ಬಸವಕಲ್ಯಾಣ: ಅಸ್ವಚ್ಚ ಪರಿಸರದಿಂದ ಕಂಗೆಟ್ಟಿದ್ದ ನಗರದ ವಾರ್ಡ್ ನಂ. 11 ಹಾಗೂ 4ರ ವ್ಯಾಪ್ತಿಯಲ್ಲಿಯ ಪರಿಸರ ಸ್ವಚ್ಚತೆಗೆ ನಗರಸಭೆ ಮುಂದಾಗಿದ್ದು, ಜನರು ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.
ಬಸವಕಲ್ಯಾಣ ಜನರಿಗೆ ರೋಗ, ಭಾಗ್ಯ ಕಾರಣ ? ಎನ್ನುವ ಶಿರ್ಷಿಕೆಯಡಿ ನ. 29ರಂದು ಈ ಟಿವಿ ಭಾರತದಲ್ಲಿ ಪ್ರಸಾರವಾದ ಸುದ್ದಿಯಿಂದ ಎಚ್ಚೆತ್ತ ನಗರಸಭೆ ಅಧಿಕಾರಿ, ಸಿಬ್ಬಂದಿಗಳು ನಗರಸಭೆ ನೈರ್ಮಲ್ಯ ನಿರೀಕ್ಷಕ ಝರನಪ್ಪ ರಾಸೂರೆ ನೇತೃತ್ವದಲ್ಲಿ ವಿವಿಧ ಓಣಿಗಳಿಗೆ ತೆರಳಿ ಅಸ್ವಚ್ಚ ಪರಿಸರವನ್ನು ಸ್ವಚ್ಚಗೊಳಿಸಲು ಶ್ರಮಿಸಿದರು.
ಬಸವಕಲ್ಯಾಣದ ಜನರಿಗೆ ರೋಗ ಭಾಗ್ಯ, ಕಾರಣ!?
ನರೆಗಾರಗಲ್ಲಿ, ಶಾಹುಸೇನ್, ಅನ್ವರ್‌ಪೇಟ ಮಾಳಿಗಲ್ಲಿ ಸೇರಿದಂತೆ ಸುತ್ತಲಿನ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ನಗರಸಭೆ ಸಿಬ್ಬಂದಿ ಸ್ವಚ್ಚಗೊಳಿಸಿದರು. ಬಡಾವಣೆಗಳಲ್ಲಿಯ ರಸ್ತೆ ಬದಿ ಹಾಗೂ ಖಾಲಿ ಸ್ಥಳಗಳಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ವಸ್ತುಗಳನ್ನು ವಿಲೇವಾರಿಗೊಳಿಸಿದ ನಗರಸಭೆ ಸಿಬ್ಬಂದಿ, ಕಸ ಕಡ್ಡಿಗಳಿಂದ ತುಂಬಿದ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಮುಂದೆ ಹರಿದುಹೊಗಲು ವ್ಯವಸ್ಥೆ ಮಾಡಿದರು.