ETV Bharat / state

ಐಎಂಎ ದೋಖಾ: ತನಿಖೆ ಚುರುಕುಗೊಳಿಸಿದ ಇಡಿ, ಲೇವಾದೇವಿ ಪ್ರಕರಣ ದಾಖಲು - undefined

ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಇತ್ತ ಇಡಿ ತನಿಖೆ ಚುರುಕುಗೊಳಿಸಿದ್ದು, ಅತ್ತ ಹೂಡಿಕೆದಾರರೊಬ್ಬರು ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕೆಂದು ಹೈಕೋರ್ಟ್​ಗೆ ರಿಟ್ ಸಲ್ಲಿಕೆ ಮಾಡಿದ್ದಾರೆ.

ಐಎಂಎ ವಂಚನೆ ಪ್ರಕರಣ
author img

By

Published : Jun 15, 2019, 8:03 AM IST

ಬೆಂಗಳೂರು: ಐಎಂಎ ಸಂಸ್ಥೆಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಾರಿ ನಿರ್ದೇಶನಾಲಯ (ಇಡಿ) ಅಧಿಕೃತ ಮಾಹಿತಿ ಪಡೆದು ಪಿಎಂಎಲ್‌ಎ (ಲೇವಾದೇವಿ) ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ತನಿಖೆ ಆರಂಭಿಸಿರುವ ಅಧಿಕಾರಿಗಳು, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಹಾಗೂ ಎಸ್‌ಐಟಿ ತಂಡದಿಂದ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ಐಎಂಎ ಜ್ಯುವೆಲರಿಯಲ್ಲಿ ಹೂಡಿಕೆ ಮಾಡಿದ ಸಿಬ್ಬಂದಿಯಿಂದ ಕೆಲ ಮಾಹಿತಿ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ 27 ಸಾವಿರಕ್ಕೂ ಅಧಿಕ ದೂರುಗಳು ಸಲ್ಲಿಕೆಯಾಗಿವೆ. ಅಲ್ಲದೆ ಕೆಲ ರಾಜಕಾರಣಿಗಳಿಗೆ ಕೋಟಿ ಕೋಟಿ ಹಣ ವರ್ಗಾವಣೆಯಾಗಿದೆ ಎಂಬ ಮಾಹಿತಿ ಆಧಾರದ ಮೇಲೆ ಇಡಿ ಈಗ ಈ ಪ್ರಕರಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಹೂಡಿಕೆದಾರಿಂದ ದೂರನ್ನು ಸ್ವೀಕರಿಸುತ್ತಿದ್ದು, ದೂರಿನಲ್ಲಿ ಹಲವಾರು ಮಂದಿ ಎಷ್ಟೆಷ್ಟು ಹಣ ಕಳೆದುಕೊಂಡಿದ್ದಾರೆ ಹಾಗೇ ಇಲ್ಲಿಯವರೆಗೆ ಮನ್ಸೂರ್ ಬ್ಯಾಂಕ್ ವಹಿವಾಟು ಎಷ್ಟು ಎನ್ನುವುದರ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ.
ಮನಿ ಲಾಂಡ್ರಿಂಗ್ ನಡೆದಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು, ಸರಿ ಸುಮಾರು ಐದು ಸಾವಿರ ಕೋಟಿಯಷ್ಟು ಹಗರಣದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.

ಐಎಂಎ ಆಡಿಟರ್ ಎಸ್‌ಐಟಿ ವಶಕ್ಕೆ:

ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣ ಹಿನ್ನೆಲೆ ಕಂಪೆನಿಯ ಆಡಿಟರ್ ಇಕ್ಬಾಲ್‌ನನ್ನು ಎಸ್‌ಐಟಿ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಪ್ರಕರಣ ಬೆಳಕಿಗೆ ಬಂದ ಕೂಡಲೇ ಇಕ್ಬಾಲ್ ನಾಪತ್ತೆಯಾಗಿದ್ದ. ಆತನು ಮನೆಗೆ ಬರುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈಗ ಕಂಪನಿಯು ಯಾರ ಜತೆ ಎಷ್ಟು ವಹಿವಾಟು ನಡೆಸಿದೆ ಎಂಬಿತ್ಯಾದಿ ಮಾಹಿತಿಯನ್ನು ಇಕ್ಬಾಲ್‌ನಿಂದ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

ಹೂಡಿಕೆದಾರನಿಂದ ಹೈಕೋರ್ಟ್​ಗೆ ರಿಟ್:

ಇನ್ನು ಈ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕೆಂದು ಹೂಡಿಕೆದಾರ ‌ಮೊಹಮ್ಮದ್ ಸಿರಾಜುದ್ದೀನ್ ಹೈಕೋರ್ಟ್​ಗೆ ರಿಟ್ ಸಲ್ಲಿಕೆ ಮಾಡಿದ್ದಾರೆ. ಐಎಂಎ ಮಾಲೀಕ ಮನ್ಸೂರ್​ ಸಾಕಷ್ಟು ಪ್ರಭಾವಿಯಾಗಿರುವುದರಿಂದ ಎಸ್ಐಟಿ ಪೊಲೀಸರಿಂದ ಪಾರದರ್ಶಕ ತನಿಖೆ ಸಾಧ್ಯವಿಲ್ಲ. ಆರೋಪಿ ಮನ್ಸೂರ್ ನಾಪತ್ತೆಯಾಗಿ ವಾರ ಕಳೆದಿದ್ದರೂ ಪೊಲೀಸರು ಆತನನ್ನು ಪತ್ತೆ ಮಾಡಿಲ್ಲ. ಆರೋಪಿ ನಾಪತ್ತೆಯಾಗುವುದಕ್ಕೂ ಮೊದಲು IMA ವಂಚನೆ ಕುರಿತು ಬೆಂಗಳೂರು ಉತ್ತರ ವಿಭಾಗದ ಅಧಿಕಾರಿ ಎಸಿ ನಾಗರಾಜು ಸಾರ್ವಜನಿಕ ನೋಟಿಸ್ ಜಾರಿಗೊಳಿಸಿದ್ದರು. ಆಗಲು ಕೂಡ ಯಾವುದೇ ಮುನ್ನೆಚ್ಚರಿಕೆ ಕೈಗೊಂಡಿಲ್ಲ. ಮನ್ಸೂರ್ ಪ್ರಬಾವಿಯಾಗಿರುವುದರಿಂದ ಕ್ರಮ ತೆಗೆದುಕೊಂಡಿಲ್ಲ.ಹೀಗಾಗಿ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಐಎಂಎನಲ್ಲಿ 10 ಲಕ್ಷ ಹೂಡಿಕೆ ಮಾಡಿದ್ದ ಚಿತ್ರದುರ್ಗ ಮೂಲದ ಮೊಹಮ್ಮದ್ ಸಿರಾಜುದ್ದೀನ್ ತಮ್ಮ ಅರ್ಜಿಯನ್ನ ‌ತುರ್ತು ವಿಚಾರಣೆ ನಡೆಸಬೇಕೆಂದು ಹೈಕೋರ್ಟ್​ಗೆ ಮೆಮೋ ಸಲ್ಲಿಸಿದ್ದು ವಿಚಾರಣೆಯನ್ನ ಸೋಮವಾರಕ್ಕೆ ನಿಗದಿಪಡಿಸಿದೆ.

Intro:nullBody:ಐಎಂಎ ಬಹುಕೋಟಿ ವಂಚನೆ ಪ್ರಕರಣ: ಅಧಿಕೃತ ಎಂಟ್ರಿ ನೀಡಿ ತನಿಖೆ ಚುರುಕುಗೊಳಿಸಿದ ಇಡಿ

ಬೆಂಗಳೂರು:
ಐಎಂಎ ಸಂಸ್ಥೆಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಾರಿ ನಿರ್ದೇಶನಾಲಯ(ಇಡಿ) ಅಧಿಕೃತ ಮಾಹಿತಿ ಪಡೆದು ಪಿಎಂಎಲ್‌ಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು (ಇಸಿಐಆರ್)ಎಐಫ್ಆರ್ ದಾಖಲಿಸಿಕೊಂಡಿದ್ದಾರೆ.
ತನಿಖೆ ಆರಂಭಿಸಿರುವ ಅಧಿಕಾರಿಗಳು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಹಾಗೂ ಎಸ್‌ಐಟಿ ತಂಡದಿಂದ ಪ್ರಕರಣ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ಐಎಂಎ ಜ್ಯುವೆಲರಿಯಲ್ಲಿ ಹೂಡಿಕೆ ಮಾಡಿದ ಸಿಬ್ಬಂದಿಯಿಂದ ಕೆಲ ಮಾಹಿತಿ ಪಡೆದಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ 26 ಸಾವಿರಕ್ಕೂ ಅಧಿಕ ದೂರುಗಳು ಸಲ್ಲಿಖೆಯಾಗಿವೆ. ಅಲ್ಲದೆ ಕೆಲ ರಾಜಕಾರಣಿಗಳಿಗೆ ಕೋಟಿ ಕೋಟಿ ಹಣ ವರ್ಗಾವಣೆಯಾಗಿದೆ ಎಂಬ ಮಾಹಿತಿ ಆಧಾರದ ಮೇಲೆ ಇಡಿ ಈಗ ಈ ಪ್ರಕರಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಮನ್ಸೂರ್ ಬ್ಯಾಂಕ್ ವಹಿವಾಟು ಸಂಗ್ರಹ
ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಹೂಡಿಕೆದಾರಿಂದ ದೂರನ್ನು ಸ್ವೀಕರಿಸುತ್ತಿದ್ದು, ದೂರಿನಲ್ಲಿ ಹಲವಾರು ಮಂದಿ ಎಷ್ಟೆಷ್ಟು ಹಣ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದರಿಂದ ಇಲ್ಲಿಯವರೆಗೆ ಮನ್ಸೂರ್ ಬ್ಯಾಂಕ್ ವಹಿವಾಟು ಎಷ್ಟು ಎನ್ನುವುದರ ಬಗ್ಗೆಯೂ ಮಾಹಿತಿ ಕಲೆಹಾಕಿದ್ದಾರೆ.
ಮನಿ ಲಾಂಡ್ರಿಂಗ್ ನಡೆದಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಸರಿ ಸುಮಾರು ಐದು ಸಾವಿರ ಕೋಟಿಯಷ್ಟು ಹಗರಣದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.
ಐಎಂಎ ಅಡಿಟರ್ ಎಸ್‌ಐಟಿ ವಶಕ್ಕೆ
ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣ ಹಿನ್ನೆಲೆಯಲ್ಲಿ ಕಂಪೆನಿಯ ಅಡಿಟರ್ ಇಕ್ಬಾಲ್‌ನನ್ನು ಎಸ್‌ಐಟಿ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಗುರುವಾರ ತಡರಾತ್ರಿ ನಗರದ ಪ್ರೇಜರ್ ಟೌನ್‌ನ ನಿವಾಸದಲ್ಲಿ ಎಸ್‌ಐಟಿ ತಂಡದ ಅಧಿಕಾರಿಗಳು ವಶಕ್ಕೆ ಪಡೆದು ಕಂಪೆನಿಯ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಕೂಡಲೇ ಇಕ್ಬಾಲ್ ನಾಪತ್ತೆಯಾಗಿದ್ದ. ಆತನು ಮನೆಗೆ ಬರುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಈಗ ಕಂಪೆನಿಯು ಯಾರ ಜತೆ ಎಷ್ಟು ವಹಿವಾಟು ನಡೆಸಿದೆ ಎಂಬಿತ್ಯಾದಿ ಮಾಹಿತಿಯನ್ನು ಇಕ್ಬಾಲ್‌ನಿಂದ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.Conclusion:null

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.