ETV Bharat / state

ಕೆರೆಗಳ ಒಡಲು ಸೇರುತ್ತಿರುವ ಕಟ್ಟಡ ತ್ಯಾಜ್ಯ... ಕಣ್ಮುಚ್ಚಿ ಕುಳಿತ ಬಿಬಿಎಂಪಿ ಅಧಿಕಾರಿಗಳು - undefined

ಜನರ ಜೀವನಾಡಿಯಾಗಿ, ನಗರದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೆರೆಗಳ ಪಾತ್ರ ತುಂಬ ಮುಖ್ಯ. ಇಂತಹ ಕೆರೆಗಳನ್ನು ಅಭಿವೃದ್ಧಿಗೊಳಿಸಿ ಉಳಿಸಿ ಬೆಳೆಸುವ ಹೊಣೆಗಾರಿಕೆ ಬಿಬಿಎಂಪಿ ಮೇಲೆ ಹೆಚ್ಚಿದೆ. ಇದರ ಬಗ್ಗೆ ಜಾಗೃತಿವಹಿಸದೆ ಕೆರೆಗಳು ನಶಿಸಿ ಹೋಗುವಂತೆ ಮಾಡಲು ಬಿಬಿಎಂಪಿ ಮುಂದಾಗಿದೆ.

ಕೆರೆಗಳ ಒಡಲು ಸೇರುತ್ತಿರುವ ಕಟ್ಟಡ ತ್ಯಾಜ್ಯ
author img

By

Published : Jun 7, 2019, 10:47 AM IST

ಬೆಂಗಳೂರು: ಒಂದೆಡೆ ಕಸ ತುಂಬಿಕೊಂಡು ಮುಚ್ಚುವ ಸ್ಥಿತಿಗೆ ಕೆರೆಗಳು ತಲುಪಿವೆ. ಮತ್ತೊಂದೆಡೆ ಕಟ್ಟಡ ಕಾಮಗಾರಿ ತ್ಯಾಜ್ಯವನ್ನು ಕೆರೆಗಳಿಗೆ ತಂದು ಸುರಿಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ. ಇದು ಕೆಆರ್‌ಪುರಂ ವೆಂಗಯ್ಯನ ಕೆರೆ ಹಾಗೂ ಆವಲಹಳ್ಳಿಯ ಎಲೆಮಲ್ಲಪ್ಪನ ಕೆರೆಗಳ ಸದ್ಯದ ಸ್ಥಿತಿ.

ಆವಲಹಳ್ಳಿಯ ಕೆರೆಯಲ್ಲಿ ಸಾವಿರಾರು ಟನ್​ಗಳಷ್ಟು ಕಟ್ಟಡ ತ್ಯಾಜ್ಯವನ್ನು ಪ್ರತಿದಿನ ತಂದು ಸುರಿಯಲಾಗುತ್ತಿದೆ. ರಾತ್ರೋರಾತ್ರಿ ಇಂತಹ ಕುಕೃತ್ಯ ನಡೆಯುತ್ತಿದ್ದು, ಅಧಿಕಾರಿಗಳ ಕಣ್ಣಿಗೆ ಮಾತ್ರ ಬೀಳುತ್ತಿಲ್ಲ. ಹೀಗೆಯೇ ಆದರೆ ಮುಂದಿನ ದಿನಗಳಲ್ಲಿ ಕೆರೆಗಳು ಮಾಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕೆರೆಗಳ ಒಡಲು ಸೇರುತ್ತಿರುವ ಕಟ್ಟಡ ತ್ಯಾಜ್ಯ

ಮೊದಲೇ ಈ ಕೆರೆಗಳಲ್ಲಿ ಹುಲ್ಲು, ಸೊಪ್ಪು ಬೆಳೆದು ಹೂಳು ತುಂಬಿಕೊಂಡು ಕೆರೆ ಸಂಪುರ್ಣ ಮುಚ್ಚಿಕೊಂಡಿದೆ. ಇದರ ನಡುವೆ ಇದಕ್ಕೆ ರಾತ್ರೋ-ರಾತ್ರಿ ಮಣ್ಣು, ಇಟ್ಟಿಗೆ ಸುರಿದು ಮುಚ್ಚಲಾಗುತ್ತಿದೆ. ಸಾಲದ್ದಕ್ಕೆ ಪಾಲಿಕೆ ವಾಹನಗಳಲ್ಲಿ ಸಂಗ್ರಹಿಸಿದ ಕಸವನ್ನು ಇಲ್ಲಿ ಬೇರ್ಪಡಿಸುವ ಕೆಲಸ ಮಾಡಿ ಉಳಿದ ಕಸವನ್ನು ಕೆರೆಗೆ ಸುರಿಯುವುದರಿಂದ ಪರಿಸರ ಕಲುಷಿತಗೊಳ್ಳುವುದರ ಜೊತೆ ದುರ್ನಾಥ ಬೀರುತ್ತಿರುವುದು ಸ್ಥಳೀಯರನ್ನ ಕಂಗೆಡಿಸಿದೆ. ಇದು ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ಇದೆಲ್ಲಾ ನೇರವಾಗಿ ಕಣ್ಣಿಗೆ ಕಂಡರೂ, ಕೆರೆ ಅಭಿವೃದ್ಧಿ ದೃಷ್ಠಿಯಿಂದ ಕ್ರಮ ಕೈಗೊಳ್ಳಬೇಕಾದ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳು, ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಸುಮ್ಮನಿದ್ದಾರೆ. ಹೀಗಾಗಿ ಈ ಎರಡು ಕೆರೆಗಳು ಬಹುತೇಕ ಅವನತಿಯತ್ತ ತಲುಪಿದ್ದು, ಇನ್ನಾದರೂ ಅಧಿಕಾರಿಗಳು ಏಚ್ಚೆತ್ತುಕೊಂಡು ಕೆರೆಗಳಲ್ಲಿ ತುಂಬಿರುವ ಕಸವನ್ನು ತೆಗೆದು ಕೆರೆಗಳನ್ನು ಅಭಿವೃದ್ದಿ ಪಡಿಸಲಿ ಎಂಬುದು ಸಾರ್ವಜನಿಕರ ಆಗ್ರಹ.

Intro:ಕೆರೆಗಳ ಒಡಲು ಸೇರುತ್ತಿರುವ ಕಟ್ಟಡ ತ್ಯಾಜ್ಯ ಕಣ್ಮಚ್ಚಿ ಕುಳಿತ ಅಧಿಕಾರಿಗಳು, ಅವನತಿಯತ್ತ ಸಾಗಿರುವ ಕೆರೆಗಳು.

ಬೆಂಗಳೂರಿನ ಜನರ ಜೀವನಾಡಿಯಾಗಿ, ನಗರದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೆರೆಗಳ ಪಾತ್ರ ತುಂಬ ಮುಖ್ಯವಾಗಿದೆ. ಇಂತಹ ಕೆರೆಗಳನ್ನು ಅಭಿವೃದ್ದಿಗೊಳಿಸಿ ಕೆರೆಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಬಿಬಿಎಂಪಿ ಮೇಲೆ ಹೆಚ್ಚಾಗಿದ್ದರು, ಇದರ ಬಗ್ಗೆ ಜಾಗೃತಿ ವಹಿಸಿದೆ ಕೆರೆಗಳು ನಶಿಸಿ ಹೋಗುವಂತೆ ಮಾಡಲು ಬಿಬಿಎಂಪಿ ಮುಂದಾಗಿದೆ.

ಕೆರೆ ಅಂಗಳದಲ್ಲಿ ನಗರದ ತ್ಯಾಜ್ಯವನ್ನು ವಿಂಗಡಣೆ ಮಾಡುತ್ತಿರುವ ಬಿಬಿಎಂಪಿ ಪೌರ ಕಾರ್ಮಿಕರು, ಇದರಿಂದಾಗಿ ಕಸ ತುಂಬಿಕೊಂಡು ಮುಚ್ಚುವ ಸ್ಥಿತಿಗೆ ತಲುಪಿರುವ ಕೆರೆಗಳು, ಮತ್ತೊಂದೆಡೆ ಕಟ್ಟಡ ಕಾಮಗಾರಿ ತ್ಯಾಜ್ಯವನ್ನು ಕೆರೆಗಳಿಗೆ ತಂದು ಸುರಿಯುತ್ತಿದ್ದರು ಕ್ರಮ ಕೈಗೊಳ್ಳದೆ ಸುಮ್ಮನಿರುವ ಅಧಿಕಾರಿಗಳು. ಇಂತಹ ದೃಶ್ಯಗಳು ಕಂಡು ಬಂದ್ದು ಬೆಂಗಳೂರಿನ ಕೆ.ಆರ್.ಪುರ ವೆಂಗಯ್ಯನ ಕೆರೆ ಹಾಗೂ ಆವಲಹಳ್ಳಿಯ ಎಲೆಮಲ್ಲಪ್ಪನ ಕೆರೆಗಳಲ್ಲಿ. ಆವಲಹಳ್ಳಿಯ ಕೆರೆಯಲ್ಲಿ ಸಾವಿರಾರು ಟನ್ ಗಳಷ್ಟು ಕಟ್ಟಡವನ್ನು ಸುರಿಯಲಾಗಿದೆ, ಪ್ರತಿದಿನ ಸುರಿಯಲಾಗುತ್ತಿದೆ, ರಾತ್ರೋ ರಾತ್ರಿ ಇಂತಹ ಕುಕೃತ್ಯ ನಡೆಯುತ್ತಿದ್ದು, ಅಧಿಕಾರಿಗಳ ಕಣ್ಣಿಗೆ ಮಾತ್ರ ಬೀಳುತ್ತಿಲ್ಲ. ಹೀಗೆಯೇ ಆದರೇ ಮುಂದಿನ ದಿನಗಳಲ್ಲಿ ಕೆರೆಗಳು ಮಾಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Body:ಮೊದಲೆ ಈ ಕೆರೆಗಳಲ್ಲಿ ಹುಲ್ಲು, ಸೊಪ್ಪು ಬೆಳೆದು ಹೂಳು ತುಂಬಿಕೊಂಡು ಕೆರೆ ಸಂಪುರ್ಣ ಮುಚ್ಚಿಕೊಂಡಿದ್ದರೆ, ಇದಕ್ಕೆ ರಾತ್ರೊ ರಾತ್ರಿ ಮಣ್ಣು, ಇಟ್ಟಿಗೆ ಸುರಿದು ಮುಚ್ಚುತ್ತಿದ್ದಾರೆ, ಸಾಲದ್ದಕ್ಕೆ ಪಾಲಿಕೆ ವಾಹನಗಳಲ್ಲಿ ಸಂಗ್ರಹಿಸಿದ ಕಸವನ್ನು ಇಲ್ಲಿ ಬೇರ್ಪಡಿಸುವ ಕೆಲಸ ಮಾಡಿ ಉಳಿದ ಕಸವನ್ನು ಕೆರೆಗೆ ಸುರಿಯುವುದರಿಂದ ಪರಿಸರ ಕಲುಷಿತಗೊಳ್ಳುವುದರ ಜೊತೆ ದುರ್ನಾಥ ಬೀರುವುದು ಸ್ಥಳೀಯರನ್ನ ಕಂಗೆಡಿಸಿದ್ದು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

Conclusion:ಇದೇಲ್ಲ ನೇರವಾಗಿ ಕಣ್ಣಿಗೆ ಕಂಡರು, ಕೆರೆ ಅಭಿವೃದ್ದಿದ್ದ ದೃಷ್ಠಿಯಿಂದ ಕ್ರಮ ಕೈಗೊಳ್ಳಬೇಕಾದ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳು ಇದಕ್ಕು ತಮಗು ಯಾವುದೆ ಸಂಭಂದವಿಲ್ಲವೆಂಬಂತೆ ಸುಮ್ಮನಿರುವುರಿಂದ ಈ ಎರಡು ಕೆರೆಗಳು ಬಹುತೇಕ ಅವನತಿಯತ್ತ ತಲುಪಿದ್ದು, ಇನ್ನಾದರು ಅಧಿಕಾರಿಗಳು ಏಚ್ಚೇತ್ತುಕೊಂಡು ಕೆರೆಗಳಲ್ಲಿ ತುಂಬಿರಿವ ಕಸವನ್ನು ತೆಗೆದು ಕೆರೆಗಳನ್ನು ಅಭಿವೃದ್ದಿ ಪಡಿಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಧರ್ಮರಾಜು ಎಂ ಕೆಆರ್ ಪುರ.

ಬೈಟ್1......ಲಕ್ಷಣ್ ಆವಲಹಳ್ಳಿ ನಿವಾಸಿ

ಬೈಟ್2........ದೇವಪ್ಪ ಕೆಆರ್ ಪುರ ನಿವಾಸಿ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.