ಬೀದರ್ : ಅವಳಿ ಬಾಲಕಿಯರು ಎಸ್ಎಸ್ಎಲ್ಸಿ ಪರಿಕ್ಷೆಯಲ್ಲಿ ಶೇ.100ರಷ್ಟು ಅಂಕಗಳನ್ನು ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ ಅಗ್ರ ಶ್ರೇಣಿಯ ಸ್ಥಾನ ಪಡೆದುಕೊಂಡಿದ್ದಾರೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ತಳವಾಡ ಗ್ರಾಮದ ವಿನಿತಾ ಸಂಗಶೆಟ್ಟಿ ಹಾಗೂ ಪ್ರಕೃತಿ ಸಂಗಶೆಟ್ಟಿ ಎಂಬ ಇಬ್ಬರು ಅವಳಿ ಸಹೋದರಿಯರು 10ನೇ ತರಗತಿ ಪರೀಕ್ಷೆಯಲ್ಲಿ ಒಟ್ಟು 625ಕ್ಕೆ 625 ಅಂಕಗಳನ್ನ ಪಡೆದು ಸಮಾನ ಸಾಧನೆ ಮಾಡಿ ಹುಬ್ಬೇರಿಸುವಂತೆ ಮಾಡಿದ್ದಾರೆ.
ಭಾಲ್ಕಿ ಹಿರೇಮಠ ಸಂಸ್ಥಾನ ಕರಡ್ಯಾಳ ಗ್ರಾಮದ ಶ್ರೀ ಚನ್ನಬಸವೇಶ್ವರ ಗುರುಕುಲ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸಹೋದರಿಯರು, ರಾಜ್ಯದ ಒಟ್ಟು 157 ಟಾಪರ್ ವಿದ್ಯಾರ್ಥಿಗಳಲ್ಲಿ ಇಬ್ಬರು.
2019ರಲ್ಲಿ ಈ ಅವಳಿ ಮಕ್ಕಳ ತಂದೆ ಸಂಗಶೆಟ್ಟಿ ನಿಧನರಾಗಿದ್ದಾರೆ. ನಂತರ ಈ ಮಕ್ಕಳು ಶಾಲೆಯಲ್ಲಿ ಒಂದೇ ಕಡೆ ಕೂತು ಅಭ್ಯಾಸ ಮಾಡುವುದು. ಮನೆಗೆ ಬಂದಾಗಲೂ ಜಂಟಿಯಾಗೇ ಅಧ್ಯಯನ ಮಾಡುವುದು. ಪರೀಕ್ಷಾ ತಯಾರಿ ಕೂಡ ಒಂದಾಗಿ ಮಾಡಿ ಪರೀಕ್ಷೆಯಲ್ಲೂ ಸಮಾನವಾದ ಅಂಕಗಳನ್ನ ಪಡೆದಿರುವುದಕ್ಕೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.