ಬೀದರ್: ಜಿಲ್ಲೆಯಲ್ಲಿ ನಿನ್ನೆ ಇಬ್ಬರು ಕೊರೊನಾ ಸೋಂಕಿತರನ್ನು ಬಿಡುಗಡೆ ಮಾಡುವ ಮೂಲಕ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ನಾಲ್ಕಕ್ಕೆ ಇಳಿದಂತಾಗಿದೆ.
ಸದ್ಯ ರೆಡ್ ಝೋನ್ನಿಂದ ಆರೇಂಜ್ ಝೋನ್ ಗೆ ಬಂದಿರುವ ಬೀದರ್, ಕೊರೊನಾ ವೈರಾಣು ವಿರುದ್ದ ಹೋರಾಡುವಲ್ಲಿ ಯಶಸ್ವಿಯಾಗ್ತಿದ್ದು ಇನ್ನೂ ಕೆಲ ದಿನಗಳಲ್ಲಿ ಗ್ರೀನ್ ಝೋನ್ ಆಗುವ ಲಕ್ಷಣಗಳು ಕಂಡು ಬರುತ್ತಿದೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ 15 ಮಂದಿ ಕೊರೊನಾ ಮಹಾಮಾರಿಗೆ ತುತ್ತಾಗಿದ್ದರು. ಅದರಲ್ಲಿ ಈಗಾಗಲೇ 9 ಮಂದಿ ಗುಣಮುಖರಾಗಿ ಏಪ್ರಿಲ್ 22ರಂದು ಬಿಡುಗಡೆ ಆಗಿದ್ದರು. 6 ಜನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಶುಕ್ರವಾರ ಇಬ್ಬರ ವರದಿ ನೆಗೆಟಿವ್ ಬಂದ ಹಿನ್ನೆಲೆ ಅವರೂ ಕೂಡ ಬಿಡುಗಡೆಯಾಗಿದ್ದು, ಇನ್ನು ನಾಲ್ಕು ಜನ ಮಾತ್ರ ಬಾಕಿ ಉಳಿದಂತಾಗಿದೆ.
ಇನ್ನೂ ಬಿಡುಗಡೆಯಾದ ಈ ಇಬ್ಬರು ನಗರದ ಹಳೇ ಬೀದರ್ ನವರಾಗಿದ್ದು, ಈ ಪೈಕಿ ಒಬ್ಬರು ನವದೆಹಲಿಯ ಮರ್ಕಜ್ನಲ್ಲಿ ಪಾಲ್ಗೊಂಡವರಾದ್ದರೆ ಇನ್ನೊಬ್ಬರು ಮಹಿಳೆಯಾಗಿದ್ದಾರೆ. ಆಸ್ಪತ್ರೆಯಲ್ಲಿರುವವರ ಆರೋಗ್ಯ ಸ್ಥಿರವಾಗಿದ್ದು ಶೀಘ್ರದಲ್ಲಿ ಅವರೂ ಸಹ ಬಿಡುಗಡೆಯಾಗುವ ಸಾಧ್ಯತೆಯಿದೆ.