ಬೀದರ್: ಬೀದಿ ನಾಯಿಗಳ ಹಿಂಡು ನಗರದ ವಿವಿಧ ಭಾಗದಲ್ಲಿ 50 ಕ್ಕೂ ಅಧಿಕ ಜನರ ಮೇಲೆ ದಾಳಿ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ನಗರದ ಹಾರುರಗೇರಿ ಕಮಾನ ಬಳಿ 20 ಕ್ಕೂ ಹೆಚ್ಚು ಜನರ ಮೇಲೆ ನಾಯಿ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಳಿಸಿದೆ. ಕಪ್ಪು ಬಣ್ಣದ ಒಂದೇ ನಾಯಿ ಹಲವರ ಮೇಲೆ ದಾಳಿ ಮಾಡಿದ್ದು ಮುಖ, ಕೈ ಹಾಗೂ ಕಾಲುಗಳಿಗೆ ಕಚ್ಚಿದೆ. ಗಾಯಗೊಂಡ ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಏಕ ಕಾಲದಲ್ಲಿ ಹಲವು ನಾಯಿ ಕಡಿತ ಪ್ರಕರಣ ದಾಖಲಾಗಿದ್ದರಿಂದ ವೈದ್ಯಕೀಯ ಸೇವೆ ನೀಡಲು ವಿಳಂಬವಾಗಿದೆ. ಇದು ಸ್ಥಳೀಯರು ಆಕ್ರೋಶಕ್ಕೂ ಕಾರಣವಾಗಿದೆ.
ಓದಿ : ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಸಿದ್ಧವಾದ ಹಳ್ಳಿಹಕ್ಕಿ..!
ನಗರದ ಒಲ್ಡ್ ಸಿಟಿ, ನಯಾ ಕಮಾನ್, ಗಾಂಧಿಗಂಜ್, ವಿದ್ಯಾನಗರ, ಮೈಲೂರ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ತಾರಕಕ್ಕೇರಿದ್ದು ಮಕ್ಕಳು, ಮಹಿಳೆಯರು ವಯೋವೃದ್ಧರು ರಸ್ತೆಗೆ ಸಂಚರಿಸಲು ಭಯ ಪಡುತ್ತಿದ್ದು ನಗರಸಭೆ ಅಧಿಕಾರಿಗಳು ತಕ್ಷಣ ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.