ETV Bharat / state

ಮಾಡಬಾರದ ತಪ್ಪು ಮಾಡಿದ್ದೇನೆ, ನನ್ನನ್ನು ಕ್ಷಮಿಸಿ: ಅಪ್ಪ - ಅಮ್ಮನಿಗೆ ಸಂದೇಶ ಕಳಿಸಿ ಯುವಕ ಆತ್ಮಹತ್ಯೆ - ತಂದೆ ತಾಯಿಗೆ ಸಂದೇಶ ಕಳಿಸಿ ಯುವಕ ಆತ್ಮಹತ್ಯೆ

ವಾಟ್ಸ್​​ಆ್ಯಪ್ ಮೂಲಕ ತಂದೆ, ತಾಯಿಗೆ ಸಂದೇಶ ಕಳಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್​ ಜಿಲ್ಲೆಯಲ್ಲಿ ಘಟನೆ ನಡೆದಿದೆ.

young-man-commit-suicide-in-basavakalyana
ಅಪ್ಪ-ಅಮ್ಮನಿಗೆ ಸಂದೇಶ ಕಳಿಸಿ ಯುವಕ ಆತ್ಮಹತ್ಯೆ
author img

By

Published : Aug 9, 2021, 10:45 PM IST

ಬಸವಕಲ್ಯಾಣ(ಬೀದರ್​): ಜೀವನದಲ್ಲಿ ನಾನೊಂದು ಮಾಡಬಾರದ ತಪ್ಪು ಮಾಡಿದ್ದೇನೆ, ಹೀಗಾಗಿ ನನ್ನನ್ನು ನೀವೆಲ್ಲರೂ ಕ್ಷಮಿಸಿ ಎಂದು ವಾಟ್ಸ್​​ಆ್ಯಪ್ ಮೂಲಕ ಪಾಲಕರಿಗೆ ಸಂದೇಶ ರವಾನಿಸಿ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾಲ್ಕಿ ತಾಲೂಕಿನ ಕಾಸರತೂಗಾಂವ ಗ್ರಾಮದ ಅವಿನಾಶ್ ರಾಜಕುಮಾರ್ ಪಾಟೀಲ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ.

ಈತ ಆಗಸ್ಟ್ 4ರಂದು ಬಸವಕಲ್ಯಾಣ ನಗರದಲ್ಲಿ ನನ್ನ ಸ್ನೇಹಿತರ ಮದುವೆ ಇದೆ ಎಂದು ಹೇಳಿ ಮನೆಯಿಂದ ಹೊರಟಿದ್ದ. ಬಸವಕಲ್ಯಾಣದ ಲಾಡ್ಜ್​ವೊಂದರಲ್ಲಿ 3 ದಿನಗಳ ಕಾಲ ಉಳಿದುಕೊಂಡು, ಆ. 7ರಂದು ಲಾಡ್ಜ್​ನಿಂದ ನಾಪತ್ತೆಯಾಗಿದ್ದ. ಅಂದು ಮನೆಯವರಿಗೆ ವಾಟ್ಸ್​​ಆ್ಯಪ್ ಮೂಲಕ ಜೀವನದಲ್ಲಿ ನಾನೊಂದು ಮಾಡಬಾರದ ತಪ್ಪು ಮಾಡಿದ್ದೇನೆ, ನಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿಬಿಡಿ ಎಂದು ಸಂದೇಶ ಕಳಿಸಿದ್ದಾನೆ. ಅದೇ ದಿನ ನಗರಕ್ಕೆ ಹೊಂದಿಕೊಂಡಿರುವ ತ್ರಿಪುರಾಂತ ಕೆರೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬಸವಕಲ್ಯಾಣ ನಗರ ಠಾಣೆ ಪೊಲೀಸರ ತಂಡ ನಾಪತ್ತೆಯಾಗಿರುವ ಯುವಕನ ಪತ್ತೆಗಾಗಿ ಹುಡುಕಾಟ ನಡೆಸುತ್ತಿತ್ತು. ಈ ನಡುವೆ ಸೋಮವಾರ ಸಂಜೆ ತ್ರಿಪುರಾಂತ ಕೆರೆಯಲ್ಲಿ ಯುವಕನ ಶವ ಪತ್ತೆಯಾಗಿದೆ. ಸುದ್ದಿ ತಿಳಿದ ಬಸವಕಲ್ಯಾಣ ಸಿಪಿಐ ಜೆ.ಎಸ್. ನ್ಯಾಮಗೌಡರ್, ಪಿಎಸ್‌ಐ ಅಮರ್ ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಬಗ್ಗೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಪತ್ನಿ ಮೇಲೆ ಐವರು ಟಿಎಂಸಿ ಕಾರ್ಯಕರ್ತರಿಂದ ರೇಪ್​: ಇಬ್ಬರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.