ಬೀದರ್: ಕೊರೊನಾ ಭೀಕರತೆ ಮುಂದುವರೆದಿದ್ದು, ಜಿಲ್ಲೆಯಲ್ಲಿ ಇಂದು ಮತ್ತೆ ಮೂವರು ಬಲಿಯಾಗಿದ್ದಾರೆ. 98 ಜನರಲ್ಲಿ ಸೋಂಕು ಧೃಡಪಟ್ಟಿದೆ.
56 ವಯಸ್ಸಿನ ಮಹಿಳೆ, 65 ವಯಸ್ಸಿನ ಇಬ್ಬರು ಪುರುಷರು ಆ. 04 ರಂದು ಸಾವನ್ನಪ್ಪಿದ್ದು, ಎಲ್ಲರ ಗಂಟಲು ದ್ರವದ ಮಾದರಿ ಪರಿಕ್ಷೆ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ.
![Three death in Bidar from corona](https://etvbharatimages.akamaized.net/etvbharat/prod-images/kn-bdr-03-06-coronadeathinbidar-7203280-av-01_06082020203219_0608f_1596726139_251.jpg)
ಜಿಲ್ಲೆಯಲ್ಲಿ ಇಂದು 98 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2712ಕ್ಕೆ ಏರಿಕೆಯಾಗಿದೆ. ಇಂದು 97 ಜನರು ಗುಣಮುಖರಾಗಿ ಮನೆಗೆ ವಾಪಸಾಗಿದ್ದು, ಇಲ್ಲಿಯವರೆಗೆ 1805 ಜನರು ಗುಣಮುಖರಾಗಿದ್ದಾರೆ.