ಬೀದರ್: ಬೀದರ್ ಜಿಲ್ಲೆಯಲ್ಲಿನ ಬರದ ಛಾಯೆ ಜೈಲಿಗೂ ತಟ್ಟಿದ್ದು, ಬಂಧಿಖಾನೆಯಲ್ಲಿದ್ದ 23 ವಿಚಾರಣಾಧೀನ ಕೈದಿಗಳ ಸ್ಥಳಾಂತರಕ್ಕೆ ಆದೇಶ ನೀಡಲಾಗಿದೆ.
ಜಿಲ್ಲೆಯ ಔರಾದ್ ಉಪ ಬಂದಿಖಾನೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದ್ದು, ಕೈದಿಗಳಿಗೆ ಸ್ನಾನ, ಶೌಚಾಲಯ ಹಾಗೂ ಕುಡಿಯಲು ನೀರಿನ ಬವಣೆ ಉಲ್ಬಣಗೊಂಡಿದೆ. ಇಂತಹ ಸಂದರ್ಭದಲ್ಲಿ ಕೈದಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ಕಾರಾಗೃಹದಿಂದ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲು ಬಂದಿಖಾನೆ ವೀಕ್ಷಕ ಮಹಿಬೂಬ್ ಸರದಾಂಗಿ ಕ್ರಮ ಕೈಗೊಂಡಿದ್ದಾರೆ.