ETV Bharat / state

ಶಾಸಕ ಬಿ.ನಾರಾಯಣರಾವ್ ನಿಧನ: ವಿಧಾನ ಪರಿಷತ್ ಸದಸ್ಯರಿಂದ ಸಂತಾಪ - vidhana parishad Members condoled the death of MLA B. Narayana Rao

ಶಾಸಕ ಬಿ.ನಾರಾಯಣರಾವ್ ನಿಧನಕ್ಕೆ ವಿಧಾನ ಪರಿಷತ್ ಸದಸ್ಯರು ಸಂತಾಪ ಸೂಚಿಸಿದ್ದು, ಅಗಲಿದ ನಾಯಕನ ಆತ್ಮಶಾಂತಿಗಾಗಿ ಪ್ರಾರ್ಥಿಸಿದ್ದಾರೆ.

Bidar
ವಿಧಾನ ಪರಿಷತ್ ಸದಸ್ಯರಿಂದ ಸಂತಾಪ
author img

By

Published : Sep 24, 2020, 11:36 PM IST

ಬೀದರ್: ಶಾಸಕ ಬಿ.ನಾರಾಯಣರಾವ್ ನಿಧನಕ್ಕೆ ವಿಧಾನ ಪರಿಷತ್ ಸದಸ್ಯರು ಸಂತಾಪ ಸೂಚಿಸಿದ್ದು, ಅಗಲಿದ ನಾಯಕನ ಆತ್ಮಶಾಂತಿಗಾಗಿ ಪ್ರಾರ್ಥಿಸಿದ್ದಾರೆ.

ಶಾಸಕ ಬಿ.ನಾರಾಯಣರಾವ್ ಅವರು ನನ್ನ ಬಾಲ್ಯದ ಗೆಳೆಯ. ಅವರು ಹುಟ್ಟಿದ್ದು ಬಸವಂತಪೂರ್ ಗ್ರಾಮವಾದರೂ ಬೆಳೆದಿದ್ದೆಲ್ಲ ಮಲ್ಕಾಪೂರೆ ಗ್ರಾಮದಲ್ಲೇ ನಮ್ಮೊಂದಿಗೆ ಅಣ್ಣನಾಗಿದ್ದ ಅವರು ಅಗಲಿರುವ ಸುದ್ದಿ ಕೇಳಿ ಆಘಾತವಾಗಿದೆ ಎಂದು ಪರಿಷತ್ ಸದಸ್ಯ ರಘುನಾಥ್ ಮಲ್ಕಾಪೂರೆ ನೋವು ತೋಡಿಕೊಂಡಿದ್ದಾರೆ. ಜೆಪಿ ಚಳವಳಿಯಿಂದ ಜನತಾದಳದ ಮೂಲಕ ಮಾಳೆಗಾಂವ್ ಜಿಲ್ಲಾ ಪರಿಷತ್ ಸದಸ್ಯರಾಗಿ ಸಾಕಷ್ಟು ಕಷ್ಟದ ರಾಜಕಾರಣ ಮಾಡುತ್ತ ಸುದಿರ್ಘ 40 ವರ್ಷಗಳ ಕಾಲ ಜನ ಸೇವೆ ಮಾಡುತ್ತ ಇದೀಗ ಬಸವಕಲ್ಯಾಣ ಶಾಸಕರಾಗಿ ಆಯ್ಕೆಯಾಗಿದ್ದರು. ಯಾವುದೇ ದುಶ್ಚಟಗಳಿಲ್ಲದೇ ಸರಳ, ಸಜ್ಜನಿಕೆ ಅಳವಡಿಸಿಕೊಂಡ ಮುತ್ಸದ್ದಿ ರಾಜಕಾರಣಿ ಕಳೆದುಕೊಂಡು ಜಿಲ್ಲೆಗೆ ತುಂಬಲಾರದ ನಷ್ಟವಾಗಿದ್ದು ದೇವರು ಅವರ ಅಗಲಿಕೆ ದುಃಖ ಭರಿಸುವ ಶಕ್ತಿ ಅವರ ಕುಟುಂಬಸ್ಥರು, ಬೆಂಬಲಿಗರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಲ್ಕಾಪೂರೆ ಸಂತಾಪ ವ್ಯಕ್ತಪಡಿಸಿದ್ದಾರೆ.

Bidar
ಪರಿಷತ್ ಸದಸ್ಯ ರಘುನಾಥ್ ಮಲ್ಕಾಪೂರೆ

ಅಹಿಂದ ಅನುಯಾಯಿ ಕಳೆದುಕೊಂಡೆವು:

ಸರಳತೆ ಹಾಗೂ ನೇರ ನುಡಿಯಿಂದಲೇ ಜನಪ್ರೀಯತೆ ಗಳಿಸಿದ್ದ ಬಿ.ನಾರಾಯಣರಾವ್ ಅವರ ನಿಧನ ತುಂಬಲಾರದ ನಷ್ಟವಾಗಿದ್ದು ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಪ್ರಾರ್ಥನೆ ಮಾಡಿದ್ದಾರೆ.

Bidar
ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ

ಅಗಲಿದ ನಾಯಕನಿಗೆ ವಿಜಯಸಿಂಗ್ ಸಂತಾಪ:

ತಂದೆ ಎನ್.ಧರಂಸಿಂಗ್ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಪ್ರೀತಿಗೆ ಪಾತ್ರರಾದ ಶಾಸಕ ಬಿ.ನಾರಾಯಣರಾವ್ ಅವಗಲಿಕೆಯಿಂದ ತುಂಬಾ ಆಘಾತವಾಗಿದೆ. ದೇವರು ಅವರ ಅಗಲಿಕೆ ದುಃಖ ತಡೆಯುವ ಶಕ್ತಿ ಕುಟುಂಬಸ್ಥರಿಗೆ ನೀಡಲಿ ಎಂದು ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಸಂತಾಪ ಸೂಚಿಸಿದ್ದಾರೆ.

Bidar
ಶಾಸಕ ಬಿ.ನಾರಾಯಣರಾವ್ ನಿಧನಕ್ಕೆ ವಿಧಾನ ಪರಿಷತ್ ಸದಸ್ಯರು ಸಂತಾಪ ಸೂಚಿಸಿದ್ದಾರೆ

ಚಂದ್ರಶೇಖರ ಪಾಟೀಲ್ ಸಂತಾಪ:

ಬೀದರ್ ಜಿಲ್ಲೆಯ ಸರಳ, ಸಜ್ಜನಿಕೆ, ದೀನ ದಲಿತರ ದ್ವನಿಯಾಗಿದ್ದ ಬಸವಕಲ್ಯಾಣ ಶಾಸಕ ಬಿ ನಾರಾಯಣರಾವ ಅಗಲಿಕೆಯಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ. ಬೀದರ್, ಹುಮನಾಬಾದ್ ಹಾಗೂ ಬಸವಕಲ್ಯಾಣ ಭಾಗದಲ್ಲಿ ಜನಪ್ರಿಯತೆ ಗಳಿಸಿಕೊಂಡು ಸುದಿರ್ಘಕಾಲ ರಾಜಕೀಯ ಮಾಡಿ ಜನ ಸೇವೆ ಮಾಡಿದ ನಾರಾಯಣರಾವ್ ಅವರ ಅಗಲಿಕೆಯಿಂದ ತುಂಬಾ ನೋವಾಗಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್ ಸಂತಾಪ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.