ಬೀದರ್: ಶ್ರೀಭಾಗ್ಯವಂತಿ ದೇವಾಲಯದ ಹುಂಡಿಯನ್ನು ಧ್ವಂಸಗೊಳಿಸಿ ಹಣವನ್ನು ಕದ್ದೊಯ್ದಿರುವ ಘಟನೆ ಜಿಲ್ಲೆಯ ಹುಮನಾಬಾದ್ ತಾಲೂಕಿನ ಶ್ರೀಕಂಠನಳ್ಳಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಹುಮನಾಬಾದ್ ತಾಲೂಕಿನ ಶ್ರೀಕಂಠನಳ್ಳಿ ಗ್ರಾಮದಲ್ಲಿ ತಡರಾತ್ರಿ ಕಳ್ಳರು ಹೀನ ಕೃತ್ಯವೆಸಗಿ ಪರಾರಿಯಾಗಿದ್ದಾರೆ. ಈ ರೀತಿ ಭಕ್ತರು ಹಾಕಿದ್ದ ಹಣವನ್ನು ಹುಂಡಿ ಒಡೆಯುವ ಮೂಲಕ ಕಳ್ಳರು ಕದ್ದೊಯ್ದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಈಗಾಗಲೇ ಬಗದಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.