ETV Bharat / state

ಪಶುವೈದ್ಯಕೀಯ ಇಲಾಖೆಯ ಉಪಕರಣಗಳು ಕೊರೊನಾ ಪತ್ತೆಗೆ ಹಸ್ತಾಂತರ: ಸಚಿವ ಪ್ರಭು ಚೌವ್ಹಾಣ್​ - Veterinary Medical colleges

ಪಶುವೈದ್ಯಕೀಯ ಇಲಾಖೆಯು ತನ್ನ ವೈದ್ಯಕೀಯ ಕಾಲೇಜುಗಳಲ್ಲಿರುವ ಕೋವಿಡ್​-19 ಪರೀಕ್ಷೆಗೆ ಅಗತ್ಯವಿರುವ ಆರ್​ಟಿ-ಪಿಸಿಆರ್​ ಉಪಕರಣಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದೆ.

Prabhu Chauhan
ಪ್ರಭು ಚವ್ಹಾಣ್
author img

By

Published : May 10, 2020, 12:19 AM IST

ಬೀದರ್: ಕೋವಿಡ್-19 ಪತ್ತೆ ಹಚ್ಚುವಲ್ಲಿ ಲ್ಯಾಬ್‌ಗಳ ಪಾತ್ರ ಪ್ರಮುಖವಾಗಿದ್ದು, ಪಶುವೈದ್ಯಕೀಯ ಕಾಲೇಜಿನಲ್ಲಿ ಲಭ್ಯವಿದ್ದ ಆರ್‌ಟಿ-ಪಿಸಿಆರ್ ಉಪಕರಣಗಳನ್ನು ಆರೋಗ್ಯ ಇಲಾಖೆಯ ಲ್ಯಾಬ್‌ಗಳಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯದಲ್ಲಿ ಕೊವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ರೋಗ ಪತ್ತೆ ಹಚ್ಚುವಲ್ಲಿ ಬಳಸಲಾಗುವ ಆರ್​​ಟಿ ಪಿಸಿಆರ್ ಉಪಕರಣಗಳು ಪಶುಸಂಗೋಪನೆ ಇಲಾಖೆಯ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ಲ್ಯಾಬ್‌ಗಳಲ್ಲಿ ಲಭ್ಯವಿದ್ದು, ಉಪಕರಣಗಳನ್ನು ಸಹ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಬಳಸಿಕೊಳ್ಳಲು ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿತ್ತು. ಸದ್ಯ ಈ ಉಪಕರಣಗಳನ್ನು ಕೊವಿಡ್-19 ಪತ್ತೆಗೆ ಬಳಸಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಸೋಂಕು ಪತ್ತೆಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನಲ್ಲಿ ಲಭ್ಯವಿದ್ದ 2 ಆರ್​ಟಿ ಪಿಸಿಆರ್ ಉಪಕರಣಗಳನ್ನು ಆರೋಗ್ಯ ಇಲಾಖೆಗೆ ನೀಡಲಾಗಿದೆ. ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಮತ್ತು ಧಾರವಾಡ, ಕರ್ನಾಟಕ ಡಿ.ಎನ್.ಎ ಸಂಶೋಧನಾ ಸಂಸ್ಥೆ ಧಾರವಾಡ ಹಾಗೂ ಧಾರವಾಡದ ಕೃಷಿ ಜೈವಿಕ ತಂತ್ರಜ್ಞಾನ ಸಂಸ್ಥೆಯ ಉಪಕರಣಗಳನ್ನು ಸಹ ಕೋವಿಡ್​-19 ಪತ್ತೆಗೆ ಬಳಸಿಕೊಳ್ಳಲು ಐ.ಸಿ.ಎಂ.ಆರ್ ನಿಯಮಾವಳಿಗಳ ಪ್ರಕಾರ ಹಸ್ತಾಂತರಿಸಲಾಗಿದೆ.

ಕೋವಿಡ್​-19ರ ಪರೀಕ್ಷೆ ಜೈವಿಕ ಸುರಕ್ಷತಾ ಮಟ್ಟ-2ರಲ್ಲಿ ಮಾಡಬೇಕಾಗಿರುವುದರಿಂದ ಸಾಕಷ್ಟು ಎಚ್ಚರ ವಹಿಸಿ ಕಾರ್ಯನಿರ್ವಹಿಸಬೇಕಾಗುತ್ತದೆ. ಸದ್ಯ ಈ ಎಲ್ಲಾ ಉಪಕರಣಗಳನ್ನು ಬಳಸಿಕೊಂಡಿದ್ದಾದಲ್ಲಿ ಅಂದಾಜು ಸುಮಾರು 10,000 ಟೆಸ್ಟ್​ಗಳನ್ನು ಮಾಡಬಹುದಾಗಿದೆ. ಅಲ್ಲದೆ ಉಪಕರಣಗಳ ಮೇಲೆ ಕಾರ್ಯನಿರ್ವಹಿಸುವ ನುರಿತ ತಂತ್ರಜ್ಞರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.