ETV Bharat / state

ಬೀದರ್ ಜಿಲ್ಲೆಗೆ ಬಿಜೆಪಿ ಕೊಡುಗೆ ಏನೆಂದು ಕಟೀಲ್ ಉತ್ತರಿಸಲಿ: ಖಂಡ್ರೆ

author img

By

Published : Mar 7, 2021, 6:30 PM IST

ಕಳೆದ 19 ತಿಂಗಳ ಹಿಂದೆ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಕ್ರಮ, ಅನೈತಿಕ ಚುಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು.

KPCC President working Ishwar Khandre
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸುದ್ದಿಗೋಷ್ಠಿ

ಬಸವಕಲ್ಯಾಣ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಸುಳ್ಳು ಹೇಳಿ ಜನರಿಗೆ ಮೋಸ ಮಾಡುವುದೇ ಬಿಜೆಪಿಯರ ಕಾಯಕವಾಗಿದೆ. ಜನರು ಇದರಿಂದ ಜಾಗೃತರಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ನಗರದ ಸಾಹಿಲ್ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಬೇಕು. ಸಾಮಾಜಿಕ ನ್ಯಾಯದಡಿ ವಿಶ್ವಕ್ಕೆ ಪ್ರಥಮ ಬಾರಿಗೆ ಸಂಸತ್ತು ಪರಿಕಲ್ಪನೆ ನೀಡಿದ ಶರಣರ ಕಾಯಕ ಭೂಮಿ ಬಸವಕಲ್ಯಾಣ. ಈ ನೆಲದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರದಿಂದ ಯೋಜನೆ ರೂಪಿಸಲಾಗಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಅನುಭವ ಮಂಟಪಕ್ಕೆ 5 ಕೋಟಿ ರೂ. ಘೋಷಣೆ ಮಾಡಿ, ನೂರು ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿತ್ತು.

ಮುಖ್ಯಮಂತ್ರಿಗಳು ಇಲ್ಲಿಗೆ ಬಂದು ಅನುಭವ ಮಂಟಪದ ಭೂಮಿ ಪೂಜೆ ಸಹ ಮುಗಿಸಿ ಹೋಗಿದ್ದಾರೆ. ಆದರೆ ಭೂಮಿ ಪೂಜೆ ನಡೆಸಿ ಎರಡು ತಿಂಗಳು ಕಳೆದರೂ ಅನುಭವ ಮಂಟಪಕ್ಕೆ ಇದುವರೆಗೂ ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ಭೂ ಸ್ವಾಧೀನ ಪ್ರಕ್ರಿಯೆ ಕೂಡ ನಡೆದಿಲ್ಲ. ಜಿಲ್ಲೆಯ ವಸತಿ ಯೋಜನೆ ಮತ್ತು ನೀರಾವರಿ ಯೋಜನೆಗಳಿಗೆ ಒಂದೇ ಒಂದು ರೂ. ಅನುದಾನ ಕಲ್ಪಿಸಿಲ್ಲ. ಉಪ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗರು ಜನರಿಗೆ ಮರಳು ಮಾಡಲು ಹೊರಟಿದ್ದಾರೆ. ಭಾನುವಾರ ನಗರಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರು ಜನರ ಮುಂದೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಖಂಡ್ರೆ ಹೇಳಿದರು.

ಐತಿಹಾಸಿಕ ಚರಿತ್ರೆ ಹೊಂದಿರುವ ಗೋರ್ಟಾ(ಬಿ) ಗ್ರಾಮದಲ್ಲಿ ಹುತಾತ್ಮ ಸ್ಮಾರಕ ಕಾರ್ಯ ನೆನೆಗುದ್ದಿಗೆ ಬಿದ್ದಿದೆ. 2014ರಿಂದ ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಸ್ಮಾರಕ ನಿರ್ಮಾಣಕ್ಕೆ ಭೂಮಿ ನೀಡಿದ ಜಮೀನು ಮಾಲೀಕ ಭರತ ಪತಂಗೆ ಅವರಿಗೆ ಇದುವರೆಗೂ ಹಣ ನೀಡಿಲ್ಲ ಎಂದರು.

ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ 15 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 280 ಕೋಟಿ ರೂ. ಅನುದಾನ ಕಲ್ಪಿಸಲಾಗಿದೆ. ಮಾಂಜ್ರಾ ನದಿಯಿಂದ ಎರಡು ಟಿಎಮ್‌ಸಿ ನೀರು ತಂದು ತಾಲೂಕಿನ 25 ಸಾವಿರ ಎಕರೆ ಪ್ರದೇಶಗಳಿಗೆ ನೀರುಣಿಸುವ ಯೋಜನೆ ರೂಪಿಸಲಾಗಿತ್ತು. ಅದಕ್ಕೂ ಕೂಡ ಇದುವರೆಗೆ ಅನುದಾನ ಕಲ್ಪಿಸಿಲ್ಲ. ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಬಿಜೆಪಿಯವರ ಕೊಡುಗೆ ಏನು? ಯಾವ ಮುಖ ಹೊತ್ತು ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಚಿವರು ಬರುತ್ತಾರೆ ಎಂದು ಪ್ರಶ್ನಿಸಿದರು.

ಹಿಂದೆ ನಾನು ಪೌರಾಡಳಿತ ಸಚಿವನಾಗಿದ್ದ ಅವಧಿಯಲ್ಲಿ ಬಸವಕಲ್ಯಾಣಕ್ಕೆ 60 ಕೋಟಿ ಅನುದಾನ ನೀಡಿದ್ದೇನೆ. ಆದರೆ ಬಿಜೆಪಿಯವರು ಏನು ನೀಡಿದ್ದಾರೆ ಎಂದು ಉತ್ತರಿಸಲಿ. ನನ್ನ ಅವಧಿಯಲ್ಲಿ ನೀಡಿರುವ ಅನುದಾನದಲ್ಲಿಯೇ ಇನ್ನೂ ಕ್ಷೇತ್ರದಲ್ಲಿ ಕೆಲಸ ನಡೆಯುತ್ತಿವೆ. ಕಳೆದ 19 ತಿಂಗಳ ಹಿಂದೆ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಕ್ರಮ, ಅನೈತಿಕ ಚುಟುವಟಿಕೆಗಳಲ್ಲಿ ಭಾಗಿಯಾಗಿದೆ. ರಾಜ್ಯಕ್ಕೆ ಇದ್ದ ಸಾಂಸ್ಕೃತಿಕ ಹಿರಿಮೆ, ಗರಿಮೆ ಬಿಜೆಪಿಯಿಂದ ಮಣ್ಣುಪಾಲಾಗಿದೆ ಎಂದು ಖಂಡ್ರೆ ವಾಗ್ದಾಳಿ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.