕ್ಕೂ ಹೆಚ್ಚು ರೌಡಿಗಳಿಗಳಿಗೆ ಕ್ಲಾಸ್ - undefined

ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 400 ಕ್ಕೂ ಹೆಚ್ಚು ರೌಡಿಗಳ ಪರೇಡ್​ ಮಾಡಿ ಪಶ್ಚಿಮ ವಿಭಾಗದ ಪೊಲೀಸರು ರೌಡಿಗಳ ಚಳಿ ಬಿಡಿಸಿದ್ದಾರೆ.

ಪಶ್ಚಿಮ ವಿಭಾಗದ ಪೊಲೀಸರಿಂದ ರೌಡಿಗಳ ಪರೇಡ್
author img

By

Published : Jul 7, 2019, 7:28 PM IST

ಬೆಂಗಳೂರು: ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿದ್ದ ರವಿ ಡಿ ಚೆನ್ನಣ್ಣವರ್​ ತೆರವಾದ ಬಳಿಕ ಡಿಸಿಪಿ ರಮೇಶ್ ಅಧಿಕಾರ ಸ್ವೀಕಾರ ಮಾಡಿದ್ದು, ಪಶ್ಚಿಮ ವಿಭಾಗ ವ್ಯಾಪ್ತಿಯಲ್ಲಿರುವ ರೌಡಿಗಳನ್ನು ನಗರದ ಫ್ರೀಡಮ್‌ ಪಾರ್ಕ್​ಗೆ ಬರಲು ಹೇಳಿ, ಖಡಕ್ ವಾರ್ನಿಂಗ್ ನೀಡಲಾಗಿದೆ.

ಇನ್ನು ಇವರೆಲ್ಲಾ ಸಿಲಿಕಾನ್ ಸಿಟಿಯ ಪಶ್ವಿಮ ವಿಭಾಗ ವ್ಯಾಪ್ತಿಯಲ್ಲಿ ಸರಗಳ್ಳತನ, ಮನೆಗಳ್ಳತನ, ರೌಡಿ ಚಟುವಟಿಕೆ, ಹಲ್ಲೆ ಹೀಗೆ ನಾನಾ ಪ್ರಕರಣದಲ್ಲಿ ಭಾಗಿಯಾಗಿದ್ದರು. ಹೀಗಾಗಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಇಂದು ರೌಡಿಗಳಿಗೆ ಬುಲಾವ್ ನೀಡಲಾಗಿತ್ತು.

ಪಶ್ಚಿಮ ವಿಭಾಗದ ಪೊಲೀಸರಿಂದ ರೌಡಿಗಳ ಪರೇಡ್

ಇನ್ನು ಪಶ್ಚಿಮ ವಿಭಾಗದ ಡಿಸಿಪಿಯಾಗಿ ರಮೇಶ್ ಬಂದ ಮೇಲೆ ಮೊದಲ ಬಾರಿಗೆ ರೌಡಿಗಳ ಪರೇಡ್ ಆಗಿದ್ದು, ಪರೇಡ್​​ನಲ್ಲಿ ಖ್ಯಾತ ರೌಡಿಗಳಾದ ಗೊರಿಲ್ಲ ಅಲಿಯಾಸ್ ಶ್ರೀಧರ್, ತಿರುಮಲ ಅಲಿಯಾಸ್ ತಿಮ್ಮ, ಪುನೀತ್ ಅಲಿಯಾಸ್ ಚಿಕ್ಕ ಗೊರಿಲ್ಲ ಸೇರಿದಂತೆ 400 ಕ್ಕೂ ಹೆಚ್ಚು ರೌಡಿಗಳು ಭಾಗಿಯಾಗಿದ್ದಾರೆ. ಇನ್ನು ಡಿಸಿಪಿ ರಮೇಶ್, ಇನ್ಮುಂದೆ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗದಂತೆ ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ನಗರ ಆಯುಕ್ತ ಅಲೋಕ್ ಕುಮಾರ್, ಅಪರಾಧ ಪ್ರಕರಣಗಳನ್ನ ತಡೆಗಟ್ಟಬೇಕು, ಸಿಲಿಕಾನ್ ಸಿಟಿಯನ್ನ ಜನಸ್ನೇಹಿ ಸಿಟಿಯನ್ನಾಗಿ ಮಾಡಬೇಕು ಎಂದು ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಹೀಗಾಗಿ ಸಿಲಿಕಾನ್ ಸಿಟಿಯ ಎಲ್ಲಾ ಹಿರಿಯ ಅಧಿಕಾರಿಗಳು ಫುಲ್ ಅಲರ್ಟ್ ಆಗಿ ರೌಡಿಗಳ ಚಳಿ ಬಿಡಿಸುತ್ತಿದ್ದಾರೆ.

Intro:ಪಶ್ಚಿಮ ವಿಭಾಗದ ಪೊಲೀಸರಿಂದ ರೌಡಿಗಳಿಗಳಿಗೆ ಕ್ಲಾಸ್
೪೦೦ ಕ್ಕು ಹೆಚ್ಚು ರೌಡಿಗಳು ಭಾಗಿ..

ಸಿಲಿಕಾನ್ ಸಿಟಿಯ ಪಶ್ಚಿಮ ವಿಭಾಗದ ಪೊಲೀಸರು ರೌಡಿಗಳಿಗೆ ಇಂದು ಖಡಕ್ ವಾರ್ನಿಂಗ್ ಜಾರಿ ಮಾಡಿದ್ದಾರೆ.. ರವಿ ಡಿ ಚೆನ್ನಣವರು ತೆರವಾದ ಜಾಗಕ್ಕೆ ಡಿಸಿಪಿ ರಮೇಶ್ ಅಧಿಕಾರ ಸ್ವೀಕಾರ ಮಾಡಿದ್ದು ಪಶ್ಚಿಮ ವಿಭಾಗ ವ್ಯಾಪ್ತಿಯಲ್ಲಿರುವ ರೌಡಿಗಳನ್ನ.
ನಗರದ ಫ್ರೀಡಮ್‌ ಪಾರ್ಕ್ಗೆ ಬರೋಕ್ಕೆ ಬುಲಾವ್ ನೀಡಿದ್ದು ಹೀಗಾಗಿ ಸುಮಾರು ೪೦೦ ಕ್ಕು ಹೆಚ್ಚು ರೌಡಿಗಳು ಪರೇಡ್ಗೆ ಹಾಜರಿದ್ದರು..
ಇನ್ನು ಇವ್ರೇಲ್ಲಾ ಸಿಲಿಕಾನ್ ಸಿಟಿಯ ಪಶ್ವಿಮ ವಿಭಾಗ ವ್ಯಾಪ್ತಿಯಲ್ಲಿ ಸರಗಳ್ಳತನ, ರೌಡಿ ಚಟುವಟಿಗೆ, ಮನೆಗಳವು, ರಾಬರಿ,ಹಲ್ಲೆ ಹೀಗೆ ನಾನ ಪ್ರಕರಣದಲ್ಲಿ ಭಾಗಿಯಾಗಿದ್ರು. ಹೀಗಾಗಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಇಂದು ರೌಡಿಗಳಿಗೆ ಬುಲಾವ್ ನೀಡಕಾಗಿತ್ತು.

ಇನ್ನು ಪಶ್ಚಿಮ ವಿಭಾಗದ ಡಿಸಿಪಿಯಾಗಿ ರಮೇಶ್ ಬಂದ ಮೇಲೆ ಮೊದಲ ಬಾರಿಗೆ ರೌಡಿ ಪರೇಡ್ ಆಗಿದ್ದು ಈ ಪರೇಡ್ ನಲ್ಲಿ ಪಶ್ಚಿಮ ವಿಭಾಗ ಎಲ್ಲಾ ಎಸಿಪಿ ಹಾಗೂ ಇನ್ಸ್ ಪೆಕ್ಟರ್ ಹಾಗೂ ಖ್ಯಾತ ರೌಡಿಗಳಾದ ಗೊರಿಲ್ಲ ಅಲಿಯಾಸ್ ಶ್ರೀಧರ್, ತಿರುಮಲ ಅಲಿಯಾಸ್ ತಿಮ್ಮ, ಪುನೀತ್ ಅಲಿಯಾಸ್ ಚಿಕ್ಕ ಗೋರಿಲ್ಲ, ಮಚ್ಚ ಮಂಜ ಕೇಸ್ ನ ಧರಣಿ , ಸೇರಿದಂತೆ 400ಜನ ಭಾಗಿಯಾಗಿದ್ದಾರೆ. ಇನ್ನು ಡಿಸಿಪಿ ರಮೇಶ್ ರೌಡಿಗಳು ಇನ್ಮುಂದೆ.ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗದೆ ಬಾಲ ಬಿಚ್ಚದಂತೆ ರೌಡಿಗಳಿಗೆ ಎಚ್ಚರ ನೀಡಿದ್ದಾರೆ.

ಈಗಾಗ್ಲೇ ನಗರ ಆಯುಕ್ತ ಅಲೋಕ್ ಕುಮಾರ್ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ರು. ಸಿಲಿಕಾನ್ ಸಿಟಿಯನ್ನ ಜನಸ್ನೇಹಿ ಸಿಟಿಯನ್ನಾಗಿ ಮಾಡಬೇಕು. ಹಾಗೆ ಅಪರಾಧ ಪ್ರಕರಣಗಳನ್ನ ತಡೆಗಟ್ಟುವಂತೆ ಸೂಚಿಸಿದ್ರು. ಹೀಗಾಗಿ ಸಿಲಿಕಾನ್ ಸಿಟಿಯ ಎಲ್ಲಾ ಹಿರಿಯ ಅಧಿಕಾರಿಗಳು ಫುಲ್ ಅಲರ್ಟ್ ಆಗಿ ರೌಡಿಗಳ ಚಳಿ ಬೀಡಿಸ್ತಿದ್ದಾರೆ.

Body:KN_BNG_04_ROWDY PARED_7204498Conclusion:KN_BNG_04_ROWDY PARED_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.