ETV Bharat / state

ಬೀದರ್​: ಕಲ್ಲು ಕ್ವಾರಿಯ ಹೊಂಡದಲ್ಲಿ ಈಜಲು ಹೋದ ಯುವಕರಿಬ್ಬರ ಸಾವು - two youths died in a stone quarry pit water

Youths died in a stone quarry pit water :ಬೀದರ್​ನಲ್ಲಿ ಯುವಕರಿಬ್ಬರು ಕಲ್ಲು ಕ್ವಾರಿಯ ಹೊಂಡದಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಈಜಲು ಹೊದ ಯುವಕರಿಬ್ಬರು ನೀರು ಪಾಲು
ಈಜಲು ಹೊದ ಯುವಕರಿಬ್ಬರು ನೀರು ಪಾಲು
author img

By ETV Bharat Karnataka Team

Published : Oct 21, 2023, 8:10 PM IST

ಬೀದರ್ ​: ಈಜಲು ಹೋದ ಯುವಕರಿಬ್ಬರು ಜಲ ಸಮಾಧಿಯಾದ ಘಟನೆ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಫಾತಿಮಾಪೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಇಸ್ಮಾಯಿಲ್ (21) ಹಾಗೂ ಸಮಿರ(26) ಸಾವನಪ್ಪಿರುವ ದುರ್ದೈವಿಗಳು. ಇಂದು ಬೆಳಗ್ಗೆ ಕಲ್ಲು ಕ್ವಾರಿಯ ಹೊಂಡದಲ್ಲಿ ಇಬ್ಬರು ಯುವಕರು ಈಜಾಡಲು ತೆರಳಿದ್ದು ಈ ವೇಳೆ ನೀರಲ್ಲೇ ಮುಳುಗಿ ಸಾವನ್ನಪ್ಪಿದ್ದಾರೆ.

ಮಾಹಿತಿ ಪಡೆದ ಅಗ್ನಿ ಶಾಮಕ ದಳ ಹಾಗೂ ಚಿಟಗುಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತ ದೇಹಗಳನ್ನು ಹೊಂಡದಿಂದ ಹೊರ ತೆಗೆದಿದ್ದಾರೆ. ಶವಗಳನ್ನು ಮೇಲಕ್ಕೆತ್ತುವ ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದರು. ಸಾವನ್ನಪ್ಪಿರುವ ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಕೆಂಪು ಕಲ್ಲು ಗಣಿಗಾರಿಕೆ ಮಾಡಿ ಹೊಂಡ ಮಾಡುತ್ತಿರುವ ಕಾರಣ ಸರಣಿ ದುರಂತಗಳು ನಡೆಯುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಇದಕ್ಕೂ ಮುನ್ನ ಕಳೆದ ವಾರ ಬೇಮಳಖೇಡ ಗ್ರಾಮದಲ್ಲಿ ಇಬ್ಬರು ಬಾಲಕರು ನೀರು ಪಾಲಾಗಿದ್ದರು. ಆ ಘಟನೆ ಮಾಸುವ ಮೊದಲೇ ಇಂದು ಮತ್ತೊಂದು ದುರ್ಘಟನೆ ನಡೆದಿದೆ. ಸದ್ಯ ಚಿಟಗುಪ್ಪ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಯುಕೆ ಪ್ರಜೆ ಸಾವು

ಇತರ ಸುದ್ದಿಗಳು : ವಿಜಯಪುರದಲ್ಲಿ ರಸ್ತೆ ಅಪಘಾತದಿಂದ ನಾಲ್ವರು ಮೃತಪಟ್ಟ ಘಟನೆ ಅಕ್ಟೋಬರ್ 17 ರಂದು ನಡೆದಿತ್ತು. 17 ರ ರಾತ್ರಿ 10 ಗಂಟೆಯ ಸುಮಾರಿಗೆ ಮೃತಪಟ್ಟ ನಾಲ್ವರು ಸ್ನೇಹಿತರು ಊಟಕ್ಕೆಂದು ಹೊರಗೆ ತೆರಳಿದ್ದರು. ಊಟದ ನಂತರ ರಾಷ್ಟ್ರೀಯ ಹೆದ್ದಾರಿಯ 50ರಲ್ಲಿನ ಟೋಲ್​ಗೇಟ್ ಹತ್ತಿರದ ಟ್ರಕ್ ಬೇ ಬಳಿ ಇರುವ ಡಿವೈಡರ್ ಮೇಲೆ ಯುವಕರು ಕುಳಿತಿದ್ದರು. ಈ ಸಂದರ್ಭ ಅದೇ ಮಾರ್ಗದಲ್ಲಿ ಬಂದ ಲಾರಿ ಯುವಕರ‌ ಮೇಲೆ ಹರಿದಿತ್ತು.

ಕೂಡಲೇ ಸ್ಥಳೀಯರು ಆಂಬ್ಯುಲೆನ್ಸ್​ಗೆ ಕರೆ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಲು ಪ್ರಯತ್ನಿಸಿದ್ದರು. ಆದರೆ ಅಪಘಾತದ ರಭಸಕ್ಕೆ ಯುವಕರು ಗಂಭೀರ ಗಾಯದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಪಘಾತ ನಡೆಸಿದ ಲಾರಿ ಚಾಲಕ ಲಾರಿಯೊಂದಿಗೆ ಪರಾರಿಯಾಗಿದ್ದಾನೆ. ಯುವಕರಲ್ಲದೇ ಇವರಿಗೆ ಸೇರಿದ್ದ ಬೈಕ್​ಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದವು.

ಶಿವಾನಂದ ಚೌಧರಿ (25), ಸುನೀಲ ಖಾನಾಪೂರ (26), ಈರಣ್ಣ ಕೋಲಾರ (26) ಮತ್ತು ಪ್ರವೀಣ ಪಾಟೀಲ್ (30)ಸಾವನ್ನಪ್ಪಿರುವ ಸ್ನೇಹಿತರು. ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ ಸೇರಿದಂತೆ ಮೊದಲಾದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.