ಬೀದರ್: ಅತಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗುವ ಗಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕಿಸಾನ್ ಸಮ್ಮೇಳನ ಅದ್ಧೂರಿಯಾಗಿ ನಡೆದಿದ್ದು, ಸಮ್ಮೇಳನದಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರ ಕುಟುಂಬಗಳಿಗಾಗಿ ದೇಣಿಗೆ ಸಂಗ್ರಹ ಮಾಡುವ ಮೂಲಕ ಕೃಷಿ ವಿದ್ಯಾರ್ಥಿಗಳು ಯೋಧರಿಗೆ ನಮನ ಸಲ್ಲಿಸಿದರು.
ತರಹೆವಾರಿ ತರಕಾರಿಗಳಲ್ಲಿ ಒಂದು ಕಡೆ ಹುತಾತ್ಮ ಯೋಧರಿಗೆ ಸಲಾಂ ಎನ್ನುತ್ತಿರುವ ದೃಶ್ಯ. ಮೊತ್ತೊಂದು ಕಡೆ ವಿವಿಧ ಹಣ್ಣುಗಳಲ್ಲಿ ಮೂಡಿ ಬಂದಿರುವ ಸಾಧಕರ ಭಾವಚಿತ್ರಗಳು. ಹಿಂದಳಿದ ಪ್ರದೇಶ ಎಂದು ಹಣೆ ಪಟ್ಟಿ ಹೊಂದಿರುವ ಗಡಿ ಜಿಲ್ಲೆಯಲ್ಲಿ ರೈತರು ಕಿಸಾನ್ ಸಮ್ಮೇಳನದಲ್ಲಿ ಹುತಾತ್ಮ ಯೋಧರ ಛಾಯೆ ಕಂಡು ಬಂದು ಜೈ ಜವಾನ್ ಜೈ ಕಿಸಾನ ಎಂಬಂತಾಗಿತ್ತು.
ಬೀದರ್ ತಾಲೂಕಿನ ಜನವಾಡ ಗ್ರಾಮದ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇಂದು ಕಿಸಾನ್ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ಬಾರಿಗೆ ಗಡಿ ಜಿಲ್ಲೆಯಲ್ಲಿ ಕಿಸಾನ್ ಸಮ್ಮೇಳನ ಹಮ್ಮಿಕೊಂಡಿದ್ರಿಂದ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಸಮ್ಮೇಳನದಲ್ಲಿ ಕೃಷಿಗೆ ಸಂಬಂಧಿಸಿದ ಹೊಸ ಹೊಸ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಲು ಸ್ಟಾಲ್ಗಳಿಗೆ ಮುಗಿಬೀಳುತ್ತಿದ್ದಾರೆ. ಕಟಾವು ಯಂತ್ರಗಳು, ಕಬ್ಬು ಬೆಳ ಸೇರಿದಂತೆ ವಿವಿಧ ತಳಿಗಳು ಹಾಗೂ ಪಾಲಿ ಹೌಸ್, ಗ್ರೀನ್ ಹೌಸ, ಡ್ರೀಪ್ ಇರಿಗೇಷನ್ ಬಗ್ಗೆ ಸಮ್ಮೇಳನದಲ್ಲಿ ಸಾವಿರಾರು ರೈತರು ಮಾಹಿತಿ ಪಡೆದುಕೊಂಡ್ರು.
ಇನ್ನು ಫಲಪುಷ್ಟ ಪ್ರರ್ದಶನದಲ್ಲಿ ಕಲ್ಲಂಗಡಿ ಹಣ್ಣಿನಲ್ಲಿ ಮೂಡಿ ಬಂದ ಆದುನಿಕ ಬಸವಣ್ಣ ಸಿದ್ದಗಂಗಾ ಶ್ರೀಗಳ ಭಾವಚಿತ್ರ ನೋಡುಗರ ಗಮನ ಸೆಳೆಯಿತು. ಜೊತೆಗೆ ತರಹೆವಾರಿ ತರಕಾರಿಗಳಲ್ಲಿ ಒಂದು ಕಡೆ ಹುತಾತ್ಮ ಯೋಧರಿಗೆ ಸಲಾಂ ಎನ್ನುತ್ತಿರುವ ದೃಶ್ಯ. ಮೊತ್ತೊಂದು ಕಡೆ ವಿವಿಧ ಹಣ್ಣುಗಳಲ್ಲಿ ಮೂಡಿ ಬಂದಿರುವ ಸಾಧಕರ ಭಾವಚಿತ್ರಗಳು. ಇವುಗಳ ಮುಂದೆ ರೈತರು ಸೆಲ್ಫಿ ತೆಗೆದುಕೊಂಡು ಖುಷಿ ಪಟ್ರು. ಇನ್ನೂ ಸಾಲಬಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಜಿಲ್ಲೆಯ ರೈತರಿಗೆ ಈ ಕಿಸಾನ್ ಸಮ್ಮೇಳನ ಸಂಜೀವಿನಿಯಾಗಲಿದೆ ಎನ್ನುತ್ತಾರೆ ರೈತರು.
ಮೊದಲ ಬಾರಿಗೆ ಗಡಿ ಜಿಲ್ಲೆಯಲ್ಲಿ ಕಿಸಾನ್ ಸಮ್ಮೇಳನ ಹಮ್ಮಿಕೊಂಡಿದಕ್ಕೆ ರೈತರು ಹರ್ಷ ವ್ಯಕ್ತಪಡಿಸಿದರೆ ಮೊತ್ತೊಂದು ಕಡೆ ಈ ಸಮ್ಮೇಳನದ ಕೃಷಿ ವಿದ್ಯಾರ್ಥಿಗಳು ಹುತಾತ್ಮ ಯೋಧರಿಗೆ ದೇಣಿಗೆ ಸಂಗ್ರಹ ಮಾಡಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. ರೈತರು ಕೂಡ ಸ್ವಚ್ಛ ಮನಸ್ಸಿನಿಂದ ಹುತಾತ್ಮ ಯೋಧರಿಗೆ ಸಹಾಯ ಹಸ್ತ ಚಾಚುತ್ತಿದ್ದು ದೇಶಪ್ರೇಮ ತೊರಿದ್ದಾರೆ. ಹಿಂದಳಿದ ಪ್ರದೇಶ ಎಂದು ಹಣೆ ಪಟ್ಟಿ ಹೊಂದಿರುವ ಗಡಿ ಜಿಲ್ಲೆಯಲ್ಲಿ ನಡೆಯತ್ತಿರುವ ಈ ಸಮ್ಮೇಳನ ಜೈ ಜವಾನ್ ಜೈ ಕಿಸಾನ್ ಎಂಬ ವಾತಾವರಣ ನಿರ್ಮಿಸಿತ್ತು.