ETV Bharat / state

ಬಸವಕಲ್ಯಾಣದಲ್ಲಿ ಗುಡುಗು ಮಿಂಚಿನೊಂದಿಗೆ ಅಬ್ಬರಿಸಿದ ಮಳೆ: ಸಿಡಿಲಿಗೆ ಜೋಡೆತ್ತುಗಳು ಬಲಿ

ಮುಂಗಾರು ಮಳೆ ಆರಂಭವಾಗಿ ಬಿತ್ತನೆಗಾಗಿ ಜಮೀನು ಹದಗೊಳಿಸುವ ಸಂದರ್ಭದಲ್ಲೇ ಸಿಡಿಲಿನಿಂದಾಗಿ ಎತ್ತುಗಳನ್ನು ಕಳೆದುಕೊಂಡ ರೈತನಿಗೆ ಇದೀಗ ದಿಕ್ಕು ತೋಚದಂತಾಗಿದೆ.

two oxen died by thunderstorm rain at basavakalyana
ಬಸವಕಲ್ಯಾಣದಲ್ಲಿ ಗುಡುಗು ಮಿಂಚಿನೊಂದಿಗೆ ಸುರಿದ ಮಳೆ
author img

By

Published : Jun 11, 2020, 6:42 PM IST

ಬಸವಕಲ್ಯಾಣ: ತಾಲೂಕಿನಲ್ಲಿ ಮುಂಗಾರುಮಳೆಯ ಆರ್ಭಟ ಹೆಚ್ಚಾಗಿದ್ದು, ಧಾಮುರಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಬಲಿಯಾಗಿವೆ.

ಗ್ರಾಮದ ಲಕ್ಷ್ಮಿಬಾಯಿ, ವೆಂಕಟ್ ಜಾಧವ್​ ದಂಪತಿ ತಮ್ಮ ಎತ್ತುಗಳನ್ನು ಜಮೀನಿನ ಮರಕ್ಕೆ ಕಟ್ಟಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಸಿಡಿಲು ಬಡಿದು ಎರಡು ಎತ್ತುಗಳು ಕಟ್ಟಿದ ಸ್ಥಳದಲ್ಲೇ ಸಾವು

ಮುಂಗಾರು ಮಳೆ ಆರಂಭವಾಗಿ ಬಿತ್ತನೆಗಾಗಿ ಜಮೀನು ಹದಗೊಳಿಸುವಾಗಲೇ ಸಿಡಿಲಿನಿಂದಾಗಿ ಎತ್ತುಗಳನ್ನು ಕಳೆದುಕೊಂಡ ರೈತನಿಗೆ ಇದೀಗ ದಿಕ್ಕು ತೋಚದಂತಾಗಿದೆ. ಎತ್ತುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸುದ್ದಿ ತಿಳಿದ ಮಂಠಾಳ ಠಾಣೆ ಪೊಲೀಸರು ಹಾಗೂ ಪಶು ಆಸ್ಪತ್ರೆ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.