ಬಸವಕಲ್ಯಾಣ(ಬೀದರ್): ಕಾಡು ಪ್ರಾಣಿಗಳನ್ನು ಬೇಟೆಯಾಡಿ ಅದನ್ನ ಟಿಕ್ ಟಾಕ್ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಹರಿಬಿಟ್ಟ ಆರೋಪಿಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ತಾಲೂಕಿನ ಘೋಟಾಳ ವಾಡಿಯ ಅಖಿಲೇಶ ಹಾಡೋಳೆ ಬಂಧಿತ ಆರೋಪಿ. ಈತ ಬಸವಕಲ್ಯಾಣ ತಾಲೂಕಿನ ಲಾಡವಂತಿ ಪ್ರದೇಶದಲ್ಲಿ ಕಾಡು ಹಂದಿ, ಮುಳ್ಳು ಹಂದಿ, ಮೊಲಗಳನ್ನ ಬೇಟೆಯಾಡಿದ್ದಲ್ಲದೆ ವಿಡಿಯೋ ಮಾಡಿ ಟಿಕ್ ಟಾಕ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ.
ಟಿಕ್ ಟಾಕ್‌ನಲ್ಲಿ ಕಾಡುಹಂದಿ ಬೇಟೆಯಾಡಿರುವುದನ್ನ ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ, ಆರೋಪಿ ವಿಳಾಸ ಪತ್ತೆ ಮಾಡಿ ಆತನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತನಿಂದ ಒಂದು ಬೈಕ್, 1 ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ.