ಬೀದರ್: ಮೂವರು ಖದೀಮರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೈಕ್ ಶೋ ರೂಂ ಬಾಗಿಲು ಮುರಿದು ಕಳ್ಳತನ ಮಾಡಿರುವ ಘಟನೆ ನಡೆದಿದ್ದು, ಕಳ್ಳತನದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಜಿಲ್ಲೆಯ ಭಾಲ್ಕಿ ಪಟ್ಟಣದ ಮಹಾಲಕ್ಷ್ಮಿ ಬೈಕ್ ಶೋ ರೂಂಗೆ ನುಗ್ಗಿದ ಮೂವರು ಮುಸುಕುಧಾರಿ ಕಳ್ಳರು, ಕಬ್ಬಿಣ ಸಲಾಕೆಗಳಿಂದ ಬಾಗಿಲು ಮುರಿದು ಡ್ರಾಯರ್ನಲ್ಲಿದ್ದ 25 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ನಿರಂಜನ ಅಷ್ಟೂರೆ ಎಂಬುವರಿಗೆ ಸೇರಿದ ಶೋ ರೂಂ ಇದಾಗಿದ್ದು, ಖದೀಮರು ಕಳ್ಳತನ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಭಾಲ್ಕಿ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.