ETV Bharat / state

ನೀರಿನ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಸಾವು, ಬಳ್ಳಾರಿಯಲ್ಲಿ ಹೆಡ್ ​ಕಾನ್ಸ್​ಟೇಬಲ್​ ಆತ್ಮಹತ್ಯೆ

ಬಾಲಕರಿಬ್ಬರು ನೀರಿನ ಹೊಂಡದೊಳಗೆ ಬಿದ್ದು ಮೃತಪಟ್ಟ ಘಟನೆ ಬೀದರ್‌ನ ಬೇಮಳಖೇಡ ಗ್ರಾಮದಲ್ಲಿ ನಡೆದಿದೆ.

Two children drown in water pit
Two children drown in water pit
author img

By ETV Bharat Karnataka Team

Published : Oct 10, 2023, 4:21 PM IST

Updated : Oct 10, 2023, 5:05 PM IST

ಬೀದರ್: ನೀರು ತರಲು ಹೋಗಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಸಾವಿಗೀಡಾದ ಘಟನೆ ತಾಲೂಕಿನ ಬೇಮಳಖೇಡ ಗ್ರಾಮದಲ್ಲಿ ಇಂದು ನಡೆದಿದೆ. ಗಣೇಶ್(10) ಮತ್ತು ಸಾಯಿನಾಥ್(15) ಮೃತಪಟ್ಟ ಬಾಲಕರು. ಮೊದಲು ಓರ್ವ ಬಾಲಕ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ.

ಕೂಡಲೇ ರಕ್ಷಣೆಗೆ ಧಾವಿಸಿದ ಮತ್ತೊಬ್ಬನೂ ಹೊಂಡದಲ್ಲಿ ಬಿದ್ದಿದ್ದಾನೆ. ಈಜು ಬರದೇ ಇಬ್ಬರೂ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಶವಗಳನ್ನು ಹೊರತೆಗೆದರು. ಬೇಮಳಖೇಡ ಪೊಲೀಸ್​ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಪತ್ನಿ ಅಗಲಿಕೆಯಿಂದ ಮನನೊಂದು ಹೆಡ್​ಕಾನ್​ಸ್ಟೇಬಲ್ ಆತ್ಮಹತ್ಯೆ

ಬಳ್ಳಾರಿಯಲ್ಲಿ ಹೆಡ್ ​ಕಾನ್ಸ್​ಟೇಬಲ್​ ಆತ್ಮಹತ್ಯೆ: ನಗರದ ಡಿಎಆರ್‌ನಲ್ಲಿ ಹೆಡ್ ಕಾನ್ಸ್​ಟೇಬಲ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಕಾಶ್ ನಾಯ್ಕ್ ಎಂಬುವರು ಇಂದು ಬೆಳಗ್ಗೆ ಪೊಲೀಸ್ ಕ್ವಾಟರ್ಸ್​​ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೂಲತಃ ಹಗರಿಬೊಮ್ಮನಗಳ್ಳಿ ತಾಲೂಕಿನ ಆನೇಕಲ್ ತಾಂಡದವರಾದ ಪ್ರಕಾಶ್ ನಾಯ್ಕ್, 2021ನೇ ಬ್ಯಾಚ್‌ನ ಡಿಎಆರ್ ಪೊಲೀಸ್ ಆಗಿ ನೇಮಕ ಹೊಂದಿದ್ದರು. ಇವರಿಗೆ ಸಿಸಿಟಿ ಟ್ರೈನಿಂಗ್​ಗೆ ಬೆಂಗಳೂರಿಗೆ ತೆರಳಲು ಮೇಲಾಧಿಕಾರಿಗಳು ಸೂಚಿಸಿದ್ದರು. ಆದರೆ, ಪ್ರಕಾಶ್ ನಾಯ್ಕ್ ಟ್ರೈನಿಂಗ್​ಗೆ ಹೋಗಲು ನಿರಾಕರಿಸಿದ್ದರು.

ಇದನ್ನೂ ಓದಿ: ಬೆಳಗಾವಿ ಕಪಿಲೇಶ್ವರ ಹೊಂಡದಲ್ಲಿ ಮುಳುಗಿದ್ದ ಎರಡು ಶವದ ಗುರುತು ಪತ್ತೆ, ತನಿಖೆ ಮುಂದುವರಿಕೆ

Last Updated : Oct 10, 2023, 5:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.