ಬೆಂಗಳೂರು: ನಗರದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ವಾಲಗದ ಜೊತೆ ಮಂಡ್ಯ ಕಲಾವಿದನಿಂದ ನಾಸಿಕ್ ತಮಟೆಯ ತಂಡ ಎಂಟ್ರಿ ಕೊಟ್ಟಿತ್ತು.
ಮಂಡ್ಯದ ಡೊಳ್ಳು ಕುಣಿತ ಕಲಾವಿದ ಪ್ರತಾಪ್ ಅವರ ತಮಟೆ ಸದ್ದಿಗೆ ಮದುವೆ ಮನೆಯಲ್ಲಿದ್ದವರು ಕುಣಿದು ಕುಪ್ಪಳಿಸಿದರು. ತನ್ನ ಸಹ ಕಲಾವಿದರ ತಂಡದೊಂದಿಗೆ ಮೊದಲ ಪ್ರದರ್ಶನದಲ್ಲೇ ಮನಗೆದ್ದ ಪ್ರತಾಪ್, ಈ ಮೂಲಕ ಸಾಕಷ್ಟು ಸುದ್ದಿಯಾಗಿದ್ದಾರೆ.
ಪ್ರತಾಪ್ ಅವರ ನಾಸಿಕ್ ಟೀಂನ ತಮಟೆಯ ಸದ್ದಿಗೆ ಮದುವೆ ಮನೆಯಲ್ಲಿ ಸಂಬಂಧಿಕರು ಮತ್ತು ಮದುವೆಗೆ ಬಂದಿದ್ದ ಸ್ನೇಹಿತರು ಟಪಾಂಗುಚ್ಚಿ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ದಾರೆ. ಇದರ ವಿಡಿಯೋ ಸಖತ್ ವೈರಲ್ ಆಗಿದೆ.