ಬೆಂಗಳೂರು: ರಾಜ್ಯದ ಎರಡು ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆಯಲ್ಲಿ ಗೆಲುವಿನ ತಂತ್ರಗಾರಿಕೆ ಹೆಣೆಯುವ ಕುರಿತು, ನಗರದ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ಇಂದು ಸಭೆ ನಡೆಸಿದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ. ಸಿ. ವೇಣುಗೋಪಾಲ್, ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒಂದೆಡೆ ಸೇರಿ ಸಭೆ ನಡೆಸಿದರು.
ಮಾಧ್ಯಮಗಳ ವಿರುದ್ಧ ಸಿಎಂ ಗರಂ...
ಸಭೆ ಮುಗಿದ ನಂತರ ಸಿಎಂ ವಾಪಸ್ ತೆರಳಿದ್ದು, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾಧ್ಯಮಗಳ ಮೇಲೆ ಮತ್ತೆ ಗರಂ ಆದ ಸಿಎಂ ಕುಮಾರಸ್ವಾಮಿ, ನಿಮ್ಮಲ್ಲಿನ ಚರ್ಚೆ, ಸುದ್ದಿಗಳಿಂದ ನಾನು ನಿಮಗೆ ಬಹಿಷ್ಕಾರ ಹಾಕಿದ್ದೇನೆ. ನಾನು ಮಾಧ್ಯಮಗಳಿಗೆ ಬಹಿಷ್ಕಾರ ಹಾಕಿದ್ದೇನೆ (ಐ ಯಮ್ ಬಾಯ್ಕಟಿಂಗ್ ಯುವರ್ ಸೆಲ್ಫ್) ಎಂದು ಹೇಳಿ ತೆರಳಿದರು. ಅದೇನು ಸ್ಟೋರಿನೋ, ಅದೇನು ಚರ್ಚೆ ಮಾಡ್ತೀರೋ ಮಾಡಿಕೊಳ್ಳಿ. ನಾನು ನಿಮ್ಮ ಜೊತೆ ಮಾತನಾಡಬಾರದು ಎಂದು ತೀರ್ಮಾನ ಮಾಡಿದ್ದೇನೆ. ಏನೇನು ಚರ್ಚೆ ಮಾಡ್ತಿರೋ, ಮಾಡ್ಕೊಳ್ಳಿ. ಮಜಾ ಮಾಡಿ ಎಂದು ಹೇಳಿ ಹೊರಟುಹೋದರು.
ಬೆಳಗ್ಗೆ ನಗರದ ಖಾಸಗಿ ಹೋಟೆಲ್ಲ್ಲಿ ತಂಗಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ, ಮಹತ್ವದ ಮಾತುಕತೆ ನಡೆಸಿದರು. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ ನಾಯಕರಿಗೆ ದಿನೇಶ್, ಪರಮೇಶ್ವರ್ ಸಾಥ್ ನೀಡಿದರು.
![Congress and BJP leaders meeting](https://etvbharatimages.akamaized.net/etvbharat/prod-images/kn-bng-02-28-congress-jds-meeting-script-9020923-mahesh_28042019122901_2804f_1556434741_554.jpeg)
ಏನೇನು ಚರ್ಚೆ...!
ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ, ಕೆಲ ಶಾಸಕರ ಬಂಡಾಯ, ಬಿಜೆಪಿಯ ಆಪರೇಷನ್ ಕಮಲ, ಲೋಕಸಭಾ ಚುನಾವಣೆ ಕ್ಷೇತ್ರವಾರು ಫಲಿತಾಂಶ, ಆಪರೇಷನ್ ಕಮಲ ತಡೆಯಲು ಮಾಡಿಕೊಳ್ಳಬೇಕಾದ ತಂತ್ರಗಳು ಹಾಗೂ ಉಪ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಮಾಡಿಕೊಳ್ಳಬೇಕಾದ ತಂತ್ರಗಳ ಬಗ್ಗೆ ಮಹತ್ವದ ಚರ್ಚೆ ನಡೆಯಿತು.
ಸಭೆಯ ಮಧ್ಯೆಯೇ ಚಿಂಚೊಳ್ಳಿ ಕ್ಷೇತ್ರದ ಉಪಚುನಾವಣೆಯ ಮೈತ್ರಿ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ತಮ್ಮ ಬಿ ಫಾರಂ ಪಡೆದುಕೊಂಡರು. ಇದಾದ ಬಳಿಕ ಹೊರಬಂದು ಮಾಧ್ಯಮದವರ ಜತೆ ಮಾತನಾಡಿ, ನನಗೆ ಟಿಕೆಟ್ ಕೊಟ್ಟಿದ್ದು ಸಂತೋಷವಾಗಿದೆ. ನಮ್ಮ ನಾಯಕರು ಭರವಸೆ ಇಟ್ಟು ಟಿಕೆಟ್ ಕೊಟ್ಟಿದ್ದಾರೆ. ಉಮೇಶ್ ಜಾಧವ್ ಯಾವಾಗಲೂ ದ್ವಂಧ್ವ ನೀತಿ ಅನುಸರಿಸೋರು. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಉಮೇಶ್ ಜಾಧವ್ ಪುತ್ರ ವ್ಯಾಮೋಹ ಅಂತ ಆರೋಪಿಸಿದ್ರು. ಈಗ ಉಮೇಶ್ ಜಾಧವ್ ಏನ್ ಮಾಡಿದ್ರು? ಬಿಜೆಪಿ ಟಿಕೆಟ್ ಅನ್ನು ತಮ್ಮ ಪುತ್ರನಿಗೆ ಉಮೇಶ್ ಜಾಧವ್ ಕೊಡಿಸಿದ್ರು. ನಿಜವಾದ ಪುತ್ರ ವ್ಯಾಮೋಹ ಉಮೇಶ್ ಜಾಧವ್ಗಿದೆ. ಜನ ಚುನಾವಣೆಯಲ್ಲಿ ಅವರಿಗೆ ತಕ್ಕ ಉತ್ತರ ಕೊಡ್ತಾರೆ ಎಂದರು.
ಸಚಿವರಿಗೆ ವೇಣುಗೋಪಾಲ್ ಟಾಸ್ಕ್...
ಚಿಂಚೋಳಿ, ಕುಂದಗೋಳ ಉಪಚುನಾವಣೆ ಗೆಲ್ಲೋಕೆ ಸಚಿವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಬಿಗ್ ಟಾಸ್ಕ್ ನೀಡಿದ್ದಾರೆ. ಜಾತಿವಾರು ಸಚಿವರು, ಶಾಸಕರಿಗೆ ಜವಾಬ್ದಾರಿ ವಹಿಸಿದ್ದು, ಕುಂದಗೋಳದಲ್ಲಿ ಕುರುಬ, ಲಿಂಗಾಯತರು ಹೆಚ್ಚಿದ್ದಾರೆ. ಹೀಗಾಗಿ ಲಿಂಗಾಯತ, ಕುರುಬ ಸಚಿವರಿಗೆ ಉಸ್ತುವಾರಿ ವಹಿಸಿದ್ದು, ಎಂಟಿಬಿ ನಾಗರಾಜು, ಶಿವಾನಂದ ಪಾಟೀಲ್, ಎಂ. ಬಿ. ಪಾಟೀಲರಿಗೆ ಕುಂದಗೋಳದ ಜವಾಬ್ದಾರಿ ನೀಡಲಾಗಿದೆ.
ಚಿಂಚೋಳಿಯಲ್ಲಿ ಲಂಬಾಣಿ, ದಲಿತರು ಹೆಚ್ಚು. ಹೀಗಾಗಿ ಲಂಬಾಣಿ, ದಲಿತ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ. ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಇಲ್ಲಿ ಪ್ರಿಯಾಂಕ್ ಖರ್ಗೆ, ರಾಜಶೇಖರ್ ಪಾಟೀಲ್, ರಹೀಂಖಾನ್, ಪಿಟಿ ಪರಮೇಶ್ವರ್ ನಾಯ್ಕಗೆ ವಹಿಸಲಾಗಿದೆ.
ಇಡೀ ಕುಂದಗೋಳದ ಜವಾಬ್ದಾರಿ ಡಿಕೆಶಿ ಹೆಗಲಿಗೆ ವಹಿಸಲಾಗಿದೆ. ಅದೇ ರೀತಿ ಚಿಂಚೋಳಿಯ ಸಂಪೂರ್ಣ ಜವಾವ್ದಾರಿ ಡಿಸಿಎಂ ಹೆಗಲೇರಿದೆ. ಇಂದು ಸಭೆಯ ಮಧ್ಯೆಯೇ ಚಿಂಚೊಳ್ಳಿ ಅಭ್ಯರ್ಥಿ ಸುಭಾಷ್ ರಾಥೋಡ್ ಹಾಗೂ ಕುಂದಗೋಳ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಪರವಾಗಿ ಕುಂದಗೋಳ ಬ್ಲಾಕ್ ಕಾಂಗ್ರೆಸ್ ಜಗದೀಶ್ ಬಿ ಫಾರಂ ಪಡೆದುಕೊಂಡರು.