ETV Bharat / state

ಮನೆ ಪಕ್ಕದ ತಿಪ್ಪೆಗುಂಡಿಗೆ ಬಿದ್ದು ಸಾವಿನಲ್ಲಿ ಒಂದಾದ ಅವಳಿ ಮಕ್ಕಳು

ಮನೆಯ ಪಕ್ಕದಲ್ಲಿದ್ದ ತಿಪ್ಪೆ ಗುಂಡಿಯಲ್ಲಿ ಮಳೆಯ ಕೊಳಚೆ ನೀರು ತುಂಬಿನಿಂತಿದ್ದು, ಅವಳಿ ಮಕ್ಕಳಿಬ್ಬರು ತಿಪ್ಪೆಗುಂಡಿಗೆ ಜಾರಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ.

ತಿಪ್ಪೆಗುಂಡಿಗೆ ಬಿದ್ದು ಅವಳಿ ಮಕ್ಕಳಿಬ್ಬರು ಬಲಿ
author img

By

Published : Sep 29, 2019, 6:03 AM IST

ಬೀದರ್​: ಮನೆಯ ಪಕ್ಕದಲ್ಲಿದ್ದ ತಿಪ್ಪೆಗುಂಡಿಗೆ ಅವಳಿ ಮಕ್ಕಳಿಬ್ಬರು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಬಸವಕಲ್ಯಾಣ ನಗರದ ಶಿವಾಜಿ ಚೌಕ್ ಬಳಿ ನಡೆದಿದೆ.

ತಿಪ್ಪೆಗುಂಡಿಗೆ ಬಿದ್ದು ಅವಳಿ ಮಕ್ಕಳಿಬ್ಬರು ಬಲಿ

ನಿತೀನ್ ಸೂರ್ಯವಂಶಿ ಅವರ ನಾಲ್ಕೂವರೆ ವರ್ಷದ ಅವಳಿ ಮಕ್ಕಳಾದ ದರ್ಶನ್ ಮತ್ತು ಆರ್ಯನ್ (ಸೋಹಂ ಮತ್ತು ಶಿವಂ) ಎಂದು ಗುರುತಿಸಲಾಗಿದೆ. ನಿನ್ನೆ ಬೆಳಿಗ್ಗೆ 11ರ ಸುಮಾರಿಗೆ ಮನೆ ಪಕ್ಕವೇ ಆಟವಾಡುತಿದ್ದ ಮಕ್ಕಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿವೆ. ಮಕ್ಕಳು ಕಾಣಲಿಲ್ಲ ಎಂದು ಬೆಳಗ್ಗೆಯಿಂದ ರಾತ್ರಿವರೆಗೆ ಕುಟುಂಬದವರು ಹುಡುಕಾಟದಲ್ಲಿ ತೊಡಗಿದ್ದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.

ಆದರೆ, ರಾತ್ರಿ 11ರ ಸುಮಾರಿಗೆ ಮನೆ ಪಕ್ಕದಲ್ಲೇ ಇರುವ ತಿಪ್ಪೆಗುಂಡಿಯಲ್ಲಿ ಮಕ್ಕಳ ಶವ ಪತ್ತೆಯಾಗಿದೆ. ಮಳೆ ನೀರಿನೊಂದಿಗೆ ಕೊಳಚೆ ನೀರು ಸೇರಿ ತುಂಬಿನಿಂತಿದ್ದ ತಿಪ್ಪೆಗುಂಡಿಯಲ್ಲಿ ಬಾಲಕರಿಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಬಾಲಕರ ಶವ ಪತ್ತೆಮಾಡಿದರು. ಸಿಪಿಐ ಮಲ್ಲಿಕಾರ್ಜುನ ಡಪ್ಪಿನ್ ಹಾಗೂ ಪಿಎಸ್ಐ ಸವಿತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ ವರದಿಗಾರ
ಬಸವಕಲ್ಯಾಣ

ಕೆಎ_ಬಿಡಿಆರ್_ಬಿಎಸ್ಕೆ_29_1
ಅವಳಿ ಮಕ್ಕಳ ಚಿತ್ರ

ಕೆಎ_ಬಿಡಿಆರ್_ಬಿಎಸ್ಕೆ_29_2 ಮತ್ತು 3 ಮತ್ತು 4
ತಿಪ್ಪೆಗುಂಡಿಯಲ್ಲಿ ಬಿದ್ದು ಮೃತಪಟ್ಟ ಮಕ್ಕಳ ಶವ ಹೊರ ತೆಗೆಯುತ್ತಿರುವದು.

ತಿಪ್ಪೆಗುಂಡಿಗೆ ಅವಳಿ ಮಕ್ಕಳ ಬಲಿ

ಸಾವಿನಲ್ಲು ಒಂದಾದ ಅವಳಿ ಮಕ್ಕಳು.

ಬಸವಕಲ್ಯಾಣ: ಜನಿಸುವಾಗ ಒಂದಾಗಿದ್ದ ಅವಳಿ ಮಕ್ಕಳು ಸಾವಿನಲ್ಲಿಯೂ ಜೋತೆಯಾಗ ಹೃದಯವಿದ್ರಾಹಕ ಘಟನೆ ನಗರದಲ್ಲಿ ಶನಿವಾರ ಜರುಗಿದೆ.
ಮೃತರನ್ನು ನಿತೀನ್ ಸೂರ್ಯವಂಶಿ ಅವರ ಅವಳಿ ಮಕ್ಕಳಾದ ದರ್ಶನ್ ಮತ್ತು ಆರ್ಯನ್ (ಸೋಹಂ ಮತ್ತು ಶಿವಂ) ಎಂದು ಗುರುತಿಸಲಾಗಿದೆ.

ನಗರದ ಶಿವಾಜಿ ಚೌಕ್ ಬಳಿಯ ಮನೆ ಮುಂದೆ ಆಟವಾಡುತ್ತಿದ್ದ ನಾಲ್ಕೂವರೆ ವರ್ಷದ ಈ ಇಬ್ಬರು ಅವಳಿ ಮಕ್ಕಳು ದುರಂತ ಸಾವಿಗಿಡಾಗಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

ಬೆಳಗ್ಗೆ 11ರ ಸುಮಾರಿಗೆ ಮನೆ ಪಕ್ಕವೆ ಆಟವಾಡುತಿದ್ದ ಮಕ್ಕಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿವೆ.

ಮಕ್ಕಳು ಕಾಣಲಿಲ್ಲ ಎಂದು ಬೆಳಗ್ಗೆಯಿಂದ ರಾತ್ರಿವರೆಗೆ ಕುಟುಂಬದವರು ಹುಡುಕಾಟದಲ್ಲಿ ತೊಡಗಿದ್ದರು. ರಾತ್ರಿವರೆಗೆ ಎಲ್ಲೆಡೆ ತಡಕಾಡಿದರೂ ಮಕ್ಕಳು ಸಿಗದಿದ್ದಾಗ ಪಾಲಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.
ದಿಢೀರನೆ ಮಕ್ಕಳು ಕಾಣೆಯಾಗಿದ್ದ ಸುದ್ದಿ ಕಾಳ್ಗಿಚ್ಚಿನಂತೆ ನಗರದಾದ್ಯಂತ ಹರಡಿ ಮಕ್ಕಳ ಹುಡುಕಾಟಕ್ಕಾಗಿ ಸಂಬಂಧಿಕರ ಜೊತೆ ಪೊಲೀಸರು ಮತ್ತು ಮಕ್ಕಳ ಸಂಬಂಧಿಕರು ಹುಡುಕಾಡುತಿದ್ದರು. ಈ ಮಧ್ಯೆ ಮಕ್ಕಳು ಅಪಹರಣವಾಗಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.

ಆದರೆ ರಾತ್ರಿ 11ರ ಸುಮಾರಿಗೆ ಮನೆ ಪಕ್ಕದಲ್ಲೇ ಇವರುವ ತಿಪ್ಪೆಗುಂಡಿಯಲ್ಲಿ ಮಕ್ಕಳ ಶವ ಪತ್ತೆಯಾಗಿವೆ.

ಮಳೆ ನೀರಿನೊಂದಿಗೆ ಕೊಳಚೆ ನೀರು ಸೇರಿ ತುಂಬಿನಿಂತಿದ್ದ ತಿಪ್ಪೆಗುಂಡಿಯಲ್ಲಿ ಬಾಲಕರಿಬ್ಬರು ಮುಳುಗಿದ್ದು,
ಹೀಗಾಗಿ ಈ ಬಗ್ಗೆ ಯಾರಿಗೂ ಸಂಶಯ ಬಂದಿರಲಿಲ್ಲ.
ಮನ್ನೆ ಸುತ್ತಲಿನ ಪರಿಸರದಲ್ಲಿಯ ಬಾವಿ ಸೇರಿದಂತೆ ತಗ್ಗು ಗುಂಡಿಗಳಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಒರ್ವ ಬಾಲಕನ ಶವ ಪತ್ತೆಯಾಗಿತ್ತು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಶೋಧ ಕಾರ್ಯ ನಡೆಸಿದಾಗ ಮತ್ತೊಂದು ಬಾಲಕನ ಶವ ಅದೇ ಸ್ಥಳದಲ್ಲಿ ಪತ್ತೆಯಾಯಿತು.
ಘಟನೆ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಮಲ್ಲಿಕಾರ್ಜುನ ಡಪ್ಪಿನ್ ಹಾಗೂ ಪಿಎಸ್ಐ ಸವಿತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
Body:UDAYAKUAMR MuleConclusion:BASAVAKALYAN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.