ಬೀದರ್: ಗದ್ದೆಯಲ್ಲಿ ಕೆಲಸ ಇದೆ ಅಂತ ಹೇಳಿ ಬೈಕ್ ಮೇಲೆ ಮಹಿಳಾ ಕಾರ್ಮಿಕಳೊಬ್ಬಳನ್ನು ಖದೀಮನೊಬ್ಬ ಕರೆ ತಂದು ಚಾಕುವಿನಿಂದ ಹಲ್ಲೆ ಮಾಡಿ ಮೈ ಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಔರಾದ್ ಪಟ್ಟಣದ ಹೊರ ವಲಯದ ಪದವಿ ಕಾಲೇಜು ಬಳಿ ನಡೆದಿದೆ.
ಕಳ್ಳನೊಬ್ಬ ಔರಾದ್ ತಾಂಡಾ ನಿವಾಸಿ ಕಮಲಾಬಾಯಿ ಮೈ ಮೇಲಿದ್ದ ಬೆಳ್ಳಿ ಮತ್ತು ಬಂಗಾರದ ತಾಳಿಯನ್ನು ದರೋಡೆ ಮಾಡಲಾಗಿದ್ದು, ಹರಿತವಾದ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಪದವಿ ಕಾಲೇಜಿನ ಪಕ್ಕದ ಜಮಿನಿನಲ್ಲಿ ಕೆಲಸ ಇದೆ ಎಂದು ನಂಬಿಸಿ ಮಹಿಳೆಯನ್ನು ಅಪರಿಚಿತ ವ್ಯಕ್ತಿ ಬೈಕ್ ಮೇಲೆ ಕರೆದುಕೊಂಡು ಹೊಗಿದ್ದಾನೆ. ನಿರ್ಜನ ಪ್ರದೇಶದಲ್ಲಿ ಹೊಗ್ತಿದ್ದಂತೆ ಚಾಕು ತೊರಿಸಿ ಚಿನ್ನಾಭರಣ ಕೊಡುವಂತೆ ಹೇಳಿದ್ದಾನೆ. ಇದಕ್ಕೆ ಕಮಲಾಬಾಯಿ ಒಪ್ಪದಿದ್ದಾಗ ಚಾಕುವಿನಿಂದ ಹಲ್ಲೆ ಮಾಡಿ ಮಹಿಳೆ ಮೈ ಮೇಲಿನ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.